ಹಾಲು ಹೆಪ್ಪಾಕೋಕೆ ಮೊಸರು ಬೇಕಿಲ್ಲ, ಇದೊಂದು ಕಲ್ಲಿದ್ರೆ ಸಾಕು

Published : Apr 25, 2026, 02:47 PM IST

Habur stone curd : ಮೊಸರು ಹೇಗೆ ಮಾಡ್ತಾರೆ? ಎಲ್ಲರಿಗೂ ಗೊತ್ತಿರುವ ವಿಷ್ಯ. ಹಾಲಿಗೆ ಸ್ವಲ್ಪ ಹಳೆ ಮೊಸರು ಹಾಕಿದ್ರೆ ಮೊಸರು ಸಿದ್ಧವಾಗುತ್ತೆ. ಆದ್ರೆ ಬರೀ ಮೊಸರಲ್ಲ ನೀವು ಒಂದು ಕಲ್ಲನ್ನು ಹಾಕಿ ಕೂಡ ಹಾಲನ್ನು ಮೊಸರು ಮಾಡ್ಬಹುದು. 

PREV
16
ಮೊಸರು ಮಾಡೋದು ಹೇಗೆ?

ಮಾರ್ಕೆಟ್ ನಲ್ಲಿ ಬೇರೆ ಬೇರೆ ಬ್ರ್ಯಾಂಡ್ ನ ಪ್ಯಾಕೆಟ್ ಮೊಸರು ಸಿಗುತ್ತೆ. ಆದ್ರೆ ಮನೆಯಲ್ಲಿ ರೆಡಿಯಾದ ಮೊಸರಿಗೆ ವಿಶೇಷ ರುಚಿ ಇರುತ್ತೆ. ಹಾಲನ್ನು ಮೊಸರು ಹೇಗೆ ಮಾಡ್ತಾರೆ ಅಂತ ನಮ್ಮನ್ನು ಕೇಳ್ದಾಗ ನಾವು ತಟ್ಟಂತ ಉತ್ತರ ನೀಡ್ತೇವೆ. ಹಾಲಿಗೆ ಸ್ವಲ್ಪ ಹಳೆ ಮೊಸರು ಹಾಕಿ ಹೆಪ್ಪು ಹಾಕಿದ್ರೆ ಮೊಸರಾಗುತ್ತೆ ಅಂತ. ಆದ್ರೆ ಬರೀ ಈ ವಿಧಾನ ಮಾತ್ರವಲ್ಲ ಹೆಪ್ಪು ಹಾಕೋಕೆ ಅಚ್ಚರಿ ವಿಧಾನವೊಂದಿದೆ.

26
ಮೊಸರಿನ ಕಲ್ಲು

ಭಾರತದ ಕೆಲ ಪ್ರದೇಶದಲ್ಲಿ ಹಾಲನ್ನು ಮೊಸರು ಮಾಡೋಕೆ ಮೊಸರು ಹಾಕೋದಿಲ್ಲ. ಅದ್ರ ಬದಲು ವಿಶೇಷ ಕಲ್ಲೊಂದನ್ನು ಬಳಸ್ತಾರೆ. ಸಾಮಾನ್ಯ ಭಾಷೆಯಲ್ಲಿ ಅದಕ್ಕೆ ಮೊಸರು ಕಲ್ಲು ಎನ್ನಲಾಗುತ್ತದೆ. ಆದ್ರೆ ಅದ್ರ ನಿಜವಾದ ಹೆಸರು ಹಬರ್ ಕಲ್ಲು. ಈ ಕಲ್ಲು ನೈಸರ್ಗಿಕವಾಗಿ ಹಾಲನ್ನು ಮೊಸರಾಗಿ ಪರಿವರ್ತಿಸುವ ಶಕ್ತಿ ಹೊಂದಿದೆ.

36
ಹಬರ್ ಕಲ್ಲು

ರಾಜಸ್ಥಾನದ ಜೈಸಲ್ಮೇರ್ ಸುತ್ತಲೂ ಕಂಡುಬರುವ ವಿಶೇಷ ರೀತಿಯ ಹಳದಿ ಕಲ್ಲು ಇದು. ಇದು ಹಾಲನ್ನು ನೈಸರ್ಗಿಕವಾಗಿ ಮೊಸರು ಮಾಡಲು ಸಹಾಯ ಮಾಡುತ್ತದೆ. ಜನರು ಇದನ್ನು ಸಣ್ಣ ತುಂಡುಗಳು, ಪಿರಮಿಡ್ಗಳು ಅಥವಾ ಪಾತ್ರೆಗಳಲ್ಲಿ ಬಳಸುತ್ತಾರೆ. ಹಾಲಿನಲ್ಲಿ ಇದನ್ನು ಇಟ್ಟಾಗ ಹಾಲು ದಪ್ಪವಾಗುತ್ತದೆ. 10-12 ಗಂಟೆಗಳಲ್ಲಿ ಕೆನೆ ಮೊಸರು ಸಿದ್ಧವಾಗುತ್ತೆ.

46
ಹಬರ್ ಕಲ್ಲು ಹೇಗೆ ಕೆಲಸ ಮಾಡುತ್ತೆ?

ಹಬರ್ ಕಲ್ಲಿನ ಸಣ್ಣ ತುಂಡನ್ನು ಬೆಚ್ಚಗಿನ ಹಾಲಿಗೆ ಸೇರಿಸಿದಾಗ ಅದರಲ್ಲಿರುವ ನೈಸರ್ಗಿಕ ಬ್ಯಾಕ್ಟೀರಿಯಾಗಳು ಸಕ್ರಿಯವಾಗುತ್ತವೆ. ಈ ಬ್ಯಾಕ್ಟೀರಿಯಾಗಳು ಹಾಲನ್ನು ಹುಳಿಯಾಗಿ ಪರಿವರ್ತಿಸುತ್ತವೆ. ಈ ಕಲ್ಲು ಬ್ಯಾಕ್ಟೀರಿಯಾದಂತೆ ಕಾರ್ಯನಿರ್ವಹಿಸುತ್ತದೆ.

56
ಎಲ್ಲ ಕಲ್ಲು ಯೋಗ್ಯವೇ?

ಈ ಹಬರ್ ಕಲ್ಲುಗಳನ್ನು ಸಾಮಾನ್ಯವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಅಥವಾ ವಿಶೇಷ ಖನಿಜಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಕಾಣ್ಬಹುದು. ಪ್ರತಿಯೊಂದು ಕಲ್ಲು ಮೊಸರು ಮಾಡಲು ಸಾಧ್ಯವಿಲ್ಲ. ಕೆಲವು ಕಲ್ಲುಗಳು ಮಾತ್ರ ಈ ಗುಣವನ್ನು ಹೊಂದಿರುತ್ತವೆ. ಹಾಗಾಗಿ ಸರಿಯಾಗಿ ಪತ್ತೆ ಮಾಡಿ ಕಲ್ಲನ್ನು ಬಳಕೆ ಮಾಡಬೇಕಾಗುತ್ತದೆ. ಮಾಹಿತಿ ಇಲ್ದೆಯಾವ್ದಯಾವ್ದೋ ಕಲ್ಲನ್ನು ಬಳಸುವುದು ಸೂಕ್ತವಲ್ಲ. ಕೆಲ ಕಲ್ಲುಗಳು ಹಾನಿಕಾರಕವಾಗಿರುತ್ತವೆ. ಅವು ನಿಮ್ಮ ಆರೋಗ್ಯ ಹಾಳ್ಮಾಡಬಹುದು.

66
ಈಗ್ಲೂ ಹಬರ್ ಕಲ್ಲು ಬಳಕೆಯಲ್ಲಿದ್ಯಾ?

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಹಳೆ ಮೊಸರನ್ನೇ ಹೆಪ್ಪಿಗೆ ಬಳಸ್ತಾರೆ. ಕೆಲ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಈ ಪದ್ಧತಿ ಈಗ್ಲೂ ಜಾರಿಯಲ್ಲಿದೆ. ಹಬರ್ ಕಲ್ಲು ಬಳಸಿ ಮೊಸರು ತಯಾರಿಸೋದು ಹಳೆ ಸಂಪ್ರದಾಯದ ಒಂದು ಭಾಗವಾಗಿದೆ. ನೀವೂ ಮೊಸರು ತಯಾರಿಸಲು ಈ ಕಲ್ಲನ್ನು ಟ್ರೈ ಮಾಡ್ಬಹುದು. ಆದ್ರೆ ಕಲ್ಲಿನ ಬಗ್ಗೆ ಸರಿಯಾದ ಮಾಹಿತಿ ಇಲ್ದೆ ಟ್ರೈ ಮಾಡ್ಬೇಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories