ಮೊಬೈಲ್ ಚಾರ್ಜ್ ಮಾಡುವಾಗ ಈ 3 ತಪ್ಪು ಮಾಡ್ತಿದ್ದೀರಾ? ಫೋನ್ ಬ್ಲಾಸ್ಟ್ ಆಗಬಹುದು ಎಚ್ಚರ!

Published : Sep 26, 2026, 05:01 PM IST

Phone charging mistakes: ದಿನವೂ ಮೊಬೈಲ್ ಚಾರ್ಜ್ ಮಾಡುವಾಗ ನೀವು ಈ 3 ಸಾಮಾನ್ಯ ತಪ್ಪುಗಳನ್ನು ಮಾಡ್ತಿದ್ದೀರಾ? ಹಾಗಾದರೆ ಹುಷಾರ್! ನಿಮ್ಮ ಈ ಸಣ್ಣ ಅಜಾಗರೂಕತೆ ಕೇವಲ ಫೋನ್ ಬ್ಯಾಟರಿ ಹಾಳು ಮಾಡುವುದು ಮಾತ್ರವಲ್ಲದೆ, ಮೊಬೈಲ್ ಬ್ಲಾಸ್ಟ್ ಆಗುವಂತಹ ಅಪಾಯಕ್ಕೂ ಕಾರಣವಾಗಬಹುದು.

PREV
15
ಫೋನ್ ಸ್ಫೋಟಗೊಳ್ಳುವ ಸಾಧ್ಯತೆ

ಫೋನ್ ಸ್ಫೋಟಗೊಳ್ಳುವ ಸಾಧ್ಯತೆ
ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ದಿನವಿಡೀ ಮೊಬೈಲ್ ಬಳಸುವ ನಾವು, ಅದನ್ನು ಚಾರ್ಜ್ ಮಾಡುವ ವಿಚಾರದಲ್ಲಿ ಹಲವು ಬಾರಿ ಅಜಾಗರೂಕತೆ ತೋರುತ್ತೇವೆ. ಆದರೆ, ಚಾರ್ಜಿಂಗ್ ವೇಳೆ ಮಾಡುವ ಸಣ್ಣಪುಟ್ಟ ತಪ್ಪುಗಳು ಕೇವಲ ಬ್ಯಾಟರಿ ಬಾಳಿಕೆಯನ್ನು ಹಾಳು ಮಾಡುವುದು ಮಾತ್ರವಲ್ಲದೆ, ಕೆಲವೊಮ್ಮೆ ಫೋನ್ ಸ್ಫೋಟಗೊಂಡು (Blast) ಪ್ರಾಣಾಪಾಯ ತಂದೊಡ್ಡುವ ಸಾಧ್ಯತೆಯೂ ಇರುತ್ತದೆ.

ಆದ್ದರಿಂದ ಮೊಬೈಲ್ ಚಾರ್ಜ್ ಮಾಡುವಾಗ ಪ್ರತಿಯೊಬ್ಬರೂ ತಪ್ಪದೇ ಗಮನಿಸಬೇಕಾದ ಮತ್ತು ಎಂದಿಗೂ ಮಾಡಬಾರದ 3 ಪ್ರಮುಖ ತಪ್ಪುಗಳ ವಿವರ ಇಲ್ಲಿದೆ..

25
ಎಲ್ಲಾ ಆ್ಯಪ್‌ಗಳನ್ನು ಕ್ಲೋಸ್ (Close) ಮಾಡಿ

ಎಲ್ಲಾ ಆ್ಯಪ್‌ಗಳನ್ನು ಕ್ಲೋಸ್ (Close) ಮಾಡಿ
ಹೆಚ್ಚಿನ ಜನರು ಫೋನ್ ಚಾರ್ಜ್‌ಗೆ ಹಾಕುವಾಗ ಬ್ಯಾಕ್‌ಗ್ರೌಂಡ್‌ನಲ್ಲಿ ರನ್ ಆಗುತ್ತಿರುವ ಆ್ಯಪ್‌ಗಳನ್ನು ಹಾಗೆಯೇ ಬಿಟ್ಟಿರುತ್ತಾರೆ. ಇದು ತಪ್ಪು. ಫೋನ್ ಚಾರ್ಜ್ ಮಾಡುವ ಮುನ್ನ ಬ್ಯಾಕ್‌ಗ್ರೌಂಡ್‌ನಲ್ಲಿ ತೆರೆದಿರುವ ಎಲ್ಲಾ ಆ್ಯಪ್‌ಗಳನ್ನು ಕ್ಲೋಸ್ (Close) ಮಾಡಬೇಕು.

ವೈ-ಫೈ (Wi-Fi), ಬ್ಲೂಟೂತ್ (Bluetooth), ಜಿಪಿಎಸ್ (Location) ಮತ್ತು ಮೊಬೈಲ್ ಡೇಟಾವನ್ನು ಕಡ್ಡಾಯವಾಗಿ ಆಫ್ ಮಾಡಬೇಕು.

ಇವುಗಳು ಆನ್ ಇದ್ದರೆ, ಚಾರ್ಜ್ ಆಗುತ್ತಿರುವ ವೇಳೆಯಲ್ಲೂ ಪ್ರೊಸೆಸರ್ ಕೆಲಸ ಮಾಡುತ್ತಿರುತ್ತದೆ. ಇದರಿಂದ ಚಾರ್ಜಿಂಗ್ ಪ್ರಕ್ರಿಯೆ ನಿಧಾನವಾಗುವುದಲ್ಲದೆ ಬ್ಯಾಟರಿಯ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ.

35
ಬ್ಯಾಕ್ ಕವರ್ ತೆಗೆಯದೆ ಚಾರ್ಜ್ ಮಾಡುವುದು

ಬ್ಯಾಕ್ ಕವರ್ ತೆಗೆಯದೆ ಚಾರ್ಜ್ ಮಾಡುವುದು
ಫೋನ್ ಕೆಳಗೆ ಬಿದ್ದು ಹಾಳಾಗಬಾರದು ಎಂದು ಎಲ್ಲರೂ ದಪ್ಪನೆಯ ಬ್ಯಾಕ್ ಕವರ್ (Phone Case) ಬಳಸುತ್ತಾರೆ. ಆದರೆ ಚಾರ್ಜ್ ಮಾಡುವಾಗ ಈ ಕವರ್ ತೆಗೆಯುವುದು ಅತ್ಯಂತ ಮುಖ್ಯ.

ಮೊಬೈಲ್ ಚಾರ್ಜ್ ಆಗುವಾಗ ಬ್ಯಾಟರಿಯಿಂದ ಸಹಜವಾಗಿಯೇ ಶಾಖ (Heat) ಉತ್ಪತ್ತಿಯಾಗುತ್ತದೆ. ಫೋನ್‌ಗೆ ಬ್ಯಾಕ್ ಕವರ್ ಇದ್ದರೆ ಆ ಶಾಖ ಹೊರಹೋಗಲು ಸಾಧ್ಯವಾಗದೆ ಒಳಗೆಯೇ ಉಳಿದುಕೊಂಡು ಫೋನ್ ಅತಿಯಾಗಿ ಬಿಸಿಯಾಗುತ್ತದೆ (Overheating).

ಆದ್ದರಿಂದ ಚಾರ್ಜ್ ಮಾಡುವ ಮುನ್ನ ಕವರ್ ತೆಗೆದಿಟ್ಟರೆ ಶಾಖ ಸುಲಭವಾಗಿ ಹೊರಹೋಗಿ, ಫೋನ್ ಸರಾಗವಾಗಿ ಮತ್ತು ವೇಗವಾಗಿ ಚಾರ್ಜ್ ಆಗುತ್ತದೆ.

45
ಚಾರ್ಜಿಂಗ್‌ನಲ್ಲಿದ್ದಾಗ ಫೋನ್ ಬಳಸುವುದು

ಚಾರ್ಜಿಂಗ್‌ನಲ್ಲಿದ್ದಾಗ ಫೋನ್ ಬಳಸುವುದು
ಇದು ಅನೇಕರಿಗೆ ಇರುವ ಅತ್ಯಂತ ಕೆಟ್ಟ ಅಭ್ಯಾಸ. ಫೋನ್ ಚಾರ್ಜ್ ಆಗುತ್ತಿರುವಾಗಲೇ ಗೇಮ್ ಆಡುವುದು, ರೀಲ್ಸ್ ನೋಡುವುದು ಅಥವಾ ಕರೆಗಳಲ್ಲಿ ಮಾತನಾಡುವುದನ್ನು ಎಂದಿಗೂ ಮಾಡಬಾರದು.

ಚಾರ್ಜ್ ಆಗುವಾಗ ಬ್ಯಾಟರಿ ಈಗಾಗಲೇ ಬಿಸಿಯಾಗಿರುತ್ತದೆ. ಆ ಸಮಯದಲ್ಲಿ ಫೋನ್ ಬಳಸಿದರೆ ಪ್ರೊಸೆಸರ್ ಮತ್ತು ಬ್ಯಾಟರಿ ಎರಡರ ಮೇಲೂ ಭಾರೀ ಒತ್ತಡ ಬಿದ್ದು ತಾಪಮಾನ ತೀವ್ರವಾಗಿ ಏರುತ್ತದೆ.

ಇದರಿಂದ ಬ್ಯಾಟರಿ ಊದಿಕೊಳ್ಳುವುದು, ಶಾರ್ಟ್ ಸರ್ಕ್ಯೂಟ್ ಆಗುವುದು ಅಥವಾ ಫೋನ್ ಬ್ಲಾಸ್ಟ್ (ಸ್ಫೋಟ) ಆಗುವ ಸಾಧ್ಯತೆ ದಟ್ಟವಾಗಿರುತ್ತದೆ.

55
ಸಲಹೆ

ಸಲಹೆ
ನಿಮ್ಮ ಸ್ಮಾರ್ಟ್‌ಫೋನ್ ದೀರ್ಘಕಾಲ ಬಾಳಿಕೆ ಬರಬೇಕೆಂದರೆ ಮತ್ತು ಯಾವುದೇ ಅನಾಹುತಗಳು ಸಂಭವಿಸದಂತೆ ಸುರಕ್ಷಿತವಾಗಿರಬೇಕೆಂದರೆ, ಇನ್ಮುಂದೆ ಫೋನ್ ಚಾರ್ಜ್ ಮಾಡುವಾಗ ಈ 3 ನಿಯಮಗಳನ್ನು ತಪ್ಪದೇ ಪಾಲಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories