ಉಪ್ಪು ಒಂದಿದ್ದರೆ ಸಾಕು.. ಕ್ಲೀನಿಂಗ್ ಕೆಲಸ ಕಷ್ಟವಲ್ಲ, ಸಾವಿರಾರು ರೂಪಾಯಿ ಉಳಿಸುವ ಈ ಟ್ರಿಕ್ ತಿಳ್ಕೊಳ್ಳಿ

Published : Aug 18, 2026, 04:18 PM IST

Natural cleaning remedies: ಅಡುಗೆಯ ರುಚಿ ಹೆಚ್ಚಿಸುವ ಉಪ್ಪು ಕೇವಲ ಆಹಾರಕ್ಕೆ ಮಾತ್ರವಲ್ಲ, ಮನೆಯ ಸ್ವಚ್ಛತೆಗೂ ವರದಾನ! ಮಳೆಗಾಲದಲ್ಲಿ ಎದುರಾಗುವ ಬ್ಯಾಕ್ಟೀರಿಯಾ, ಜಿಡ್ಡು ಮತ್ತು ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಉಪ್ಪಿನ ಈ 7 ಸುಲಭ ಮತ್ತು ಪರಿಣಾಮಕಾರಿ ಹ್ಯಾಕ್ಸ್ ಇಲ್ಲಿದೆ.

PREV
19
ಕೆಟ್ಟ ವಾಸನೆ ಹೋಗಲಾಡಿಸಲು

ಕೆಟ್ಟ ವಾಸನೆ ಹೋಗಲಾಡಿಸಲು
ನಮ್ಮ ಅಡುಗೆ ಮನೆಯಲ್ಲಿ ದಿನನಿತ್ಯ ಬಳಸುವ ಉಪ್ಪು ಕೇವಲ ಆಹಾರದ ರುಚಿ ಹೆಚ್ಚಿಸಲು ಮಾತ್ರವಲ್ಲದೆ, ಮನೆಯ ಸ್ವಚ್ಛತೆಗೂ ಒಂದು ವರದಾನ ಎಂಬುದು ನಿಮಗೆ ತಿಳಿದಿದೆಯೇ?. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕೆಮಿಕಲ್‌ ಕ್ಲೀನಿಂಗ್‌ಗಳ ಬದಲಿಗೆ, ಕೇವಲ ಒಂದು ಚಿಟಿಕೆ ಉಪ್ಪನ್ನು ಬಳಸಿ ಮನೆಯ ಅನೇಕ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ಪರಿಹರಿಸಬಹುದು. ವಿಶೇಷವಾಗಿ ಮಳೆಗಾಲದಲ್ಲಿ ಉಂಟಾಗುವ ತೇವಾಂಶ ಮತ್ತು ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಉಪ್ಪಿನ ಈ 7 ಹ್ಯಾಕ್ಸ್ ನಿಮಗಾಗಿ..

29
ಕಿಚನ್ ಸಿಂಕ್‌ನ ಕೆಟ್ಟ ವಾಸನೆಗೆ ಗುಡ್ ಬೈ

ಕಿಚನ್ ಸಿಂಕ್‌ನ ಕೆಟ್ಟ ವಾಸನೆಗೆ ಗುಡ್ ಬೈ
ಅಡುಗೆ ಮನೆಯ ಸಿಂಕ್ ಅಥವಾ ಡ್ರೈನೇಜ್ ಪೈಪ್‌ಗಳಿಂದ ಆಗಾಗ್ಗೆ ಕೆಟ್ಟ ವಾಸನೆ ಬರುತ್ತಿದ್ದರೆ, ಸ್ವಲ್ಪ ಉಪ್ಪನ್ನು ಡ್ರೈನ್ ಒಳಗೆ ಹಾಕಿ ಅದರ ಮೇಲೆ ಬಿಸಿ ನೀರನ್ನು ಸುರಿಯಿರಿ. ಇದು ಪೈಪ್‌ಗಳಲ್ಲಿ ಜಮೆಯಾಗಿರುವ ಕೊಳೆಯನ್ನು ಸಡಿಲಗೊಳಿಸಿ ದುರ್ವಾಸನೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

39
ಇರುವೆ ಹಾವಳಿಗೆ ಮುಕ್ತಿ

ಇರುವೆ ಹಾವಳಿಗೆ ಮುಕ್ತಿ
ಮಳೆಗಾಲ ಮತ್ತು ಬೇಸಿಗೆಯಲ್ಲಿ ಮನೆಯೊಳಗೆ ಇರುವೆಗಳ ಕಾಟ ಹೆಚ್ಚಾಗಿರುತ್ತದೆ. ಇರುವೆಗಳು ಬರುವ ಹಾದಿಯಲ್ಲಿ ಸ್ವಲ್ಪ ಉಪ್ಪನ್ನು ಚಿಮುಕಿಸಿ. ಉಪ್ಪಿನ ಪದರವು ಇರುವೆಗಳ ಹಾದಿಯನ್ನು ತಡೆದು ಅವು ಮನೆ ಒಳಗೆ ಬರದಂತೆ ಮಾಡುತ್ತದೆ. ಜೊತೆಗೆ ಆಹಾರ ಪದಾರ್ಥಗಳನ್ನು ಮುಚ್ಚಿಡುವುದು ಮತ್ತು ಆ ಜಾಗವನ್ನು ಸ್ವಚ್ಛವಾಗಿಡುವುದು ಮುಖ್ಯ.

49
ಕಟಿಂಗ್ ಬೋರ್ಡ್ ಸ್ವಚ್ಛತೆ

ಕಟಿಂಗ್ ಬೋರ್ಡ್ ಸ್ವಚ್ಛತೆ
ತರಕಾರಿ ಹೆಚ್ಚುವ ಮರದ ಬೋರ್ಡ್‌ಗಳ ಮೇಲೆ ಕಲೆಗಳು ಮತ್ತು ವಾಸನೆ ಕುಳಿತಿರುತ್ತದೆ. ಇವುಗಳನ್ನು ಹೋಗಲಾಡಿಸಲು ಬೋರ್ಡ್ ಮೇಲೆ ಸ್ವಲ್ಪ ಉಪ್ಪನ್ನು ಹಾಕಿ, ಅರ್ಧ ಹೋಳು ನಿಂಬೆಹಣ್ಣಿನಿಂದ ಉಜ್ಜಿರಿ. ಇದು ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದಲ್ಲದೆ, ಬೋರ್ಡ್ ಅನ್ನು ಹೊಸದರಂತೆ ಕಾಣುವಂತೆ ಮಾಡುತ್ತದೆ.

59
ಟೀ-ಕಾಫಿ ಕಲೆಗಳ ನಿವಾರಣೆ

ಟೀ-ಕಾಫಿ ಕಲೆಗಳ ನಿವಾರಣೆ
ಟೀ ಅಥವಾ ಕಾಫಿ ಕುಡಿಯುವ ಕಪ್‌ಗಳ ಒಳಗೆ ಕಂದು ಬಣ್ಣದ ಕಲೆಗಳು ಜಮೆಯಾಗುತ್ತವೆ. ಇವುಗಳನ್ನು ಹೋಗಲಾಡಿಸಲು ಕಪ್‌ಗೆ ಸ್ವಲ್ಪ ಉಪ್ಪು ಮತ್ತು ಬಿಸಿ ನೀರು ಹಾಕಿ ಉಜ್ಜಿರಿ. ಕಲೆಗಳು ಹಳೆಯದಾಗಿದ್ದರೆ ಉಪ್ಪಿನೊಂದಿಗೆ ಸ್ವಲ್ಪ ಬೇಕಿಂಗ್ ಸೋಡಾ ಬೆರೆಸಿ ಹಳೆಯ ಟೂತ್‌ಬ್ರಷ್‌ನಿಂದ ಉಜ್ಜಿ ಸ್ವಚ್ಛಗೊಳಿಸಿ.

69
ಬೂಟುಗಳ ದುರ್ವಾಸನೆಗೆ ಪರಿಹಾರ

ಬೂಟುಗಳ ದುರ್ವಾಸನೆಗೆ ಪರಿಹಾರ
ದೀರ್ಘಕಾಲ ಶೂಗಳನ್ನು ಧರಿಸುವುದರಿಂದ ಅಥವಾ ಬೆವರಿನ ಕಾರಣದಿಂದ ಬೂಟುಗಳು ಕೆಟ್ಟ ವಾಸನೆ ಬರತೊಡಗುತ್ತವೆ. ಅಂತಹ ಸಮಯದಲ್ಲಿ ರಾತ್ರಿ ಬೂಟುಗಳ ಒಳಗೆ ಸ್ವಲ್ಪ ಉಪ್ಪನ್ನು ಹಾಕಿಡಿ. ಉಪ್ಪು ತೇವಾಂಶವನ್ನು ಹೀರಿಕೊಳ್ಳುವ ಗುಣ ಹೊಂದಿರುವುದರಿಂದ ವಾಸನೆ ಕಡಿಮೆಯಾಗುತ್ತದೆ. ಬೆಳಗ್ಗೆ ಉಪ್ಪನ್ನು ಕೊಡವಿ ಶೂಗಳನ್ನು ಗಾಳಿಯಾಡುವ ಜಾಗದಲ್ಲಿಡಿ.

79
ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳ ಹೊಳಪು

ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳ ಹೊಳಪು
ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳು ಸಮಯ ಕಳೆದಂತೆ ಕಪ್ಪಾಗುತ್ತವೆ. ಇವುಗಳನ್ನು ಹೊಳೆಯುವಂತೆ ಮಾಡಲು ಉಪ್ಪು ಮತ್ತು ನಿಂಬೆ ರಸದ ಮಿಶ್ರಣವನ್ನು ಬಳಸಿ. ಪಾತ್ರೆಯ ಮೇಲೆ ಈ ಮಿಶ್ರಣವನ್ನು ಹಾಕಿ ಹಗುರವಾಗಿ ಉಜ್ಜಿ, ನಂತರ ತೊಳೆದು ತಕ್ಷಣ ಒಣ ಬಟ್ಟೆಯಿಂದ ಒರೆಸಿ. ಪಾತ್ರೆಗಳು ಮತ್ತೆ ಹೊಸದರಂತೆ ಹೊಳೆಯುತ್ತವೆ.

89
ಪಾತ್ರೆಗಳ ಜಿಡ್ಡು ತೆಗೆಯಲು ಸುಲಭ ದಾರಿ

ಪಾತ್ರೆಗಳ ಜಿಡ್ಡು ತೆಗೆಯಲು ಸುಲಭ ದಾರಿ
ಎಣ್ಣೆ ಅಥವಾ ಮಸಾಲೆ ಜಿಡ್ಡು ಹೆಚ್ಚಿರುವ ಕಡಾಯಿ ಅಥವಾ ತಟ್ಟೆಗಳನ್ನು ತೊಳೆಯುವುದು ಕಷ್ಟದ ಕೆಲಸ. ಅಂತಹ ಪಾತ್ರೆಗಳ ಮೇಲೆ ಸ್ವಲ್ಪ ಉಪ್ಪು ಚಿಮುಕಿಸಿ ಸ್ವಲ್ಪ ಹೊತ್ತು ಬಿಡಿ. ಉಪ್ಪು ಜಿಡ್ಡನ್ನು ಹೀರಿಕೊಳ್ಳುತ್ತದೆ, ನಂತರ ಡಿಶ್ ವಾಶ್ ಲಿಕ್ವಿಡ್‌ನಿಂದ ತೊಳೆದರೆ ಜಿಡ್ಡು ಸುಲಭವಾಗಿ ಹೋಗುತ್ತದೆ.

99
ರುಚಿಗಾಗಿ ಮಾತ್ರವಲ್ಲ, ಸ್ವಚ್ಛತೆಗೂ ಬಳಸಿ...

ರುಚಿಗಾಗಿ ಮಾತ್ರವಲ್ಲ, ಸ್ವಚ್ಛತೆಗೂ ಬಳಸಿ…
ಈ ಸರಳ ಹಂತಗಳು ದುಬಾರಿ ಕ್ಲೀನಿಂಗ್ ಪ್ರಾಡಕ್ಟ್‌ಗಳ ಮೇಲಿನ ಅವಲಂಬನೆಯನ್ನು ತಗ್ಗಿಸಿ ನಿಮ್ಮ ಸಮಯ ಮತ್ತು ಹಣವನ್ನು ಉಳಿಸುತ್ತದೆ. ಅಡುಗೆ ಮನೆಯಲ್ಲಿರುವ ಉಪ್ಪನ್ನು ಕೇವಲ ರುಚಿಗಾಗಿ ಮಾತ್ರವಲ್ಲದೆ, ಇನ್ಮುಂದೆ ಸ್ವಚ್ಛತೆಗೂ ಬಳಸಿ ನೋಡಿ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories