ಕುಕ್ಕರ್ ವಿಷಲ್ ಬರೋ ಮುನ್ನವೇ ಹಬೆ ಹೊರಗೆ ಬರುತ್ತಿದ್ರೆ ಹುಷಾರ್! ಈ ತಪ್ಪು ಮಾಡಬೇಡಿ

Published : Oct 14, 2026, 02:18 PM IST

ಪ್ರೆಶರ್ ಕುಕ್ಕರ್ ವಿಷಲ್ ಕೂಗುವ ಮುನ್ನ ಹಬೆ ಹೊರಬರಲು ಹಲವು ಮುಖ್ಯ ಕಾರಣವಾಗಿದೆ. ನಿಮ್ಮ ಮನೆಯಲ್ಲಿಯೂ ವಿಷಲ್ ಮುಂಚೆಯೇ ಹಬೆ ಹೊರಗೆ ಬರುತ್ತಿದ್ರೆ, ಈ ಸಮಸ್ಯೆಗೆ ಕಾರಣ ಏನು ಮತ್ತು ಪರಿಹಾರ ಏನು ಎಂದು ತಿಳಿದುಕೊಳ್ಳಿ

PREV
15
ಪ್ರೆಶರ್ ಕುಕ್ಕರ್

ಪ್ರೆಶರ್ ಕುಕ್ಕರ್ ಇದ್ರೆ ಕಡಿಮೆ ಸಮಯದಲ್ಲಿ ಅಡುಗೆ ಮಾಡಬಹುದು. ಹಾಗಾಗಿ ಇಂದು ಎಲ್ಲರ ಮನೆಗಳಲ್ಲಿ ಎರಡರಿಂದ ಮೂರು ಕುಕ್ಕರ್‌ಗಳಿರುತ್ತವೆ. ತರಕಾರಿ, ಬೇಳೆ ಬೇಯಿಸಿಕೊಳ್ಳಲು, ರೈಸ್ ಮಾಡಲು ಕುಕ್ಕರ್ ಹೆಚ್ಚು ಬಳಕೆಯಾಗುತ್ತದೆ. ಆದ್ರೆ ಕೆಲವೊಮ್ಮೆ ಕುಕ್ಕರ್ ವಿಷಲ್ ಕೂಗುವ ಮುನ್ನವೇ ಮುಚ್ಚಳದ ಒಂದು ಬದಿಯಿಂದ ಹಬೆ ಬರಲು ಆರಂಭಿಸುತ್ತದೆ. ಇನ್ನು ಕೆಲವೊಮ್ಮೆ ಎಷ್ಟೇ ಸಮಯವಾದ್ರೂ ಶಿಳ್ಳೆಯೇ ಬರಲ್ಲ. ಇದಕ್ಕೆ ಕಾರಣ ಏನು ಎಂಬುದರ ಮಾಹಿತಿ ಇಲ್ಲಿದೆ.

25
ಯಾಕೆ ಹೀಗೆ ಆಗುತ್ತೆ?

ಕುಕ್ಕರ್ ಮುಚ್ಚಳದಲ್ಲಿರುವ ರಬ್ಬರ್ ಗ್ಯಾಸ್ಕೆಟ್ ಸರಿಯಾಗಿ ಹಾಕದಿದ್ರೆ, ಹಬೆ ಹೊರಗೆ ಬರುತ್ತದೆ. ರಬ್ಬರ್ ಗ್ಯಾಸ್ಕೆಟ್ ಕುಕ್ಕರ್‌ನೊಳಗಿನ ಹಬೆಯನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತೆ. ಹಾಗಾಗಿ ರಬ್ಬರ್ ಗ್ಯಾಸ್ಕೆಟ್ ಸರಿಯಾಗಿದೆಯಾ ಎಂಬುದನ್ನು ಚೆಕ್ ಮಾಡ್ಕೊಳ್ಳಿ.

35
ರಬ್ಬರ್ ಗ್ಯಾಸ್ಕೆಟ್

ರಬ್ಬರ್ ಗ್ಯಾಸ್ಕೆಟ್ ಹಳೆಯದಾಗಿದ್ರೆ ಅಥವಾ ಸಡಿಲಗೊಂಡಿದ್ರೆ ಅಥವಾ ತುಂಡರಿಸಿದ್ರೆ ವಿಷಲ್‌ಗೂ ಮುಂಚೆಯೇ ಹಬೆ ಹೊರಗೆ ಬರುತ್ತದೆ. ಕೆಲವೊಮ್ಮೆ ಮುಚ್ಚಳವನ್ನು ಸರಿಯಾಗಿ ಮುಚ್ಚದಿದ್ದ ಸಂದರ್ಭದಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮುಚ್ಚಳಕ್ಕೆ ರಬ್ಬರ್ ಗ್ಯಾಸ್ಕೆಟ್ ಹಾಕಿದ ನಂತ್ರವೇ ಒಲೆ ಮೇಲಿಟ್ಟುಕೊಂಡು ಅಡುಗೆ ಕೆಲಸ ಆರಂಭಿಸಿಕೊಳ್ಳಿ. ಹಲವು ಬಾರಿ ಅವಸರದಲ್ಲಿ ಮುಚ್ಚಳ ಸರಿಯಾಗಿ ಲಾಕ್ ಆಗಿರಲ್ಲ.

45
ಸ್ಟೀಮ್ ವೆಟ್

ಕೆಲವೊಮ್ಮೆ ವಿಷಲ್ ಬಳಿ ಅಂದ್ರೆ ಸಿಟಿಯೊಳಗೆ ಆಹಾರದ ಕಣಗಳು ಸಿಲುಕಿದ್ದಾಗಲೂ ಹಬೆ ಹೊರಗೆ ಬರಲಾರಂಭಿಸುತ್ತದೆ. ಕುಕ್ಕರ್‌ನೊಳಗೆ ಹೆಚ್ಚಾದ ಒತ್ತಡ ವಿಷಲ್‌ನಿಂದ ಹೊರಗೆ ಬರುತ್ತದೆ. ಈ ದಾರಿಯೇ ಮುಚ್ಚಿದ್ರೆ ಮುಚ್ಚಳದ ಒಂದು ಬದಿಯಿಂದ ಹಬೆ ಬರುತ್ತದೆ. ಹಾಗಾಗಿ ಸಿಟಿಯನ್ನು ಕ್ಲೀನ್ ಮಾಡುತ್ತಿರಬೇಕು.

55
ಎಚ್ಚರ ಇರಲಿ

ಈ ರೀತಿ ಹಬೆ ಬಂದಾಗ ಭಯಗೊಳ್ಳದೇ ಮೊದಲು ಒಲೆ ಆಫ್ ಮಾಡಿ. ನಂತರ ಹಬೆ ಹೋಗುವಿಕೆ ನಿಂತ ಮೇಲೆ ಮುಚ್ಚಳ ತೆಗೆದು ಕ್ಲೀನ್ ಮಾಡಬೇಕು. ಕುಕ್ಕರ್ ಬಿಸಿಯಾಗಿದ್ದ ಸಂದರ್ಭದಲ್ಲಿ ನೀರು ಹಾಕಿದ್ರೆ ಸ್ಪೋಟಗೊಳ್ಳುವ ಸಾಧ್ಯತೆಗಳಿರುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories