ಕಪ್ಪೆಂದು ಹೀಗಳೆಯಬೇಡಿ, ಕಪ್ಪಲ್ಲಿದೆ ತ್ವಚೆ ಸುಂದರವಾಗಿಸುವ ಪವರ್

First Published | Oct 14, 2020, 6:30 PM IST

ತ್ವಚೆ ಸುಂದರವಾಗಿರಬೇಕು, ಹಾಲಿನಂತೆ ಬಿಳುಪಾಗಿರಬೇಕು, ಮೃದುವಾಗಿರಬೇಕು ಎಂದು ನಾವೆಲ್ಲರೂ ಇಷ್ಟ ಪಡುತ್ತೇವೆ. ಅದಕ್ಕಾಗಿ ನಾವು ಬಳಕೆ ಮಾಡುವ ಕ್ರೀಮ್ಗಳು ಬಿಳಿ ಬಣ್ಣದ್ದಾಗಿರುತ್ತದೆ, ಹಾಲಿನ ಕೆನೆ ಬಿಳಿ, ಮೊಸರು, ಕಡ್ಲೆ ಹಿಟ್ಟು ಹೀಗೆ ತ್ವಚೆಗೆ ಬಳಸುವ ಹೆಚ್ಚಿನ ಎಲ್ಲಾ ವಸ್ತುಗಳು ಬಿಳಿಯದ್ದಾಗಿರುತ್ತದೆ. ಹಾಗಾದ್ರೆ ಬಿಳಿ ವಸ್ತುಗಳು ಮಾತ್ರ ತ್ವಚೆಯನ್ನು ಬಿಳುಪಾಗಿಸುವುದೇ? ಖಂಡಿತಾ ಇಲ್ಲ. ಕಪ್ಪು ವಸ್ತುಗಳು ಸಹ ತ್ವಚೆಯನ್ನು ಬಿಳುಪಾಗಿಸಲು ಸಹಾಯ ಮಾಡುತ್ತೆ. 

ಈ ಆಹಾರ ಪಾನೀಯಗಳೆಲ್ಲವೂ ಕಪ್ಪೇ. ಆದರೆ ಇವು ನಿಮ್ಮನ್ನು ಬಿಳುಪಾಗಿಸುವ ಶಕ್ತಿ ಹೊಂದಿವೆ. ತ್ವಚೆ ಹೊಳೆಯುವಂತಾಗಬೇಕಾದರೆ ಇವೆಲ್ಲ ನಿಮ್ಮ ಫುಡ್ ಲಿಸ್ಟ್ ನಲ್ಲಿ ಇರಲಿ. ತ್ವಚೆಗೆ ಹೊಳಪು ಬರುತ್ತದೆ...
undefined
ಕಪ್ಪು ಕಡ್ಲೆ : ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್‌ ಇರುತ್ತವೆ. ಫೈಬರ್‌ ಕೂಡ ಅಧಿಕವಾಗಿರುತ್ತದೆ. ಇವುಗಳನ್ನು ಸೇವನೆ ಮಾಡಿದರೆ ಬಣ್ಣ ಬಿಳಿಯಾಗುವುದರ ಜೊತೆಗೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.
undefined

Latest Videos


ಕಪ್ಪು ಉಪ್ಪು : ಇದರಲ್ಲಿ ಐರನ್‌, ಕ್ಯಾಲ್ಶಿಯಂ ಹೆಚ್ಚಾಗಿರುತ್ತದೆ. ರಕ್ತ ಕಡಿಮೆ ಇದ್ದರೆ ಅದನ್ನು ಇದು ಸರಿದೂಗಿಸುತ್ತದೆ. ಮೂಳೆ ಗಟ್ಟಿಮುಟ್ಟಾಗುತ್ತವೆ. ನಿಮ್ಮ ಸೌಂದರ್ಯವೂ ನಿಖರವಾಗುತ್ತ ಹೋಗುತ್ತದೆ.
undefined
ಕಪ್ಪು ಎಳ್ಳು: ಕಪ್ಪು ಎಳ್ಳಿನಲ್ಲಿರುವ ಪೊಟ್ಯಾಶಿಯಂ, ಫೈಬರ್‌ ಹೃದಯ ಸಮಸ್ಯೆಯನ್ನು ನಿವಾರಿಸುತ್ತದೆ.ಜೊತೆಗೆ ಜೀರ್ಣಕ್ರಿಯೆ ಸಕ್ರಿಯ ಮಾಡಿ, ತ್ವಚೆಯು ಹೊಳೆಯುವಂತೆ ಮಾಡುತ್ತದೆ.
undefined
ಬ್ಲ್ಯಾಕ್‌ ಕಾಫಿ: ಇದರಲ್ಲಿರುವ ಆಕ್‌ಜೆಲೆಟ್ಸ್‌ ದೇಹದ ಎಲ್ಲಾ ಸಮಸ್ಯೆಯನ್ನು ನಿವಾರಿಸಿ ಚರ್ಮಕ್ಕೆ ಹೊಸತನ ನೀಡುತ್ತದೆ, ಜೊತೆಗೆ ಚರ್ಮವನ್ನು ಸುಂದರವಾಗಿ ಹೊಳೆಯುವಂತೆ ಮಾಡುತ್ತದೆ.
undefined
ಬ್ಲ್ಯಾಕ್‌ ಬೀನ್ಸ್ : ಇದು ದೇಹದಲ್ಲಿನ ವಿಷಯುಕ್ತ ಪದಾರ್ಥವನ್ನು ಹೊರಹಾಕುತ್ತದೆ. ಶುಗರ್‌ ಲೆವೆಲ್‌ ಕಂಟ್ರೋಲ್‌ ಮಾಡುತ್ತದೆ. ಮುಖದ ಬಣ್ಣವನ್ನು ಬಿಳಿಯಾಗುವಂತೆ ಮಾಡುತ್ತದೆ.
undefined
ಕಪ್ಪು ದ್ರಾಕ್ಷಿ: ದ್ರಾಕ್ಷಿಯಲ್ಲಿರುವ ಕಾರ್ಬೋಹೈಡ್ರೈಟ್‌ ಮತ್ತು ನೈಟ್ರೇಟ್ಸ್‌ ಮಸಲ್ಸ್‌ ಗಟ್ಟಿಮುಟ್ಟಾಗಲು ನೆರವಾಗಿ ದೇಹವನ್ನು ಫಿಟ್‌ ಆಗಿರಿಸುತ್ತದೆ. ಜೊತೆಗೆ ಸುಂದರ ಸೌಂದರ್ಯದ ಗುಟ್ಟು ಇದರಲ್ಲಿ ಅಡಗಿದೆ.
undefined
ಡಾರ್ಕ್‌ ಚಾಕಲೇಟ್: ಇದು ಕೊಲೆಸ್ಟ್ರಾಲ್‌ ಲೆವೆಲ್‌ ಕಡಿಮೆ ಮಾಡುತ್ತದೆ. ಮೂಡ್‌ ಚೆನ್ನಾಗಿರಲು ನೆರವಾಗುತ್ತದೆ. ಇದರಿಂದ ನಿಮ್ಮ ಮುಖವೂ ಫ್ರೆಶ್‌ ಆಗಿರುತ್ತದೆ.
undefined
ಕರಿಮೆಣಸು: ಕರಿಮೆಣಸಿನಲ್ಲಿ ಹೆಚ್ಚು ಪ್ರೊಟೀಬ್‌ ಇರುತ್ತದೆ. ಇದರಿಂದ ತೂಕ ಕಡಿಮೆಯಾಗುತ್ತದೆ. ಅಲ್ಲದೆ ಮಸಲ್ಸ್‌ ಗಟ್ಟಿ ಮುಟ್ಟಾಗಿ ನೀವು ಫಿಟ್‌ ಆಗುತ್ತೀರಿ.
undefined
ಬ್ಲ್ಯಾಕ್‌ ಟೀ : ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ ಸ್ಟ್ರೆಸ್‌‌ ಕಡಿಮೆ ಮಾಡಲು ಸಹಾಯ ಮಾಡಿ ಸೌಂದರ್ಯ ಹೆಚ್ಚಾಗಲು ಸಹಾಯ ಮಾಡುತ್ತದೆ.
undefined
click me!