ಗಾಜಿನ ಟಿಫಿನ್ ಬಾಕ್ಸ್‌ಗಳು: ಇವು ಮೈಕ್ರೋವೇವ್ ಮತ್ತು ಡಿಶ್‌ವಾಷರ್‌ಗೆ ಸೂಕ್ತ. ಆದರೆ ಇವುಗಳನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ಅವು ಸುಲಭವಾಗಿ ಒಡೆಯಬಹುದು.
ಸೆರಾಮಿಕ್ ಟಿಫಿನ್ ಬಾಕ್ಸ್‌ಗಳು: ಗಾಜಿನಂತೆ, ಸೆರಾಮಿಕ್ ಕೂಡ ಬಿಸಿ ಆಹಾರಕ್ಕೆ ಸುರಕ್ಷಿತ. ಇವು ರಾಸಾಯನಿಕ ಮುಕ್ತ. ಆಹಾರದ ರುಚಿ ಅಥವಾ ಗುಣಮಟ್ಟದ ಮೇಲೆ ಪರಿಣಾಮ ಬೀರುವುದಿಲ್ಲ.
ಸಿಲಿಕಾನ್ ಟಿಫಿನ್ ಬಾಕ್ಸ್‌ಗಳು: ಸಿಲಿಕಾನ್ ಟಿಫಿನ್ ಬಾಕ್ಸ್‌ಗಳು ಸಹ ಸುರಕ್ಷಿತ ಮತ್ತು ಬಲವಾಗಿರುತ್ತವೆ. ಆದರೆ ಯಾವಾಗಲೂ ಫುಡ್ ಗ್ರೇಡ್ ಸಿಲಿಕಾನ್ ಅನ್ನು ಆರಿಸಿಕೊಳ್ಳುವುದು ಮುಖ್ಯ. ಸ್ಟೇನ್‌ಲೆಸ್ ಸ್ಟೀಲ್ ಮತ್ತು ಗಾಜಿನ ಟಿಫಿನ್ ಬಾಕ್ಸ್‌ಗಳು ದೈನಂದಿನ ಬಳಕೆಗೆ ಉತ್ತಮ.
ನೀವು ಇಲ್ಲಿಯವರೆಗೆ ನಿಮ್ಮ ಮಕ್ಕಳಿಗೆ ಪ್ಲಾಸ್ಟಿಕ್ ಬಾಕ್ಸ್‌ಗಳಲ್ಲಿ ಆಹಾರವನ್ನು ನೀಡುತ್ತಿದ್ದರೆ, ತಕ್ಷಣ ನಿಲ್ಲಿಸಿ. ಪ್ಲಾಸ್ಟಿಕ್ ಟಿಫಿನ್ ಬಾಕ್ಸ್ ನೀಡಬೇಕಾದರೆ ಒಂದು ತಿಂಗಳವರೆಗೆ ಮಾತ್ರ ಬಳಸಿ. ಚೆನ್ನಾಗಿ ಸ್ವಚ್ಛಗೊಳಿಸಿ ಬಳಸಿ. ನಿಮ್ಮ ಮಕ್ಕಳಿಗೆ ಸ್ಟೀಲ್ ಬಾಟಲಿಯಲ್ಲಿ ನೀರು ನೀಡಿ.