ಈ ಅಪರೂಪದ ಜೋಡಿಯ ಮದುವೆ ನಡೆದು ಹಲವು ತಿಂಗಳುಗಳೇ ಕಳೆದಿವೆ. ಆದರೆ ಈಗ ಈ WeddingWire India ಎಂಬ ಇನ್ಸ್ಟಾಗ್ರಾಮ್ ಪೇಜೊಂದು ಈ ವಿಶೇಷ ಜೋಡಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.
ಡೌನ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದ ಈ ಜೋಡಿಯ ವಿವಾಹ ಕಳೆದ ಜೂನ್‌ನಲ್ಲಿ ಎರಡು ಕುಟುಂಬಗಳ ನೆಂಟರು ಸ್ನೇಹಿತರ ಸಮ್ಮುಖದಲ್ಲಿ ಬಹಳ ಅದ್ದೂರಿಯಾಗಿ ನಡೆದಿತ್ತು.
210
Down Syndrome couple
ಮೂರು ದಿನಗಳ ಕಾಲ ನಡೆದ ಈ ವಿವಾಹದಲ್ಲಿ ತಮಿಳುನಾಡಿನ ವಿಘ್ನೇಶ್ ಕೃಷ್ಣಸ್ವಾಮಿ ಎಂಬ 27 ವರ್ಷದ ಯುವಕ ಮಹಾರಾಷ್ಟ್ರದ ಅನನ್ಯಾ ಸಾವಂತ್ ಎಂಬ ಯುವತಿಯನ್ನು ಕುಟುಂಬದ ನೆಂಟರಿಷ್ಟರ ಸಮ್ಮುಖದಲ್ಲಿ ವಿವಾಹವಾದರು. ವಧು ವರ ಇಬ್ಬರು ಡೌನ್‌ಸಿಂಡ್ರೋಮ್‌ನಿಂದ ಬಳಲುತ್ತಿದ್ದಾರೆ.
310
Down Syndrome couple
ನನ್ನ ಮಗನಿಗೆ 27 ವರ್ಷ ಆತನ ಸ್ನೇಹಿತರು ಮದುವೆಯಾಗುವುದನ್ನು ನೋಡಿ ತಾನು ಮದುವೆಯಾಗಲು ಬಯಸಿದ್ದ ಅದರಂತೆ ಸಂಬಂಧವೊಂದು ಕೂಡಿ ಬಂದಿದ್ದು, ವಿವಾಹ ಮಾಡಿದ್ದಾಗಿ ವಿಘ್ನೇಶ್ ಕೃಷ್ಣಸ್ವಾಮಿ ತಂದೆ ವಿಶ್ವನಾಥನ್ ಹೇಳಿಕೊಂಡಿದ್ದರು.
410
Down Syndrome couple
ವಿಶ್ವನಾಥನ್ ಸೋದರಿ ಜನನಿ ಮೂಲಕ ಈ ಸಂಬಂಧ ಕೂಡ ಬಂದಿತ್ತು. ಯುಕೆಯಲ್ಲಿ ಅಧ್ಯಯನ ಮಾಡುತ್ತಿದ್ದ ಈಕೆಗೆ ವಧುವಿನ ಸಹೋದರಿ ಅಶ್ನಿ ಸಾವಂತ್ ಸ್ನೇಹಿತೆಯಾಗಿದ್ದು, ತಮ್ಮಿಬ್ಬರ ಒಡಹುಟ್ಟಿದವರ ಬಗ್ಗೆ ಮಾತನಾಡುತ್ತಾ ಇದೇ ಮಾತು ಜೋಡಿಯ ಮದುವೆಗೆ ನಾಂದಿ ಹಾಡಿತ್ತು.
510
Down Syndrome couple
ಯಾವುದೇ ಮದುವೆಗೂ ಕಡಿಮೆ ಇಲ್ಲದಂತೆ ಮೆಹಂದಿ, ಸಂಗೀತಾ, ಹಾಡು ನೃತ್ಯವನ್ನು ಒಳಗೊಂಡ ಅದ್ದೂರಿ ಮದುವೆ ಇದಾಗಿತ್ತು. ಅಮೆರಿಕಾದಲ್ಲೂ ಇಂತಹ ಮದುವೆಗಳು ಇಲ್ಲ, ಅಲ್ಲಿ ಇಂತಹವರಿಗಾಗಿ ಡೇಟಿಂಗ್ ಆಪ್‌ಗಳಿವೆ ಅವುಗಳ ಸಂಖ್ಯೆ ಕೂಡ ಕಡಿಮೆ. ಇಂತಹ ವಿಶೇಷ ಕಾಳಜಿಯ ಅಗತ್ಯವಿರುವ ವಯಸ್ಸಿಗೆ ಬಂದವರು ಅಲ್ಲಿ (ಅಮೆರಿಕಾ) ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂದು ವಿಶೇಷ ಚೇತನ ಮಗುವನ್ನು ಹೊಂದಿರುವ ಮಹಿಳೆಯೊಬ್ಬರು ಹೇಳಿದ್ದಾರೆ.
610
Down Syndrome couple
ಈ ಮದುವೆಯಲ್ಲಿ ಭಾಗಿಯಾಗಿದ್ದ ದುಬೈ ಮೂಲದ ಅಲ್ ನೂರ್ ಸೆಂಟರ್‌ನ ನಿರ್ದೇಶಕಿ ರಂಜಿನಿ ರಮನಾಥ್, ತಾನು ಇದುವರೆಗೆ ಭಾಗವಹಿಸಿದ ಅತ್ಯಂತ ಸುಂದರವಾದ ಮದುವೆ ಇದು ಎಂದು ಹೇಳಿಕೊಂಡಿದ್ದಾರೆ. ಮಕ್ಕಳ ಕುಟುಂಬಕ್ಕಾಗಿ ಇಲ್ಲಿ ಪೋಷಕರು ತಮ್ಮಿಂದ ಸಾಧ್ಯವಾಗುವ ಎಲ್ಲವನ್ನು ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
710
Down Syndrome couple
ಅಂದಹಾಗೆ ಮದುವೆಗೂ ಮೊದಲು ಈ ಜೋಡಿ ಹಲವು ಬಾರಿ ಇತರ ಸಾಮಾನ್ಯ ಜೋಡಿಗಳಂತೆ ಭೇಟಿಯಾಗಿದ್ದಾರೆ. ನಂತರ ಅವರು ಬೆಳೆಸಿಕೊಂಡ ಅನುಬಂಧವನ್ನು ಎಲ್ಲರೂ ಮದುವೆಯಲ್ಲೇ ನೋಡಬಹುದಾಗಿತ್ತು ಎಂದು ವಿಘ್ನೇಶ್ ತಾಯಿ ವೀಣಾ ಹೇಳುತ್ತಾರೆ.
810
Down Syndrome couple
ಅವರು ವಾಟ್ಸಾಪ್, ಇಮೇಲ್‌ನಲ್ಲಿ ಪರಸ್ಪರ ಸಂವಹನ ನಡೆಸುತ್ತಿದ್ದರು, ನಾವು ಪುಣೆಯಿಂದ ದುಬೈಗೆ ಹೋಗಿ ನೆಲೆಸಬೇಕೆಂದು ನಿರ್ಧರಿಸಿದ್ದೆವು. ಆದರೆ ಎಲ್ಲ ಪರಿಚಿತರನ್ನು ಪುಣೆಯಲ್ಲೇ ಹೊಂದಿರುವ ಸೊಸೆ ಅನನ್ಯಾಗೆ ಇದು ಸುಲಭವಲ್ಲ, ಈಗ ಅವಳು ನಮ್ಮ ಕುಟುಂಬಕ್ಕೆ ಸೇರಿದ್ದಾಳೆ. ಅವಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನಾವು ಹೊರುತ್ತೇವೆ ಎಂದು ಹೇಳುತ್ತಾರೆ ವರ ವಿಘ್ನೇಶ್ ತಾಯಿ ವೀಣಾ.
910
Down Syndrome couple
ತಮಿಳು ಹಾಗೂ ಮಹಾರಾಷ್ಟ್ರದ ಸಂಪ್ರದಾಯದಂತೆ ಈ ಜೋಡಿಯ ಮದುವೆ ನಡೆದಿತ್ತು. ಇದು ಮಾನ್ಸೂನ್‌ನ ಆರಂಭದಲ್ಲಿ ನಡೆದ ಈ ಮದುವೆ ಎರಡೂ ಕುಟುಂಬದಲ್ಲಿಯೂ ಸಂತಸ ನೆಲೆ ಮಾಡಿದೆ.
1010
Down Syndrome couple
ವರ ವಿಘ್ನೇಶ್ ದುಬೈನಲ್ಲಿ ಹಾಸ್ಪಿಟಲಿಟಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ವಧು ಅನನ್ಯಾ ಕೂಡ ಪತಿ ಜೊತೆ ಇರುವುದಕ್ಕಾಗಿ ದುಬೈಗೆ ತೆರಳಲು ಸಿದ್ಧಳಾಗಿದ್ದಾಳೆ. ಒಟ್ಟಿನಲ್ಲಿ ಈ ಜೋಡಿ ಡೌನ್ ಸಿಂಡ್ರೋಮ್‌ನಿಂದ ಬಳಲುತ್ತಿರುವ ಸಾವಿರಾರು ಪೋಷಕರ ಪಾಲಿಗೆ ಆಶಾಕಿರಣವಾಗಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.