Kerala Style Home in Sagara: ಅನೇಕರು ಹಳ್ಳಿ ಜೀವನವನ್ನು ಇಷ್ಟಪಡುತ್ತಾರೆ. ನಗರದಲ್ಲಿ, ವಿದೇಶದಲ್ಲಿ ಕೆಲಸ ಮಾಡಿದರೂ ಕೂಡ, ಅನೇಕರಿಗೆ ಮತ್ತೆ ಹಳ್ಳಿಗೆ ಬರಬೇಕು, ಅಲ್ಲಿ ಸುಂದರವಾಗಿ ಮನೆ ಕಟ್ಟಿ ಜೀವನ ಮಾಡಬೇಕು ಎಂಬ ಆಸೆ ಇರುತ್ತದೆ. ಅಂಥ ಮನೆಯ ಉದಾಹರಣೆ ಇಲ್ಲಿದೆ.
ಅಮೆರಿಕದಲ್ಲಿ ಕೆಲಸವನ್ನು ಬಿಟ್ಟು ಸಾಗರದಲ್ಲಿ ಮನೆ ಕಟ್ಟಿದರು. ಈಶಾ ಎಂದು ಮನೆಗೆ ಹೆಸರು ಇಟ್ಟಿದ್ದಾರೆ. RCC, ಹಂಚು ಹಾಕಿ ಈ ಮನೆಯನ್ನು ಕಟ್ಟಿದ್ದಾರೆ. ಈಗ ಕಂಪೆನಿಯೊಂದಕ್ಕೆ ಕೆಲಸ ಮಾಡುತ್ತಿದ್ದು, Work From Home ನಡೆಯುತ್ತಿದೆ.
212
ಈ ಮನೆಹ ಹೈಲೈಟ್ ಏನು?
ಭಾಗ್ಯಶ್ರೀ ದಂಪತಿ ಅವರು ಈ ಮನೆಯನ್ನು ಕಟ್ಟಿದ್ದಾರೆ. ಗ್ರ್ಯಾನೈಟ್ ನೆಲ, ಸಾಗವಾನಿ ಕಿಟಕಿಗಳು ಈ ಮನೆಯ ಹೈಲೈಟ್ ಆಗಿರಬಹುದು. ಶೀಟ್ ಬಳಸಿ ಕಾರ್ ಪಾರ್ಕಿಂ ಮಾಡಿದ್ದಾರೆ.
312
ಸೂರ್ಯನ ಬೆಳಕು
ಮನೆ ಮುಂದೆ ಗಾರ್ಡನ್ ಕೂಡ ಇದೆ, ಮನೆಯ ಸುತ್ತ ಕಾಂಪೌಂಡ್ ಕೂಡ ಇದೆ. ಸೂರ್ಯನ ಬೆಳಕು, ನೇರವಾಗಿ ಮನೆಗೆ ಬೀಳುವುದು. ಈ ನೋಟವನ್ನು ನೋಡೋದು ಚೆಂದ.
ಗಾರ್ಡನ್ ಕೂಡ ಮಾಡಲಾಗಿದ್ದು, ಬಾವಿ ಕೂಡ ಇದೆ. ಸುಂದರವಾಗಿ ಬಾವಿ ಕಟ್ಟೆ ಡಿಸೈನ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಿಧ ವಿಧವಾದ ಹೂವಿನ ಗಿಡಗಳು ಇವೆ.
512
ಸುಂದರವಾದ ಎಂಟ್ರೆನ್ಸ್
ಕೇರಳ ಸ್ಟೈಲ್ ಮನೆ ಆಗಿದ್ದು, ಮನೆಯ ಹೊರಗಿನ ಆವರಣದಲ್ಲಿ ಕೂರಲು ಅನುಕೂಲವಾಗುವಂತೆ ಡಿಸೈನ್ ಮಾಡಲಾಗಿದೆ.
612
ಹಾಲ್
ಹಾಲ್‌ನಲ್ಲಿ ವಾಲ್ ಪೇಂಟಿಂಗ್ ಇದೆ, ರಂಗೋಲಿ ಹಾಕಲಾಗಿದೆ. ಎಲ್ಲೆಲ್ಲೂ ಹಸಿರು ಕಾಣುವಂತೆ ಗಿಡಗಳನ್ನು ಇಡಲಾಗಿದೆ.
712
ಸುಂದರವಾದ ಕಾಂಪೌಂಡ್
ಮನೆಗೆ ಸುಂದರವಾದ ಕಾಂಪೌಂಡ್, ದೊಡ್ಡದಾದ ಗೇಟ್ ಕೂಡ ಇದೆ.
812
ಸ್ಟೇರ್‌ಕೇಸ್ ಏರಿಯಾ
ಸ್ಟೇರ್‌ಕೇಸ್ ಏರಿಯಾ ಬಳಿ ಕೂಡ ಮರದ ರ್ಯಾಕ್ ಇಟ್ಟು, ಅಲ್ಲಿ ಒಂದಿಷ್ಟು ಗಿಡಗಳು, ಅಲಂಕಾರಿಕ ವಸ್ತುಗಳನ್ನು ಇಡಲಾಗಿದೆ.
912
ಹ್ಯಾಂಡ್ ವಾಶ್ ಏರಿಯಾ
ಹ್ಯಾಂಡ್ ವಾಶ್ ಏರಿಯಾದಲ್ಲಿ ಕೂಡ ಗಿಡಗಳನ್ನು ಬಳಸಿ ಡೆಕೋರೇಟ್ ಮಾಡಲಾಗಿದೆ.
1012
ದೊಡ್ಡದಾದ ಕಿಚನ್
ಒಪನ್ ಕಿಚನ್ ಇದೆ. ಹಬ್ಬ ಹರಿದಿನದ ಟೈಮ್‌ನಲ್ಲಿ ಕಿಚನ್ ದೊಡ್ಡದಿರಬೇಕು ಎಂದು ಈ ರೀತಿ ಮಾಡಲಾಗಿದೆ.
1112
ಎಷ್ಟು ಹಣ ಆಯ್ತು?
ಹಳ್ಳಿ ಮನೆ ಎಂದರೆ ಇಷ್ಟವಂತೆ. ಕೇರಳ ಸ್ಟೈಲ್‌ನಲ್ಲಿ ಈ ಮನೆ ಕಟ್ಟಲಾಗಿದೆ. ಒಟ್ಟೂ ಈ ಮನೆ ಕಟ್ಟಲು 55 ಲಕ್ಷ ರೂಪಾಯಿ ಬೇಕಾಗಿದೆ.
1212
ಇಂಟಿರಿಯರ್ ಡಿಸೈನ್ ಕಡಿಮೆ
ಇಂಟಿರಿಯರ್ ಡಿಸೈನ್ ಕಡಿಮೆ ಮಾಡಲಾಗಿದೆ. ಗಾಳಿ, ಬೆಳಕಿಗೆ ಯಾವುದೇ ಕೊರತೆ ಇಲ್ಲ. ಎಲ್ಲ ಕಡೆ ಆಲ್ಯೂಮಿನಿಯಮ್ ಇಂಟಿರಿಯರ್ ಡಿಸೈನ್ ಮಾಡಲಾಗಿದೆ. ಮೇಲುಗಡೆ ಒಪನ್ ಟೆರೆಸ್ ಇದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.