ಭಾರತದ ಅತೀ ಶ್ರೀಮಂತ ವ್ಯಕ್ತಿ ಬಿಲಿಯನೇರ್ ಮುಕೇಶ್ ಅಂಬಾನಿ ಕಿರಿಯ ಮಗ ಅನಂತ್ ಅಂಬಾನಿ ನಿಶ್ಚಿತಾರ್ಥ ರಾಧಿಕಾ ಮರ್ಚೆಂಟ್ ಜೊತೆ ನೆರವೇರಿದೆ. ಮಾರ್ಚ್‌ನಲ್ಲಿ ಬಿಲಿಯನೇರ್ ಜೋಡಿಯ ಪ್ರಿ-ವೆಡ್ಡಿಂಗ್ ಇವೆಂಟ್ ಸಹ ಗುಜರಾತ್‌ನ ಜಾಮ್ನಾ ನಗರದಲ್ಲಿ ಅದ್ಧೂರಿಯಾಗಿ ನಡೀತು. ಆದ್ರೆ ಮುಕೇಶ್ ಅಂಬಾನಿ ಸಂಬಂಧಿಕರಾಗಲಿರುವ ರಾಧಿಕಾ ಮರ್ಚೆಂಟ್ ಫ್ಯಾಮಿಲಿ ಬಗ್ಗೆ ನಿಮ್ಗೆ ಗೊತ್ತಿದ್ಯಾ?
ರಾಧಿಕಾ ಮರ್ಚೆಂಟ್, ಉದ್ಯಮಿ ವೀರೇನ್ ಮರ್ಚೆಂಟ್ ಮಗಳು. ವೀರೆನ್ ಮರ್ಚೆಂಟ್ ಫಾರ್ಮಾ ಉದ್ಯಮದಲ್ಲಿ ಜಾಗತಿಕ ಗುತ್ತಿಗೆ ತಯಾರಕರಾದ ಎನ್ಕೋರ್ ಹೆಲ್ತ್‌ಕೇರ್‌ನ ಸಿಇಒ ಮತ್ತು ಉಪಾಧ್ಯಕ್ಷರಾಗಿದ್ದಾರೆ.
ಶೈಲಾ ಮರ್ಚೆಂಟ್ ಯಶಸ್ವಿ ಉದ್ಯಮಿಯಾಗಿದ್ದು, ಅವರು ಎನ್‌ಕೋರ್ ಹೆಲ್ತ್‌ಕೇರ್ ಅನ್ನು ಸಹ-ಸ್ಥಾಪಿಸಿದ್ದಾರೆ ಮತ್ತು ಈಗ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ವೀರೆನ್ ಮರ್ಚೆಂಟ್ ಭಾರತೀಯ ಬಿಸಿನೆಸ್ ವರ್ಲ್ಡ್‌ನಲ್ಲಿ ಪ್ರಮುಖ ಬಿಸಿನೆಸ್ ಮೆನ್ ಆಗಿದ್ದು, ವಿವಿಧ ವ್ಯಾಪಾರ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಮುಖ್ಯವಾಗಿ ಹಣಕಾಸು ಮತ್ತು ಹೂಡಿಕೆಯ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಕಠಿಣ ಪರಿಶ್ರಮದಿಂದ ಎನ್ಕೋರ್ ಹೆಲ್ತ್‌ಕೇರ್ ಅನ್ನು ಅತಿದೊಡ್ಡ ಆರೋಗ್ಯ ಉದ್ಯಮಗಳಲ್ಲಿ ಒಂದನ್ನಾಗಿ ಮಾಡಿದ್ದಾರೆ.
ಬಿಲಿಯನೇರ್ ಆಗಿದ್ದರೂ ವೀರೆನ್ ಮರ್ಚೆಂಟ್ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುವುದಿಲ್ಲ. ವೀರೆನ್ ಆಸ್ತಿಯ ಒಟ್ಟು ಮೌಲ್ಯವು 755 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಫೋರ್ಬ್ಸ್ ಪ್ರಕಾರ, ಎನ್‌ಕೋರ್ ಬ್ಯುಸಿನೆಸ್ ಸೆಂಟರ್ ಪ್ರೈವೇಟ್ ಲಿಮಿಟೆಡ್, ಎನ್‌ಕೋರ್ ನ್ಯಾಚುರಲ್ ಪಾಲಿಮರ್ಸ್ ಪ್ರೈವೇಟ್ ಲಿಮಿಟೆಡ್, ZYG ಫಾರ್ಮಾ ಪ್ರೈವೇಟ್ ಲಿಮಿಟೆಡ್, ಸಾಯಿ ದರ್ಶನ್ ಬ್ಯುಸಿನೆಸ್ ಸೆಂಟರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಎನ್‌ಕೋರ್ ಪಾಲಿಫ್ರಾಕ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಭಾರತದ ಹಲವು ಪ್ರಮುಖ ಕಂಪನಿಗಳ ನಿರ್ದೇಶಕರೂ ಆಗಿದ್ದಾರೆ.
ಫೋರ್ಬ್ಸ್ ಪ್ರಕಾರ, ರಾಧಿಕಾ ಅವರ ತಾಯಿ ಶೈಲಾ ಮರ್ಚೆಂಟ್ ಅವರು ಅಥರ್ವ ಇಂಪೆಕ್ಸ್ ಪ್ರೈವೇಟ್ ಲಿಮಿಟೆಡ್, ಹವೇಲಿ ಟ್ರೇಡರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸ್ವಸ್ತಿಕ್ ಎಕ್ಸಿಮ್ ಪ್ರೈವೇಟ್ ಲಿಮಿಟೆಡ್‌ನಂತಹ ಹಲವಾರು ಇತರ ಕಂಪನಿಗಳಲ್ಲಿ ನಿರ್ದೇಶಕರ ಸ್ಥಾನಗಳನ್ನು ಹೊಂದಿದ್ದಾರೆ.
ಇನ್ನು ರಾಧಿಕಾ ಮರ್ಚೆಂಟ್, ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಎನ್‌ಕೋರ್ ಹೆಲ್ತ್‌ಕೇರ್ (ಇಎಚ್‌ಪಿಎಲ್) ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದಾರೆ.