ಕುಕ್ಕರ್ ಗ್ಯಾಸ್ಕೆಟ್ ಒಂದಲ್ಲ, ಎರಡಲ್ಲ ವರ್ಷಗಟ್ಟಲೇ ಬಾಳಿಕೆ ಬರುತ್ತೆ.. ಫ್ರಿಡ್ಜ್ ಬೇಡ, ಈ ಟ್ರಿಕ್ ಟ್ರೈ ಮಾಡಿ

Published : Oct 14, 2026, 02:34 PM IST

Pressure Cooker Gasket Tips: ಕುಕ್ಕರ್‌ನಿಂದ ನೀರು ಲೀಕ್ ಆಗುವುದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಎದುರಾಗುವ ಕಿರಿಕಿರಿ. ಇದಕ್ಕೆ ಮುಖ್ಯ ಕಾರಣ ಕುಕ್ಕರ್‌ನ ಗ್ಯಾಸ್ಕೆಟ್ ಬೇಗ ಸಡಿಲವಾಗುವುದು. ಆದರೆ ಈ ಸಿಂಪಲ್ ಟ್ರಿಕ್ ಬಳಸಿದರೆ ಲೀಕೇಜ್ ತಡೆದು, ಬೆಲ್ಟ್ ಹಲವು ತಿಂಗಳು ಬಾಳಿಕೆ ಬರುತ್ತೆ.

PREV
14
ಪರಿಣಾಮಕಾರಿಯಾದ ಸರಳ ಉಪಾಯ

ಪರಿಣಾಮಕಾರಿಯಾದ ಸರಳ ಉಪಾಯ
ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಪ್ರೆಶರ್ ಕುಕ್ಕರ್ ಬಳಕೆ ಅನಿವಾರ್ಯ. ಆದರೆ ಹಲವು ಬಾರಿ ಕುಕ್ಕರ್‌ನ ಗ್ಯಾಸ್ಕೆಟ್ (ರಬ್ಬರ್ ಬೆಲ್ಟ್) ಬೇಗನೆ ಸಡಿಲಗೊಂಡು, ಅಡುಗೆ ಮಾಡುವಾಗ ಗಾಳಿ ಅಥವಾ ನೀರು ಹೊರಗೆ ಲೀಕ್ ಆಗುವ ಸಮಸ್ಯೆ ಎದುರಾಗುತ್ತದೆ. ಈ ಬೆಲ್ಟ್ ಹೆಚ್ಚು ದಿನ ಬಾಳಿಕೆ ಬರಲು ಹಲವರು ಅದನ್ನು ಫ್ರಿಡ್ಜ್‌ನಲ್ಲಿಡುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಆದರೆ ಅದಕ್ಕಿಂತಲೂ ಪರಿಣಾಮಕಾರಿಯಾದ ಸರಳ ಉಪಾಯವೊಂದಿದೆ.

24
ಬೆಲ್ಟ್ ಹೆಚ್ಚು ದಿನ ಬಾಳಿಕೆ ಬರಲು ಏನು ಮಾಡ್ಬೇಕು?

ಬೆಲ್ಟ್ ಹೆಚ್ಚು ದಿನ ಬಾಳಿಕೆ ಬರಲು ಏನು ಮಾಡ್ಬೇಕು?
ಕುಕ್ಕರ್ ಗ್ಯಾಸ್ಕೆಟ್ ಅನ್ನು ಪದೇಪದೆ ಫ್ರಿಡ್ಜ್‌ನಲ್ಲಿಡುವ ಅಗತ್ಯವಿಲ್ಲ. ಬದಲಾಗಿ, ಕುಕ್ಕರ್ ಮುಚ್ಚುವ ಮುನ್ನ ಬೆಲ್ಟ್ ಅನ್ನು ನಳದ (ಟ್ಯಾಪ್) ತಣ್ಣೀರಿನಲ್ಲಿ ಚೆನ್ನಾಗಿ ತೊಳೆದು, ಕೈಬೆರಳುಗಳಿಂದ ಹಗುರವಾಗಿ ಸವರಿ ಕುಕ್ಕರ್ ಮುಚ್ಚಳಕ್ಕೆ ಜೋಡಿಸಬೇಕು.

34
ಇದರಿಂದಾಗುವ ಪ್ರಯೋಜನಗಳೇನು?

ಇದರಿಂದಾಗುವ ಪ್ರಯೋಜನಗಳೇನು?
*ತಣ್ಣೀರಿನ ಸ್ಪರ್ಶದಿಂದ ರಬ್ಬರ್ ತನ್ನ ಸ್ಥಿತಿಸ್ಥಾಪಕತ್ವವನ್ನು (elasticity) ಉಳಿಸಿಕೊಳ್ಳುತ್ತದೆ ಮತ್ತು ಬೇಗ ಲೂಸ್ ಆಗುವುದಿಲ್ಲ.
*ಕುಕ್ಕರ್ ಮುಚ್ಚಳಕ್ಕೆ ಬೆಲ್ಟ್ ಸರಿಯಾಗಿ ಗ್ರಿಪ್ ಆಗಿ ಕುಳಿತುಕೊಳ್ಳುವುದರಿಂದ, ಗಾಳಿ (ಪ್ರೆಶರ್) ಅಥವಾ ನೀರು ಹೊರಗೆ ಲೀಕ್ ಆಗುವ ಕಿರಿಕಿರಿ ತಪ್ಪುತ್ತದೆ.
*ಪದೇಪದೆ ಹೊಸ ಗ್ಯಾಸ್ಕೆಟ್ ಖರೀದಿಸುವ ಖರ್ಚಿಗೂ ಬ್ರೇಕ್ ಹಾಕಬಹುದು.
*ನಿಮ್ಮ ಮನೆಯಲ್ಲೂ ಕುಕ್ಕರ್ ಲೀಕ್ ಆಗುವ ಸಮಸ್ಯೆ ಇದ್ದರೆ ಇಂದೇ ಈ ಸುಲಭ ಕಿಚನ್ ಟ್ರಿಕ್ ಟ್ರೈ ಮಾಡಿ.

44
ಇದು ಗಮನದಲ್ಲಿರಲಿ..

ಇದು ಗಮನದಲ್ಲಿರಲಿ..
ಸ್ಟೋರ್ ಮಾಡುವಾಗ ಈ ತಪ್ಪು ಮಾಡ್ಬೇಡಿ
ಅಡುಗೆ ಆದ ನಂತರ ಕುಕ್ಕರ್ ಮುಚ್ಚಳದಲ್ಲೇ ಬೆಲ್ಟ್ ಅನ್ನು ಸದಾ ಹಾಕಿ ಇಡಬೇಡಿ. ಮುಚ್ಚಳದಿಂದ ಬೆಲ್ಟ್ ಅನ್ನು ತೆಗೆದು ಪ್ರತ್ಯೇಕವಾಗಿ ಅಥವಾ ಹುಕ್‌ನಲ್ಲಿ ನೇತುಹಾಕಿ ಇಟ್ಟರೆ ರಬ್ಬರ್ ಸಡಿಲವಾಗುವುದು ತಕ್ಷಣಕ್ಕೆ ತಪ್ಪುತ್ತದೆ.

ಈಗಾಗಲೇ ಸ್ವಲ್ಪ ಲೂಸ್ ಆಗಿದ್ದರೆ ಏನ್ ಮಾಡ್ಬೇಕು?
ಬೆಲ್ಟ್ ಸ್ವಲ್ಪ ಸಡಿಲವಾಗಿದ್ದರೆ, ಕುಕ್ಕರ್‌ಗೆ ಹಾಕುವ 10 ನಿಮಿಷಗಳ ಮೊದಲು ಅದನ್ನು ಐಸ್ ವಾಟರ್‌ನಲ್ಲಿ (ಐಸ್ ತುಂಡುಗಳಿರುವ ತಣ್ಣೀರಿನಲ್ಲಿ) ಹಾಕಿಡಿ. ರಬ್ಬರ್ ಸಂಕೋಚನಗೊಂಡು (tight ಆಗಿ) ಮುಚ್ಚಳಕ್ಕೆ ಸರಿಯಾಗಿ ಗ್ರಿಪ್ ಸಿಗುತ್ತದೆ.

ಸ್ಕ್ರಬ್ಬರ್ ಅಥವಾ ಕಠಿಣ ಸಾಬೂನು ಬಳಸಬೇಡಿ
ಬೆಲ್ಟ್ ತೊಳೆಯುವಾಗ ಸ್ಟೀಲ್ ಸ್ಕ್ರಬ್ಬರ್ ಅಥವಾ ಗಟ್ಟಿಯಾದ ಸಾಬೂನು ಹಚ್ಚಬೇಡಿ. ಮೃದುವಾದ ಸ್ಪಾಂಜ್ ಮತ್ತು ಮೈಲ್ಡ್ ಲಿಕ್ವಿಡ್ ಮಾತ್ರ ಬಳಸಿ.

ಯಾವಾಗ ಬದಲಾಯಿಸಬೇಕು?
ಬೆಲ್ಟ್ ಬಿರುಕು ಬಿಟ್ಟಿದ್ದರೆ, ಗಟ್ಟಿಯಾಗಿದ್ದರೆ ಅಥವಾ ಕಪ್ಪಾಗಿದ್ದರೆ, ಯಾವುದೇ ಉಪಾಯ ಬಳಸದೆ ತಕ್ಷಣ ಹೊಸದನ್ನು ಖರೀದಿಸುವುದೇ ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories