ವೀಕೆಂಡ್ ಬರ್ತಿದ್ದಂತೆ ಜನರು ಸೋಮಾರಿಗಳಾಗ್ತಾರೆ. ನಿದ್ರೆ ಮಾಡ್ತಾ, ಟಿವಿ ನೋಡಾ ಟೈಂ ಹಾಳು ಮಾಡ್ತಾರೆ. ಈ ಸೋಮಾರಿತನದಿಂದ ವೀಕೆಂಡ್ ನಿಮಗೆ ಹಿತ ಎನ್ನಿಸಬಹುದು. ಆದ್ರೆ ಸೋಮವಾರ ಬರ್ತಿದ್ದಂತೆ ತಲೆನೋವು ಶುರುವಾಗುತ್ತೆ. ವೀಕೆಂಡ್ ನಲ್ಲಿ ಕೆಲ ಪ್ಲಾನ್ ಮಾಡಿದ್ರೆ ವೀಕ್ ಪೂರ್ತಿ ಟೆನ್ಷನ್ ಇಲ್ದೆ ಕಳೆಯಬಹುದು.
ವೀಕೆಂಡ್ ನಲ್ಲಿ ಸಮಯ ಹಾಳು ಮಾಡುವ ಬದಲು ನಿಮ್ಮ ಕೆಲ ಕೆಲ್ಸವನ್ನು ಮಾಡಿಕೊಳ್ಳಬೇಕು. ವೀಕೆಂಡ್ನಲ್ಲಿ ಬಟ್ಟೆ ತೊಳೆಯುವುದರ ಜೊತೆಗೆ ಮುಂದಿನ ವಾರ ಯಾವ ದಿನ ಯಾವ ಬಟ್ಟೆ ಧರಿಸಬೇಕು ಅನ್ನೋದನ್ನೂ ಮೊದಲೇ ನಿರ್ಧರಿಸಿಕೊಳ್ಳಿ. ಸೋಮವಾರದಿಂದ ಶುಕ್ರವಾರದವರೆಗೆ ಬೇಕಾಗುವ ಬಟ್ಟೆಗಳನ್ನು ಪ್ರತ್ಯೇಕವಾಗಿ ಇಟ್ಟುಕೊಂಡರೆ, ಬೆಳಗ್ಗೆ ಸಮಯ ಉಳಿಯುತ್ತದೆ. ಪ್ರತಿದಿನ ಇವತ್ತು ಏನು ಹಾಕಿಕೊಳ್ಳಲಿ ಅನ್ನೋ ಗೊಂದಲ ಇರೋದಿಲ್ಲ.
25
ಫ್ರಿಜ್ ಒಮ್ಮೆ ಚೆಕ್ ಮಾಡಿ
ವೀಕೆಂಡ್ನಲ್ಲಿ ತರಕಾರಿ, ಹಣ್ಣುಗಳನ್ನು ಖರೀದಿಸುವ ಮೊದಲು ಫ್ರಿಜ್ನಲ್ಲಿರುವ ವಸ್ತುಗಳನ್ನು ಒಮ್ಮೆ ಪರಿಶೀಲಿಸಿ. ಹಾಳಾಗುವ ಹಂತದಲ್ಲಿರುವ ಹಣ್ಣು, ತರಕಾರಿ, ಮೊಸರು ಅಥವಾ ಹಾಲನ್ನು ಮೊದಲು ಬಳಸುವಂತೆ ಮುಂದೆ ಇಡಿ. ಹೊಸದಾಗಿ ತಂದ ಹಸಿರು ತರಕಾರಿಗಳನ್ನು ಸ್ವಚ್ಛಗೊಳಿಸಿ ಸರಿಯಾಗಿ ಸಂಗ್ರಹಿಸಿಟ್ಟರೆ ವಾರದ ಕೆಲಸ ಸುಲಭವಾಗುತ್ತದೆ.
35
ಬ್ಯಾಗ್ ಮತ್ತು ಪರ್ಸ್ ಕ್ಲೀನ್ ಮಾಡಿ
ಬ್ಯಾಗ್ನಲ್ಲಿ ಬಿಲ್, ರಸೀದಿ, ಟಿಶ್ಯೂ, ರ್ಯಾಪರ್ ಹೀಗೆ ಬೇಡದ ವಸ್ತುಗಳು ತುಂಬಿಕೊಂಡಿರುತ್ತವೆ. ವೀಕೆಂಡ್ನಲ್ಲಿ ಬ್ಯಾಗ್ ಮತ್ತು ಪರ್ಸ್ ಖಾಲಿ ಮಾಡಿ, ಬೇಕಾದ ಕಾರ್ಡ್, ಕೀ, ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಚಿಕ್ಕ ಪಾಕೆಟ್ಗಳನ್ನೂ ಒಮ್ಮೆ ಚೆಕ್ ಮಾಡಿ.
ಟೂತ್ಪೇಸ್ಟ್, ಶಾಂಪೂ, ಸೋಪ್, ಡಿಟರ್ಜೆಂಟ್, ಔಷಧಿ ಸೇರಿದಂತೆ ಪ್ರತಿದಿನ ಬೇಕಾಗುವ ವಸ್ತುಗಳು ಎಷ್ಟು ಉಳಿದಿವೆ ಎಂದು ಚೆಕ್ ಮಾಡಿ. ಇನ್ನೂ ಕೆಲವೇ ದಿನಗಳಲ್ಲಿ ಮುಗಿಯುವ ವಸ್ತುಗಳನ್ನು ಶಾಪಿಂಗ್ ಲಿಸ್ಟ್ಗೆ ಸೇರಿಸಿ. ಇದರಿಂದ ವಾರದ ಮಧ್ಯದಲ್ಲಿ ಅಂಗಡಿಗೆ ಓಡಾಡುವ ಅಗತ್ಯ ಕಡಿಮೆಯಾಗುತ್ತದೆ.
55
ಮುಂದಿನ ವಾರದ ಕೆಲಸಗಳನ್ನು ಪ್ಲಾನ್ ಮಾಡಿ
ಅಪಾಯಿಂಟ್ಮೆಂಟ್, ಬಿಲ್ ಪಾವತಿ, ಮೀಟಿಂಗ್, ಮಕ್ಕಳ ಶಾಲೆಯ ಕೆಲಸ ಅಥವಾ ಬೇರೆ ಯಾವುದೇ ಮುಖ್ಯ ಕೆಲಸಗಳಿದ್ದರೆ ಅವುಗಳನ್ನು ಒಂದೇ ಕಡೆ ಬರೆದುಕೊಳ್ಳಿ. ವಿದ್ಯಾರ್ಥಿಗಳಾದರೆ ಮುಂದಿನ ವಾರ ಓದಬೇಕಾದ ವಿಷಯಗಳನ್ನೂ ಲಿಸ್ಟ್ ಮಾಡಿಕೊಳ್ಳಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.