ಮೊಳಕೆಯೊಡೆದ ಆಲೂ ಅಪಾಯ... ಸೇವಿಸಿದ್ರೆ ಏನಾಗುತ್ತೆ ಗೊತ್ತಾ?
First Published | Oct 14, 2020, 6:09 PM ISTಶಾಪಿಂಗ್ ಮಾಡುವಾಗ ರಿಯಾಯಿತಿ ದರದಲ್ಲಿ, ಆಫರ್ ಆಗಿ ನೀಡುವ ವಸ್ತುಗಳನ್ನು ಕೊಂಡುಕೊಳ್ಳುವ ಅವಕಾಶವನ್ನು ನಾವು ಯಾವತ್ತೂ ಮಿಸ್ ಮಾಡೋದಿಲ್ಲ. ಅದು ಬಟ್ಟೆ, ಮನೆಯ ವಸ್ತುಗಳು ಅಥವಾ ಕಿರಾಣಿ ಶಾಪಿಂಗ್ ಆಗಿರಲಿ ಎಲ್ಲಾ ಖರೀದಿ ಮಾಡುತ್ತೇವೆ. ಕಿರಾಣಿ ಶಾಪಿಂಗ್ ಮಾಡುವಾಗ, ಆಲೂಗಡ್ಡೆಯ ದೊಡ್ಡ ಚೀಲ ಕಡಿಮೆ ಇದ್ದರೆ ಖರೀದಿಸುತ್ತೇವೆ. ಆದರೆ ದೀರ್ಘಕಾಲ ಬಳಸದೆ ಮತ್ತು ಗಮನಿಸದೆ ಬಿಟ್ಟಾಗ, ಈ ಆಲೂಗಡ್ಡೆ ಸ್ವಲ್ಪ ಹಸಿರು ಬಣ್ಣಕ್ಕೆ ತಿರುಗುತ್ತವೆ ಹಾಗು ಮೊಳಕೆಯೊಡೆಯುತ್ತದೆ. ಆ ಸಮಯದಲ್ಲಿ, ನಾವು ಆಗಾಗ್ಗೆ ನಮ್ಮನ್ನು ಪ್ರಶ್ನಿಸಿಕೊಳ್ಳುತ್ತೇವೆ, ಅದು ಇನ್ನೂ ತಿನ್ನಲು ಸುರಕ್ಷಿತವಾಗಿದೆಯೇ? ನಾವು ಇನ್ನೂ ಇದನ್ನು ಅಡುಗೆಗೆ ಬಳಸಬಹುದೇ?