ಹಿಂದೂ ಸಂಪ್ರದಾಯದಲ್ಲಿ ಪವಿತ್ರವಾದ ತುಳಸಿ ಗಿಡವು ಒಣಗದಂತೆ ಕಾಪಾಡಲು ಕೆಲವು ಸರಳ ವಿಧಾನಗಳಿವೆ. ಪ್ರತಿನಿತ್ಯ ನೀರು ಹಾಕದಿರುವುದು, ಹೂವುಗಳನ್ನು ತೆಗೆಯುವುದು, ಮೊಸರು ಮತ್ತು ಅರಿಶಿನದ ಬಳಕೆ ಹಾಗೂ ಬಿರುಬಿಸಿಲಿನಿಂದ ರಕ್ಷಿಸುವ ಮೂಲಕ ತುಳಸಿಯನ್ನು ಸದಾ ಹಸಿರಾಗಿಡಬಹುದು.
ತುಳಸಿ ಗಿಡ ಸಾಮಾನ್ಯವಾಗಿ ಪ್ರತಿಯೊಂದು ಹಿಂದೂ ಮನೆಗಳಲ್ಲಿಯೂ ಇರುತ್ತದೆ. ಹಿಂದೂ ಸಂಪ್ರದಾಯದಲ್ಲಿ ತುಳಸಿಗೆ ವಿಶೇಷ ಸ್ಥಾನಮಾನ ಇದೆ. ಅದನ್ನು ದೇವರೆಂದು ಪ್ರತಿನಿತ್ಯ ಪೂಜಿಸುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ತುಳಸಿ ಗಿಡವನ್ನು ಸದಾ ಆರೈಕೆಮಾಡಲಾಗುತ್ತದೆ. ಆದರೆ, ಕೆಲವೊಂದು ಕಾರಣಗಳಿಂದ ತುಳಸಿ ಒಣಗಿ ಹೋಗಿಬಿಡುತ್ತದೆ. ಇದಕ್ಕೆ ಕಾರಣವೇ ಇರುವುದಿಲ್ಲ. ಹೀಗೆ ತುಳಸಿ ಒಣಗಿದರೆ ಅದು ಅಪಶಕುನ ಎಂದು ಭಾವಿಸುವವರು ಹಲವರು. ಆದ್ದರಿಂದ ತುಳಸಿ ಒಣಗಿದರೆ ತುಂಬಾ ನೋವು ಅನುಭವಿಸುತ್ತಾರೆ. ಸದಾ ತುಳಸಿ ನಳನಳಿಸುತ್ತಿರಬೇಕು ಎಂದರೆ ಏನು ಮಾಡಬೇಕು? ಇದಕ್ಕೆ ಇಲ್ಲಿ ಐದು ಸಿಂಪಲ್ ಪರಿಹಾರ ನೀಡಲಾಗಿದೆ.
26
ಪ್ರತಿನಿತ್ಯ ನೀರು ಬೇಡ
ತುಳಸಿ ಗಿಡಕ್ಕೆ ಅದರಲ್ಲಿಯೂ ಕುಂಡದಲ್ಲಿ ಇರುವ ತುಳಸಿಗೆ ಪ್ರತಿನಿತ್ಯ ಬುಡಕ್ಕೆ ನೀರು ಹಾಕಬೇಡಿ. ಇದರಿಂದ ಬುಡ ಕೊಳೆಯುವ ಸಾಧ್ಯತೆಯೇ ಇದೆ. ಆದ್ದರಿಂದ ಎರಡು ದಿನಕ್ಕೆ ಒಮ್ಮೆ ಸ್ಟ್ರೇ ಮಾಡುತ್ತಿದ್ದರೆ ತುಳಸಿ ಚೆನ್ನಾಗಿ ಇರುತ್ತದೆ. ಇದೇ ಕಾರಣಕ್ಕೆ ಸಾಮಾನ್ಯವಾಗಿ ಭಾನುವಾರ ಮತ್ತು ಏಕಾದಶಿಯಂದು ತುಳಸಿಗೆ ನೀರು ನಿಷಿದ್ಧ ಎಂದೂ ಹೇಳಲಾಗುತ್ತದೆ.
36
ಹೂವನ್ನು ಕೂಡಲೇ ತೆಗೆಯಿರಿ
ತುಳಸಿಗೆ ಬಿಡುವ ಹೂವನ್ನು (ಕಸ್ತ್ರ) ಕೂಡಲೇ ತೆಗೆಯಬೇಕು. ಇಲ್ಲದಿದ್ದರೆ ಇದು ಗಿಡ ಒಣಗಲು ಕಾರಣ ಆಗಬಹುದು. ಆದ್ದರಿಂದ ಹೂವನ್ನು ಬೆರಳಿನಿಂದ ಕಿತ್ತು ತೆಗೆಯಿರಿ. ಅದನ್ನು ಉಗುರಿನಿಂದ ಚಿವುಟಿ ತೆಗೆಯುವುದು ಅಪರಾಧ.
ಒಂದು ಕಪ್ ಮೊಸರನ್ನು ನೀರಿನಲ್ಲಿ ಕಲಸಿ ಅದನ್ನು ಬುಡಕ್ಕೆ ಆಗಾಗ್ಗೆ ಹಾಕಿ. ಇದರಿಂದ ತುಳಸಿ ಗಿಡ ಮಾತ್ರವಲ್ಲದೇ ಎಲೆಗಳು ಕೂಡ ಸದಾ ನಳನಳಿಸುತ್ತಲೇ ಇರುತ್ತವೆ.
56
ಅರಿಶಿಣದ ಪುಡಿ ಮ್ಯಾಜಿಕ್
ಒಂದು ಗ್ಲಾಸ್ ನೀರಿನಲ್ಲಿ ಅರಿಶಿಣದ ಪುಡಿಯನ್ನು ಸೇರಿಸಿ ಆಗಾಗ್ಗೆ ತುಳಸಿಯ ಬುಡಕ್ಕೆ ಹಾಕುತ್ತಿದ್ದರೆ,, ಗಿಡಕ್ಕೆ ಏನಾದರೂ ಫಂಗಸ್ ಬಂದಿದ್ದರೆ ಅದು ತೊಲಗಿ ಗಿಡ ಕೊಳೆಯುವುದಿಲ್ಲ, ಬಾಡುವುದೂ ಇಲ್ಲ.
66
ಬಿರುಬಿಸಿಲಿನಲ್ಲಿ ಇಡಬೇಡಿ
ತುಳಸಿ ಗಿಡವನ್ನು ಬಿರುಬಿಸಿಲಿನಲ್ಲಿ ಇಡಬೇಡಿ. ಅದಕ್ಕೆ ಬೆಳಗಿನ ಬೆಚ್ಚಗಿನ ಬಿಸಿಲೇ ಸಾಕಾಗುತ್ತದೆ. ಬಿರು ಬಿಸಿಲಿನಲ್ಲಿ ಇಟ್ಟರೆ ಎಲೆಗಳು ಬಾಡಿ ಹೋಗುತ್ತವೆ. ಇದರಿಂದ ಎಲೆಗಳು ಕೂಡ ಸದಾ ಘಮಘಮಿಸುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.