ಚಾಣಕ್ಯ ನೀತಿ ಪ್ರಕಾರ, ಬುದ್ಧಿವಂತ ವ್ಯಕ್ತಿ ಈ 5 ವಿಷಯಗಳನ್ನು ಯಾರಿಗೂ ಹೇಳಲ್ಲ..! ಯಾಕಂದ್ರೆ?

Naveen Kodase   | SIGWIRE
Published : Aug 20, 2026, 05:22 PM IST

ಮನುಷ್ಯನ ಮಾತಿಗೆ ಎಲ್ಲಿಲ್ಲದ ಶಕ್ತಿ ಇದೆ. ಒಂದು ಮಾತು ಸಂಬಂಧವನ್ನು ಬೆಳೆಸಬಲ್ಲದು, ಮುರಿಯಬಲ್ಲದು. ಹಾಗಾಗಿ ಯಾವಾಗ ಮಾತನಾಡಬೇಕು? ಹೇಗೆ ಮಾತನಾಡಬೇಕು? ಯಾರೊಂದಿಗೆ ಏನು ಹೇಳಬೇಕು? ಎಂಬ ಬಗ್ಗೆ ಎಚ್ಚರಿಕೆ ಇರಬೇಕು. ಚಾಣಕ್ಯನ ಪ್ರಕಾರ, ಬುದ್ಧಿವಂತ ವ್ಯಕ್ತಿ ಯಾರಿಗೂ ಹೇಳದ ಆ 5 ವಿಷಯಗಳು ಯಾವುವು ನೋಡೋಣ.

PREV
16
ಚಾಣಕ್ಯ ನೀತಿ

ಚಾಣಕ್ಯನ ಪ್ರಕಾರ, ಮನಸ್ಸಿನಲ್ಲಿರುವ ಪ್ರತಿಯೊಂದು ವಿಷಯವನ್ನು ಎಲ್ಲರೊಂದಿಗೂ ಹಂಚಿಕೊಳ್ಳುವುದು ಒಳ್ಳೆಯದಲ್ಲ. ಯಾರನ್ನು ಎಷ್ಟು ನಂಬಬೇಕು, ಯಾರೊಂದಿಗೆ ಏನು ಮಾತನಾಡಬೇಕು, ಯಾವ ವಿಷಯವನ್ನು ನಮ್ಮಲ್ಲೇ ಇಟ್ಟುಕೊಳ್ಳಬೇಕು ಎಂಬ ವಿವೇಕವು ಜೀವನದ ಯಶಸ್ಸಿನ ಒಂದು ಭಾಗವಾಗಿದೆ. ಒಮ್ಮೆ ಹೇಳಿದ ಮಾತನ್ನು ಹಿಂಪಡೆಯಲು ಸಾಧ್ಯವಿಲ್ಲ. ಹಾಗಾಗಿ ಬುದ್ಧಿವಂತ ವ್ಯಕ್ತಿ ತನ್ನ ಜೀವನದ ಪ್ರತಿಯೊಂದು ವಿಷಯವನ್ನು ಎಲ್ಲರ ಮುಂದೆ ಇಡುವುದಿಲ್ಲ. ಮುಖ್ಯವಾಗಿ ಈ 5 ವಿಷಯಗಳಲ್ಲಿ ಗೋಪ್ಯತೆ ಕಾಪಾಡುತ್ತಾನೆ. ಅವು ಯಾವುವು ನೋಡೋಣ.

26
ಪ್ರತಿಯೊಂದು ವಿಚಾರವನ್ನು ಎಲ್ಲರೊಂದಿಗೂ ಹಂಚಿಕೊಳ್ಳಬಾರದು

ಚಾಣಕ್ಯನ ಪ್ರಕಾರ, ಮನಸ್ಸಿನಲ್ಲಿರುವ ಪ್ರತಿಯೊಂದು ವಿಷಯವನ್ನು ಎಲ್ಲರೊಂದಿಗೂ ಹಂಚಿಕೊಳ್ಳುವುದು ಒಳ್ಳೆಯದಲ್ಲ. ಯಾರನ್ನು ಎಷ್ಟು ನಂಬಬೇಕು, ಯಾರೊಂದಿಗೆ ಏನು ಮಾತನಾಡಬೇಕು, ಯಾವ ವಿಷಯವನ್ನು ನಮ್ಮಲ್ಲೇ ಇಟ್ಟುಕೊಳ್ಳಬೇಕು ಎಂಬ ವಿವೇಕವು ಜೀವನದ ಯಶಸ್ಸಿನ ಒಂದು ಭಾಗವಾಗಿದೆ. ಒಮ್ಮೆ ಹೇಳಿದ ಮಾತನ್ನು ಹಿಂಪಡೆಯಲು ಸಾಧ್ಯವಿಲ್ಲ. ಹಾಗಾಗಿ ಬುದ್ಧಿವಂತ ವ್ಯಕ್ತಿ ತನ್ನ ಜೀವನದ ಪ್ರತಿಯೊಂದು ವಿಷಯವನ್ನು ಎಲ್ಲರ ಮುಂದೆ ಇಡುವುದಿಲ್ಲ. ಮುಖ್ಯವಾಗಿ ಈ 5 ವಿಷಯಗಳಲ್ಲಿ ಗೋಪ್ಯತೆ ಕಾಪಾಡುತ್ತಾನೆ. ಅವು ಯಾವುವು ನೋಡೋಣ.

36
ಹಣದ ಬಗ್ಗೆ ಎಲ್ಲರ ಜತೆ ಹಂಚಿಕೊಳ್ಳಬೇಡಿ

ನೀವು ಎಷ್ಟು ಸಂಪಾದಿಸುತ್ತೀರಿ, ಬ್ಯಾಂಕಿನಲ್ಲಿ ಎಷ್ಟು ಹಣವಿದೆ, ಎಲ್ಲಿ ಹೂಡಿಕೆ ಮಾಡಿದ್ದೀರಿ, ಯಾವ ಆಸ್ತಿಗಳಿವೆ ಎಂಬ ವಿಷಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಅಗತ್ಯವಿಲ್ಲ. ಹಣದ ಬಗ್ಗೆ ಹೆಚ್ಚು ಮಾತನಾಡುವುದು ಕೆಲವೊಮ್ಮೆ ಅನಗತ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಮ್ಮ ಆರ್ಥಿಕ ಸ್ಥಿತಿಯನ್ನು ತಿಳಿದುಕೊಂಡ ಕೆಲವರು ನಿಮ್ಮಿಂದ ಸಹಾಯವನ್ನು ನಿರೀಕ್ಷಿಸಬಹುದು ಅಥವಾ ನಿಮ್ಮ ಸಂಪಾದನೆ ನೋಡಿ ಅಸೂಯೆಪಡುವ ಸಾಧ್ಯತೆಯೂ ಇದೆ.

46
ಕೆಲಸದ ಗುಟ್ಟನ್ನು ಬಿಟ್ಟು ಕೊಡಬಾರದು

ನಾವು ಏನು ಮಾಡಲಿದ್ದೇವೆ, ಎಲ್ಲಿ ಹೂಡಿಕೆ ಮಾಡಲಿದ್ದೇವೆ, ಯಾವ ವ್ಯಾಪಾರವನ್ನು ಪ್ರಾರಂಭಿಸಲಿದ್ದೇವೆ ಎಂಬಂತಹ ವಿಷಯಗಳನ್ನು ಕೆಲಸ ಪೂರ್ಣಗೊಳ್ಳುವ ಮುನ್ನವೇ ಎಲ್ಲರಿಗೂ ಹೇಳುವ ಅಗತ್ಯವಿಲ್ಲ. ಒಂದು ಯೋಜನೆಯನ್ನು ಹತ್ತು ಜನರೊಂದಿಗೆ ಚರ್ಚಿಸಿದರೆ, ಹತ್ತು ಬಗೆಯ ಅಭಿಪ್ರಾಯಗಳು ಬರುತ್ತವೆ. ಕೆಲವೊಮ್ಮೆ ಅವು ನಮ್ಮಲ್ಲಿ ಅನಗತ್ಯ ಗೊಂದಲ ಸೃಷ್ಟಿಸಬಹುದು. ಇನ್ನು ಕೆಲವು ಸಂದರ್ಭಗಳಲ್ಲಿ, ನಮ್ಮ ಯೋಜನೆಗಳನ್ನು ತಿಳಿದು ಇತರರು ಅಡೆತಡೆಗಳನ್ನು ಉಂಟುಮಾಡುವ ಸಾಧ್ಯತೆಯೂ ಇರುತ್ತದೆ.

56
ಸಹಾಯ ಮಾಡಿದ್ದನ್ನು ಡಂಗುರ ಸಾರಬಾರದು

ನಾವು ಯಾರಿಗಾದರೂ ಸಹಾಯ ಮಾಡಿದಾಗ, ಅದನ್ನು ಪ್ರತಿ ಸಂದರ್ಭದಲ್ಲೂ ನೆನಪಿಸಿ ಡಂಗುರ ಸಾರಿಕೊಳ್ಳುವುದರಿಂದ ಆ ಸಹಾಯದ ಮೌಲ್ಯ ಕಡಿಮೆಯಾಗಬಹುದು. ನಿಜವಾದ ಸಹಾಯವು ಪ್ರತಿಫಲವನ್ನು ನಿರೀಕ್ಷಿಸುವುದಿಲ್ಲ. ಯಾರಿಗಾದರೂ ಆರ್ಥಿಕವಾಗಿ ಸಹಾಯ ಮಾಡುವುದು, ಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಲ್ಲುವುದು, ದಾನ ಮಾಡುವುದು ಮುಂತಾದ ಒಳ್ಳೆಯ ಕೆಲಸಗಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವ ಅಗತ್ಯವಿಲ್ಲ.

66
ಕುಟುಂಬದ ಗುಟ್ಟು ಬಿಟ್ಟು ಕೊಡಬಾರದು

ಪ್ರತಿಯೊಂದು ಕುಟುಂಬದಲ್ಲಿಯೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು, ಸಮಸ್ಯೆಗಳು ಇರುತ್ತವೆ. ಅವುಗಳನ್ನು ಪ್ರತಿಯೊಬ್ಬರ ಬಳಿ ಹೇಳುತ್ತಾ ಹೋದರೆ ಸಮಸ್ಯೆ ಇನ್ನಷ್ಟು ದೊಡ್ಡದಾಗಬಹುದು. ವಿಶೇಷವಾಗಿ ಗಂಡ-ಹೆಂಡತಿಯ ನಡುವಿನ ವಿಷಯಗಳು, ಕುಟುಂಬ ಸದಸ್ಯರ ವೈಯಕ್ತಿಕ ಸಮಸ್ಯೆಗಳು ಮತ್ತು ಆಸ್ತಿ ಸಂಬಂಧಿತ ವಿವಾದಗಳನ್ನು ಅನಾವಶ್ಯಕವಾಗಿ ಹೊರಗೆ ಹೇಳುವುದರಿಂದ ಕುಟುಂಬದ ಗೌರವದ ಜೊತೆಗೆ ಸಂಬಂಧಗಳೂ ಹಾಳಾಗಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories