Food Storage Tips: ಅಡುಗೆ ಮಾಡಿದ ತಕ್ಷಣ ಆಹಾರವನ್ನು ಫ್ರಿಡ್ಜ್‌ನಲ್ಲಿಡಬೇಕೇ ಅಥವಾ ಬೇಡವೇ? ಬೇಯಿಸಿದ ಆಹಾರವನ್ನು ಕೊಠಡಿಯ ತಾಪಮಾನದಲ್ಲಿ ಎಷ್ಟು ಸಮಯ ಇಡಬಹುದು ಮತ್ತು ಆಹಾರ ಸುರಕ್ಷತೆಯ ಸರಿಯಾದ ನಿಯಮಗಳೇನು ಎಂಬುದನ್ನು ಇಲ್ಲಿ ತಿಳಿಯಿರಿ.
ಆಹಾರ ತಯಾರಿಸಿದ ಎಷ್ಟು ಗಂಟೆಗಳ ನಂತರ ಫ್ರಿಡ್ಜ್‌ನಲ್ಲಿಡಬೇಕು?
ಜನರು ಸಾಮಾನ್ಯವಾಗಿ ಬೇಯಿಸಿದ ಆಹಾರವನ್ನು ಗಂಟೆಗಟ್ಟಲೆ ಹೊರಗೆ ಬಿಟ್ಟು ನಂತರ ಫ್ರಿಜ್ ನಲ್ಲಿಡುತ್ತಾರೆ.. ಈ ಅಭ್ಯಾಸವು ಆಹಾರದ ಗುಣಮಟ್ಟವನ್ನು ಹಾಳುಮಾಡುವುದಲ್ಲದೆ, ಫುಡ್ ಪಾಯ್ಸನ್ ಆಗುವ ಅಪಾಯವನ್ನು ಹೆಚ್ಚಿಸುತ್ತದೆ. ಆಹಾರ ಮತ್ತು ರೆಫ್ರಿಜರೇಟರ್ ಎರಡರ ಸುರಕ್ಷತೆಗಾಗಿ ಆಹಾರವನ್ನು ಯಾವ ಸಮಯದಲ್ಲಿ ಫ್ರಿಜ್ ನಲ್ಲಿಡಬೇಕು ಎನ್ನುವುದನ್ನು ನೋಡೋಣ.
26
ಎರಡು ಗಂಟೆಗಳಲ್ಲಿ ಫ್ರಿಜ್ ನಲ್ಲಿಡಿ:
ಬಿಸಿ ಮಾಡಿದ ಆಹಾರವನ್ನು ಕೋಣೆಯ ಉಷ್ಣಾಂಶದಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಇಡಬಾರದು ಎಂದು ತಜ್ಞರು ಹೇಳುತ್ತಾರೆ. ಹವಾಮಾನವು ತುಂಬಾ ಬಿಸಿಯಾಗಿದ್ದರೆ ಮತ್ತು ತಾಪಮಾನವು 32 ಡಿಗ್ರಿ ಸೆಲ್ಸಿಯಸ್ ಮೀರಿದರೆ, ಆಹಾರವನ್ನು ಒಂದು ಗಂಟೆಯೊಳಗೆ ರೆಫ್ರಿಜರೇಟ್ ಮಾಡಬೇಕು. ಆಹಾರವನ್ನು ಹೆಚ್ಚು ಹೊತ್ತು ಹೊರಗೆ ಬಿಡುವುದರಿಂದ ಬ್ಯಾಕ್ಟೀರಿಯಾ ಬೆಳೆಯುತ್ತದೆ.
36
ರೆಫ್ರಿಜರೇಟರ್‌ನಲ್ಲಿ ಬಿಸಿ ಆಹಾರ ಸಂಗ್ರಹಿಸಬೇಡಿ
ಆದರೆ ತುಂಬಾ ಬಿಸಿಯಾದ ಆಹಾರ ಪಾತ್ರೆಯನ್ನು ಸ್ಟೌವ್‌ನಿಂದ ನೇರವಾಗಿ ತೆಗೆದು ರೆಫ್ರಿಜರೇಟರ್‌ನಲ್ಲಿ ಇಡುವುದು ಸಹ ತಪ್ಪು. ತುಂಬಾ ಬಿಸಿಯಾದ ಆಹಾರವು ರೆಫ್ರಿಜರೇಟರ್‌ನೊಳಗಿನ ತಾಪಮಾನವನ್ನು ಹೆಚ್ಚಿಸಬಹುದು, ಇದರಿಂದ ಅಲ್ಲಿ ಸಂಗ್ರಹವಾಗಿರುವ ಇತರ ಆಹಾರದ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ, ಇದು ರೆಫ್ರಿಜರೇಟರ್‌ನ ಕಂಪ್ರೆಸರ್ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ, ಅದರ ದಕ್ಷತೆಯನ್ನು ಕಡಿಮೆ ಮಾಡುತ್ತದೆ.
ರೆಫ್ರಿಜರೇಟರ್‌ನಲ್ಲಿ ತಣ್ಣನೆಯ ಆಹಾರ ಮಾತ್ರ ಇರಿಸಿ. ಬಿಸಿ ಆಹಾರವನ್ನು ಕೋಣೆಯ ಉಷ್ಣಾಂಶದಲ್ಲಿ ಸ್ವಲ್ಪ ಸಮಯದವರೆಗೆ ತಣ್ಣಗಾಗಲು ಬಿಟ್ಟು. ಅದು ತಣ್ಣಗಾದ ನಂತರವಷ್ಟೇ ಫ್ರಿಜ್ ನಲ್ಲಿಡಿ. ಆಹಾರ ಹೆಚ್ಚಿನ ಪ್ರಮಾಣದಲ್ಲಿದ್ದರೆ, ಅದನ್ನು ದೊಡ್ಡ ಪಾತ್ರೆಯಲ್ಲಿ ಹರಡಿ ತಣ್ಣಗಾದ ಮೇಲೆ ಫ್ರಿಜ್ ನಲ್ಲಿಡಿ.
56
ಆಹಾರವನ್ನು ಯಾವಾಗಲೂ ಮುಚ್ಚಿಡಿ
ಫ್ರಿಜ್ ನಲ್ಲಿ ಆಹಾರವನ್ನು ಇಡುವಾಗ ಯಾವಾಗಲೂ ಸ್ವಚ್ಛವಾದ, ಮುಚ್ಚಿದ ಪಾತ್ರೆಗಳಲ್ಲಿ ಸಂಗ್ರಹಿಸಿ. ತೆರೆದ ಪಾತ್ರೆಗಳಲ್ಲಿ ಸಂಗ್ರಹಿಸಲಾದ ಆಹಾರವು ತೇವಾಂಶ ಮತ್ತು ವಾಸನೆಯನ್ನು ಬಿಡುಗಡೆ ಮಾಡುತ್ತದೆ, ಇದು ರೆಫ್ರಿಜರೇಟರ್‌ನಲ್ಲಿ ಕೆಟ್ಟ ವಾಸನೆಯನ್ನು ಉಂಟುಮಾಡುತ್ತದೆ. ಇದು ಇತರ ಆಹಾರ ಪದಾರ್ಥಗಳ ಮೇಲೂ ಪರಿಣಾಮ ಬೀರುತ್ತದೆ.
66
ಕಿವಿಮಾತು
ಉಳಿದ ಆಹಾರವನ್ನು ಸಾಮಾನ್ಯವಾಗಿ 3 ರಿಂದ 4 ದಿನಗಳಲ್ಲಿ ಮರು ಬಳಕೆ ಮಾಡಬೇಕು. ಹೆಚ್ಚು ಸಮಯ ಸಂಗ್ರಹಿಸಬೇಕಾದರೆ, ಅದನ್ನು ಫ್ರೀಜರ್‌ನಲ್ಲಿ ಸಂಗ್ರಹಿಸುವುದು ಉತ್ತಮ. ಬೇಯಿಸಿದ ಆಹಾರವನ್ನು ಸ್ವಲ್ಪ ತಣ್ಣಗಾಗಿಸಿ 2 ಗಂಟೆಗಳ ಒಳಗೆ ಫ್ರೀಜ್ ಮಾಡುವ ವಿಧಾನ ಸುರಕ್ಷಿತವಾಗಿದೆ. ಇದು ಆಹಾರದ ತಾಜಾತನವನ್ನು ಕಾಪಾಡುತ್ತದೆ, ಬ್ಯಾಕ್ಟೀರಿಯಾದ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ರೆಫ್ರಿಜರೇಟರ್ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.