ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲ್ಲಲೇಬೇಕು ಅನ್ನೋ ಛಲ ಕೆಲವರಿಗೆ ಜಾಸ್ತಿ. ಅಚಲವಾದ ಆತ್ಮವಿಶ್ವಾಸ, ಅಸಾಮಾನ್ಯ ಮನೋಭಾವದಿಂದ ಯಶಸ್ಸನ್ನು ತಮ್ಮದಾಗಿಸಿಕೊಳ್ಳುವ ಆ ರಾಶಿಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಜೀವನದಲ್ಲಿ ಮುಂದೆ ಬರಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಆದರೆ, ಅಂದುಕೊಂಡ ಗುರಿ ತಲುಪಲು ತಮ್ಮ ಸೌಕರ್ಯ, ನಿದ್ದೆ, ಟೀಕೆಗಳನ್ನು ಲೆಕ್ಕಿಸದೆ ಯಾವ ಹಂತಕ್ಕೂ ಹೋಗಲು ಸಿದ್ಧರಿರುವ ಕೆಲವು ರಾಶಿಗಳಿವೆ. ಇವರು ಸದ್ದಿಲ್ಲದೆ ಕೆಲಸ ಮಾಡಿ, ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸುತ್ತಾರೆ. ಅಂತಹ ಛಲ ಮತ್ತು ಹಠಮಾರಿ ಗುಣವಿರುವ 5 ರಾಶಿಗಳ ಬಗ್ಗೆ ಇಲ್ಲಿ ತಿಳಿಯೋಣ.
26
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರು ತಮ್ಮ ನಿಜವಾದ ಯೋಜನೆಗಳನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ. ತಮ್ಮ ದಾರಿಯಲ್ಲಿ ಬರುವ ಅಡೆತಡೆಗಳನ್ನು ಮುರಿಯಲು ಇವರು ಆಳವಾದ ಸಂಶೋಧನೆ ಮತ್ತು ತಂತ್ರಗಳನ್ನು ರೂಪಿಸುವುದರಲ್ಲಿ ನಿಪುಣರು. ಶತ್ರುಗಳನ್ನೂ ತಮಗೆ ಅನುಕೂಲಕರವಾಗಿ ಬಳಸಿಕೊಂಡು, ಗುರಿ ತಲುಪುವವರೆಗೂ ಹಿಂದೆ ಸರಿಯದ ವಿಚಿತ್ರವಾದ ಹಠ ಇವರದ್ದು.
36
ಮಕರ ರಾಶಿ:
ಶನಿ ಗ್ರಹದ ಪ್ರಭಾವವಿರುವ ಮಕರ ರಾಶಿಯವರಿಗೆ ಗುರಿಯೇ ಉಸಿರು. ಯಶಸ್ಸಿಗಾಗಿ ಇವರು ತಮ್ಮ ಸ್ವಂತ ಆಸೆ, ಆಕಾಂಕ್ಷೆ ಮತ್ತು ವಿಶ್ರಾಂತಿಯನ್ನು ಸಂಪೂರ್ಣವಾಗಿ ತ್ಯಾಗ ಮಾಡಲು ಹಿಂಜರಿಯುವುದಿಲ್ಲ. ಎಷ್ಟೇ ದೊಡ್ಡ ಸವಾಲಾಗಿದ್ದರೂ, ಸಮಯವನ್ನು ಲೆಕ್ಕಿಸದೆ ಅದನ್ನು ಯಶಸ್ವಿಯಾಗಿ ಮುಗಿಸುವ ಅಸಾಧಾರಣ ಮನೋಬಲ ಇವರಲ್ಲಿದೆ.
46
ಮೇಷ ರಾಶಿ:
ಮಂಗಳನ ಕಾರಕತ್ವ ಹೊಂದಿರುವ ಮೇಷ ರಾಶಿಯವರು, ಅಪಾಯಕಾರಿ ದಾರಿಯಾದರೂ ಧೈರ್ಯದಿಂದ ಮೊದಲ ಹೆಜ್ಜೆ ಇಡುತ್ತಾರೆ. 'ಸೋಲು' ಎಂಬ ಪದವನ್ನೇ ತಮ್ಮ ನಿಘಂಟಿನಲ್ಲಿ ಇಟ್ಟುಕೊಳ್ಳದ ಇವರು, ಎಲ್ಲವನ್ನೂ ತಕ್ಷಣವೇ ಮಾಡಿ ಮುಗಿಸುವ ವೇಗ ಮತ್ತು ಯಾವುದೇ ಹಂತಕ್ಕೆ ಹೋಗಿ ಗೆಲ್ಲುವ ಹೋರಾಟದ ಮನೋಭಾವದಿಂದ ಕೆಲಸ ಮಾಡುತ್ತಾರೆ.
56
ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಸೋಲುವುದು ಎಂದರೆ ತಮ್ಮ ಸ್ವಾಭಿಮಾನಕ್ಕೆ ಸವಾಲು ಹಾಕಿದಂತೆ. ಸೂರ್ಯನ ಪ್ರಭಾವದಲ್ಲಿರುವ ಇವರು, ಸಮಾಜದಲ್ಲಿ ತಮ್ಮ ಅಧಿಕಾರ ಮತ್ತು ಖ್ಯಾತಿಯನ್ನು ಉಳಿಸಿಕೊಳ್ಳಲು ಯಾವುದೇ ಕಠಿಣ ಪರಿಶ್ರಮ ಪಟ್ಟು ಸಾಧನೆ ಮಾಡುತ್ತಾರೆ. ಇತರರು ಕೈಬಿಟ್ಟ ಕೆಲಸವನ್ನು ತಮ್ಮ ಸಾಮರ್ಥ್ಯದಿಂದ ಸಾಧಿಸಿ ತೋರಿಸುತ್ತಾರೆ.
66
ಮಿಥುನ ರಾಶಿ:
ಬುಧನ ಕೃಪೆ ಪಡೆದ ಮಿಥುನ ರಾಶಿಯವರು ತಮ್ಮ ಬುದ್ಧಿವಂತಿಕೆ ಮತ್ತು ಚತುರ ಮಾತಿನಿಂದ ಕೆಲಸ ಸಾಧಿಸುತ್ತಾರೆ. ನೇರ ದಾರಿಯಲ್ಲಿ ಗೆಲುವು ಸಿಗದಿದ್ದರೆ, ಪರ್ಯಾಯ ಮಾರ್ಗ ಮತ್ತು ಹೊಸ ತಂತ್ರಗಳನ್ನು ತಕ್ಷಣವೇ ಕಂಡುಕೊಂಡು, ಯಾವುದೇ ಪರಿಸ್ಥಿತಿಯನ್ನು ತಮಗೆ ಅನುಕೂಲಕರವಾಗಿ ಬದಲಾಯಿಸಿಕೊಳ್ಳುವ ವಿಶಿಷ್ಟ ಸಾಮರ್ಥ್ಯ ಇವರಲ್ಲಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.