Cockroach facts: ಜಿರಲೆ ಕಂಡರೆ ಸಾಕು, ಕೆಲವರು ಭಯದಿಂದ ಕಿರುಚುತ್ತಾರೆ. ಇನ್ನು ಕೆಲವರು ಕೊಲ್ಲುತ್ತಾರೆ. ಆದರೆ ಈ ಜೀವಿ ತಲೆ ಇಲ್ಲದಿದ್ದರೂ ಬದುಕಬಲ್ಲದು! ಆಹಾರವಿಲ್ಲದೆ ಒಂದು ತಿಂಗಳು, ನೀರಿಲ್ಲದೆ ಒಂದು ವಾರ ಇರಬಲ್ಲ ಈ ಕೀಟದ ಬಗ್ಗೆ ನಿಜವಾದ ಸಂಗತಿಗಳು ತಿಳಿದರೆ ಆಶ್ಚರ್ಯಚಕಿತರಾಗುತ್ತೀರಿ.
ಪ್ರತಿ ಮನೆಯಲ್ಲೂ, ಅದರಲ್ಲೂ ವಿಶೇಷವಾಗಿ ಅಡುಗೆ ಮನೆ ಮತ್ತು ಬಾತ್‌ರೂಮ್‌ಗಳಲ್ಲಿ ಓಡಾಡುತ್ತಾ ಮಹಿಳೆಯರಿಗೆ ಕಿರಿಕಿರಿ ಉಂಟುಮಾಡುವ ಜಿರಲೆಗಳ ಬಗ್ಗೆ ಜನರಿಗೆ ತಿಳಿದಿರುವುದು ತುಂಬಾ ಕಡಿಮೆ. ಈ ಜೀವಿಯ ಹಿಂದೆ ಕೋಟ್ಯಂತರ ವರ್ಷಗಳ ಇತಿಹಾಸವಿದೆ. ವಿಜ್ಞಾನಿಗಳ ವರದಿಗಳ ಪ್ರಕಾರ, ಇವು ಸುಮಾರು 20 ಕೋಟಿ ವರ್ಷಗಳಿಗಿಂತಲೂ ಹಿಂದಿನಿಂದ ಭೂಮಿಯ ಮೇಲಿವೆ. ಅಂದರೆ ಇವು ಡೈನೋಸಾರ್‌ಗಳ ಕಾಲದಿಂದಲೂ ಅಸ್ತಿತ್ವದಲ್ಲಿವೆ! ಒಂದು ಸಾಮಾನ್ಯ ಜಿರಲೆಯ ಜೀವಿತಾವಧಿ ಸುಮಾರು ಒಂದು ವರ್ಷ ಇರುತ್ತದೆ.
25
ತಲೆ ಇಲ್ಲದಿದ್ದರೂ ಬದುಕುತ್ತವೆ!
ಜಿರಲೆಗಳಿಗೆ ಸಂಬಂಧಿಸಿದ ಅತ್ಯಂತ ವಿಚಿತ್ರವಾದ ವಿಷಯವೆಂದರೆ, ಅವುಗಳ ತಲೆಯನ್ನು ಕತ್ತರಿಸಿದರೂ ಸಹ ಅವು ಒಂದು ವಾರದವರೆಗೆ ಸುಲಭವಾಗಿ ಬದುಕಬಲ್ಲವು. ಇದಕ್ಕೆ ಕಾರಣ ಅವು ನಮ್ಮಂತೆ ಮೂಗು ಅಥವಾ ಬಾಯಿಯ ಮೂಲಕ ಉಸಿರಾಡುವುದಿಲ್ಲ. ಬದಲಿಗೆ ಅವುಗಳ ದೇಹದಲ್ಲಿರುವ ಸಣ್ಣ ಸಣ್ಣ ರಂಧ್ರಗಳ ಮೂಲಕ ಉಸಿರಾಡುತ್ತವೆ. ತಲೆ ಕತ್ತರಿಸಿದ ನಂತರ ಅವು ಸಾಯುವುದು ಉಸಿರಾಟ ನಿಂತಿದ್ದಕ್ಕಲ್ಲ, ಬದಲಿಗೆ ನೀರು ಮತ್ತು ಆಹಾರವನ್ನು ಸೇವಿಸಲು ಸಾಧ್ಯವಾಗದ ಕಾರಣಕ್ಕಾಗಿ ಮಾತ್ರ!
35
ಜಿರಲೆಗಳ ಬಗ್ಗೆ ಕೆಲವು ರೋಚಕ ಸಂಗತಿಗಳು
ಉಸಿರು ಬಿಗಿಹಿಡಿಯುವಲ್ಲಿ ಕಿಂಗ್: ಜಿರಲೆಗಳು ನೀರಿನಲ್ಲಿ ಬಿದ್ದರೂ ಸಾಯುವುದಿಲ್ಲ. ಇವು ಸುಮಾರು 40 ನಿಮಿಷಗಳ ಕಾಲ ತಮ್ಮ ಉಸಿರನ್ನು ಬಿಗಿಹಿಡಿದು ನೀರಿನಲ್ಲಿ ಬದುಕಬಲ್ಲವು. ಹುಸೇನ್ ಬೋಲ್ಟ್ ವೇಗ: ಇವು ಓಡಲು ಪ್ರಾರಂಭಿಸಿದರೆ ಗಂಟೆಗೆ ಸುಮಾರು 4.8 ಕಿಲೋಮೀಟರ್ ವೇಗದಲ್ಲಿ ಓಡಬಲ್ಲವು. ನೈಟ್ ರೈಡರ್ಸ್: ಇವುಗಳಿಗೆ ಕತ್ತಲೆ ಎಂದರೆ ತುಂಬಾ ಇಷ್ಟ. ಹಗಲಿಡೀ ಪೈಪ್‌ಗಳು, ಗೋಡೆಯ ಬಿರುಕುಗಳು ಅಥವಾ ತೇವಾಂಶ ಇರುವ ಮೂಲೆಗಳಲ್ಲಿ ಅಡಗಿಕೊಂಡು, ರಾತ್ರಿಯಾಗುತ್ತಿದ್ದಂತೆ ಹೊರಬರುತ್ತವೆ.
ಸಿಕ್ಸ್ತ್ ಸೆನ್ಸ್: ಇವುಗಳ ಕಾಲುಗಳ ಮೇಲೆ ಇರುವ ವಿಶೇಷವಾದ ಕೂದಲಿನಂತಹ ಅಂಗಗಳ ಮೂಲಕ ಗಾಳಿಯ ಒತ್ತಡದಲ್ಲಿ ಆಗುವ ಬದಲಾವಣೆಯನ್ನು ಪತ್ತೆಹಚ್ಚುತ್ತವೆ. ಕೇವಲ 0.05 ಸೆಕೆಂಡುಗಳಲ್ಲಿ ಅಪಾಯವನ್ನು ಗುರುತಿಸಿ ಅಲ್ಲಿಂದ ಮಾಯವಾಗುತ್ತವೆ. ಹಸಿವು ತಡೆದುಕೊಳ್ಳುತ್ತವೆ: ಇವು ಆಹಾರವಿಲ್ಲದೆ ಒಂದು ತಿಂಗಳವರೆಗೆ ಬದುಕಬಲ್ಲವು. ಆದರೆ, ನೀರಿಲ್ಲದೆ ಒಂದು ವಾರಕ್ಕಿಂತ ಹೆಚ್ಚು ದಿನ ಬದುಕಲು ಸಾಧ್ಯವಿಲ್ಲ. ಎಲ್ಲವನ್ನೂ ತಿನ್ನುತ್ತವೆ: ಜಿರಲೆಗಳು ಕೇವಲ ಅನ್ನದ ಅಗಳು ಮಾತ್ರವಲ್ಲದೆ ಅಂಟು, ಗ್ರೀಸ್, ಸೋಪು, ಗೋಡೆಯ ಪೇಂಟ್, ಚರ್ಮ, ಪುಸ್ತಕದ ಅಟ್ಟೆಗಳು ಮತ್ತು ಮನುಷ್ಯರ ಕೂದಲನ್ನು ಸಹ ತಿನ್ನಬಲ್ಲವು!
55
ನಿಮಗೆ ಗೊತ್ತೇ?
ಪ್ರಪಂಚದಾದ್ಯಂತ ಸುಮಾರು 4,000 ಕ್ಕೂ ಹೆಚ್ಚು ಜಾತಿಯ ಜಿರಲೆಗಳಿವೆ. ಆದರೆ ಸಮಾಧಾನಕರ ವಿಷಯವೆಂದರೆ, ಅವುಗಳಲ್ಲಿ ಕೇವಲ 30 ಜಾತಿಗಳು ಮಾತ್ರ ಮನುಷ್ಯರು ವಾಸಿಸುವ ಮನೆಗಳಿಗೆ ಬರುತ್ತವೆ. ಏನೇ ಆಗಲಿ, ಕೋಟ್ಯಂತರ ವರ್ಷಗಳಿಂದ ಪ್ರಕೃತಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ತಡೆದುಕೊಂಡು ಇಂದಿಗೂ ಬದುಕುತ್ತಿರುವ ಈ ಜೀವಿಗಳ ಬದುಕುವ ಕಲೆ (Survival Skills) ನಿಜಕ್ಕೂ ಅದ್ಭುತ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.