ಜೇಬು/ಬ್ಯಾಗ್‌ನಲ್ಲಿ ಇಯರ್‌ಫೋನ್ ವೈಯರ್ ಗಂಟಾಗದಂತೆ ಇಟ್ಟಿಕೊಳ್ಳುವ ಸುಲಭ ಉಪಾಯಗಳು!

Published : Sep 26, 2026, 03:49 PM IST

ಇಯರ್‌ಫೋನ್ ವೈಯರ್ ಜೇಬಿನಲ್ಲಿ ಗಂಟಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ತಪ್ಪಿಸಲು ಕೆಳಗಿನ ವಿಧಾನಗಳನ್ನು ಅನುಸರಿಸಿ. ಈ ರೀತಿ ಮಾಡೋದರಿಂದ ಇಯರ್‌ಫೋನ್ ಕೇಬಲ್ ಸಿಕ್ಕು ಬೀಳೋದು ತಪ್ಪಲಿದೆ. ಹಾಗೆಯೇ ಸಿಕ್ಕು ಬಿಡಿಸುವ ಕಿರಿಕಿರಿಯನ್ನು ತಪ್ಪಿಸಬಹುದು.

PREV
15
ಇಯರ್‌ಫೋನ್‌ ವೈಯರ್‌

ಇಂದು ಮಾರುಕಟ್ಟೆಗೆ Bluetooth, earpods ಬಂದಿದ್ರೂ ಬಹುತೇಕರು ಇಯರ್‌ಫೋನ್‌ (Earphone) ಬಳಕೆ ಮಾಡುತ್ತಾರೆ. ಆದ್ರೆ ಈ ಇಯರ್‌ಫೋನ್‌ ಜೊತೆಗಿನ ವೈಯರ್‌ ಬಳಸುವಾಗ ದೊಡ್ಡ ಸಮಸ್ಯೆಯೊಂದು ಎದುರಾಗುತ್ತದೆ. ಜೇಬು ಅಥವಾ ಬ್ಯಾಗ್‌ನಿಂದ ಇಯರ್‌ಫೋನ್ ತೆಗೆದ್ರೆ, ಇದರ ವೈಯರ್ ಗಂಟುಗಳಲ್ಲಿ ಸಿಲುಕಿಕೊಂಡಿರುತ್ತದೆ. ಈ ಗಂಟಿನ ತೊಡಕು ಬಿಡಿಸೋದು ಕಷ್ಟಕರ ಕೆಲಸವಾಗುತ್ತದೆ. ಈ ಲೇಖನ ಇಯರ್‌ಫೋನ್ ವೈಯರ್ ಗಂಟು ಅಥವಾ ಸಿಕ್ಕು ಹಾಕಿಕೊಳ್ಳದಂತೆ ಜೇಬಿನಲ್ಲಿ ಹೇಗಿಟ್ಟುಕೊಳ್ಳಬೇಕು ಎಂಬುದರ ಮಾಹಿತಿಯನ್ನು ಹೊಂದಿದೆ.

25
ಸಲಹೆ 1

ಇಯರ್‌ಫೋನ್ ವೈಯರ್‌ನ್ನು ಎರಡು ಬೆರಳುಗಳಲ್ಲಿ ಹಿಡಿದು 8ರ ಶೇಪ್‌ನಲ್ಲಿ ಸುತ್ತಿಕೊಳ್ಳಿ. ನಂತರ ಮಧ್ಯಭಾಗದಲ್ಲಿ ಸಣ್ಣ ಅಥವಾ ಎಳೆಯ ತಂತಿಯಿಂದ ವೈಯರ್‌ನ್ನು ಕಟ್ಟಿಕೊಳ್ಳಬೇಕು. ಈ ರೀತಿ ಮಾಡೋದರಿಂದ ವೈಯರ್ ಗಂಟು ಹಾಕಿಕೊಳ್ಳುವುದಿಲ್ಲ. ಬೇಕು ಅಂದಾಗ ಸುಲಭವಾಗಿ ಇಯರ್‌ಫೋನ್ ಬಳಕೆ ಮಾಡಬಹುದು.

35
ಸಲಹೆ 2

ಇಯರ್‌ಫೋನ್‌ನನ್ನ ಕೈಗೆ ಬ್ಯಾಂಡ್‌ ಕಟ್ಟುವ ರೀತಿಯಲ್ಲಿ ಸುತ್ತಿಕೊಳ್ಳಬೇಕು. ಕೊನೆಗೆ ಮೇಲೆ ಹೇಳಿದಂತೆ ಎಳೆಯ ದಾರ ಅಥವಾ ರಬ್ಬರ್ ಬ್ಯಾಂಡ್‌ನಿಂದ ವೈಯರ್‌ ಕಟ್ಟಿಕೊಳ್ಳಿ. ಈ ಉಪಾಯ ಸಹಾಯ ಇಯರ್‌ಫೋನ್ ಗಂಟು ಆಗೋದನ್ನು ತಪ್ಪಿಸುತ್ತದೆ.ನಿಮ್ಮ ಇಯರ್‌ಫೋನಿನ ವೈಯರ್ ಹೆಚ್ಚು ಉದ್ದವಾಗಿದ್ರೆ ಬಳಕೆಗೆ ಬೇಕಾಗುವಷ್ಟು ಬಿಟ್ಟು, ಇನ್ನುಳಿದ ಭಾಗವನ್ನು ರಬ್ಬರ್ ಬ್ಯಾಂಡ್‌ನಿಂದ ಸುತ್ತಿಕೊಳ್ಳಿ.

45
ಸಲಹೆ 3

ನಮ್ಮ ಬಳಿ ರಬ್ಬರ್ ಬ್ಯಾಂಡ್ ಅಥವಾ ದಾರ ಅಥವಾ ತಂತಿ ಇಲ್ಲದಿದ್ರೆ ವೈಯರ್‌ನ್ನು ಮೊಬೈಲ್‌ಗೆ ಸುತ್ತಿಕೊಳ್ಳಿ. ಈ ಸಲಹೆ ಅನುಸರಿಸುವಾಗ ವೈಯರ್‌ನ್ನು ಬಿಗಿಯಾಗಿ ಸುತ್ತಬೇಡಿ. ಇಲ್ಲವಾದ್ರೆ ವೈಯರ್ ಹಾಳಾಗುವ ಸಾಧ್ಯತೆ ಅಧಿಕವಾಗಿರುತ್ತದೆ. ಹಾಗಾಗಿ ನಿಧಾನವಾಗಿ ಮೊಬೈಲ್‌ಗೆ ಇಯರ್‌ಫೋನ್ ಸುತ್ತಿಕೊಳ್ಳಿ.

55
ಸಲಹೆ 4

ಸಾಮಾನ್ಯವಾಗಿ ಆಫೀಸ್‌ಗಳಲ್ಲಿ ಪ್ರಮುಖ ದಾಖಲೆಗಳನ್ನು ಒಂದೆಡೆ ಫೈಲ್ ಮಾಡಲು ಬೈಂಡರ್ ಕ್ಲಿಪ್‌ಗಳನ್ನು ಬಳಕೆ ಮಾಡಲಾಗುತ್ತದೆ. ನೀವು ಸಹ ದೂರದ ಪ್ರಯಾಣದ ಸಂದರ್ಭದಲ್ಲಿ ಇಯರ್‌ ಫೋನ್ ವೈಯರ್ ಸುತ್ತಲೂ ಬೈಂಡರ್ ಕ್ಲಿಪ್‌ ಬಳಸಿ. ಇದು ನಿಮ್ಮ ಸಮಸ್ಯೆಗೆ ಅತ್ಯಂತ ಸುಲಭದ ಉಪಾಯವಾಗಲಿದೆ. ನಿಮ್ಮಲ್ಲಿ ಬಳಕೆಯಾಗದ ಅಥವಾ ಹಳೆಯ ಎಟಿಎಂ ಕಾರ್ಡ್‌ಗಳಿದ್ರೆ ಅವುಗಳನ್ನು ಅರ್ಧ ತುಂಡು ಮಾಡಿಕೊಂಡು ಇಯರ್‌ ಫೋನ್‌ ಸುತ್ತಲು ಬಳಸಿಕೊಳ್ಳಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories