ಮೆತ್ತನೆಯ ಹಾಗೂ ಎಣ್ಣೆ ಹೀರಿಕೊಳ್ಳದಂತೆ ಗರಿ-ಗರಿಯಾದ ಪೂರಿ ಮಾಡೋದು ಹೇಗೆ?

Published : Aug 17, 2025, 09:46 PM IST

ಪೂರಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ಆದ್ರೆ ಪೂರಿ ಸರಿಯಾಗಿ ಉಬ್ಬಲ್ಲ, ಜಾಸ್ತಿ ಎಣ್ಣೆ ಹೀರಿಕೊಳ್ಳುತ್ತೆ ಅಂತ ತಲೆಕೆಡಿಸಿಕೊಳ್ಳುವವರೇ ಜಾಸ್ತಿ. ಮೆತ್ತನೆಯ, ಕಡಿಮೆ ಎಣ್ಣೆಯ ಪೂರಿ ಮಾಡೋದು ಹೇಗೆ ಅಂತ ಈಗ ನೋಡೋಣ. 

PREV
17
ಪೂರಿ

ದಕ್ಷಿಣ ಭಾರತದ ತಿಂಡಿಗಳಲ್ಲಿ ಒಂದಾಗಿರುವ ಪೂರಿ ಎಲ್ಲ ವಯಸ್ಸಿನವರಿಗೂ ಇಷ್ಟ. ಆದರೆ, ಕೆಲವೊಮ್ಮೆ ಪೂರಿ ಜಾಸ್ತಿ ಎಣ್ಣೆ ಹೀರಿಕೊಂಡು ಗಟ್ಟಿಯಾಗಿ ಆಗುತ್ತದೆ. ಆಗ ಮನೆಯವರು ಹೆಚ್ಚು ಇಷ್ಟಪಟ್ಟು ಪೂರಿ ತಿನ್ನದೇ ಹಾಗೆ ಬಿಟ್ಟುಬಿಡುತ್ತಾರೆ. ಮೆತ್ತಗೆ, ಕಡಿಮೆ ಎಣ್ಣೆ ಹೀರಿಕೊಳ್ಳುವಂತೆ ಪೂರಿ ಮಾಡೋದು ಹೇಗೆ ಎಂದು ಮನೆಯ ಮಹಿಳೆಯರು ತಲೆ ಕೆಡಿಸಿಕೊಂಡಿರುತ್ತಾರೆ. ಅದಕ್ಕೆ ಸಿಂಪಲ್ ಟಿಪ್ಸ್ ಇಲ್ಲಿವೆ ನೋಡಿ..

27
ಹಿಟ್ಟನ್ನು ಗಟ್ಟಿಯಾಗಿ ಕಲಸಬೇಕು

ಪೂರಿ ಹಿಟ್ಟನ್ನು ತುಂಬಾ ಮೆತ್ತಗೆ ಕಲಸುವುದರಿಂದ ಪೂರಿ ಜಾಸ್ತಿ ಎಣ್ಣೆ ಹೀರಿಕೊಳ್ಳುತ್ತವೆ. ಹಾಗಾಗಿ ಹಿಟ್ಟನ್ನು ಯಾವಾಗ್ಲೂ ಗಟ್ಟಿಯಾಗಿ ಕಲಸಬೇಕು. ಮೆತ್ತಗೆ ಕಲಸಿದರೆ ಪೂರಿ ಉಬ್ಬಲ್ಲ, ಮೆತ್ತಗೂ ಆಗಲ್ಲ.

37
ಹಿಟ್ಟಿನಲ್ಲಿ ಸ್ವಲ್ಪ ರವೆ ಹಾಕಿ

ಪೂರಿಗೆ ಹಿಟ್ಟನ್ನು ಕಲಸುವ ವೇಳೆ 2 ಚಮಚ ರವೆ ಮತ್ತು ಮೈದಾ ಹಿಟ್ಟು ಹಾಕಿ ಕಲಸಿ. ಇದರಿಂದ ಪೂರಿ ಗರಿಗರಿಯಾಗಿ, ಕಡಿಮೆ ಎಣ್ಣೆಯಲ್ಲಿ ಚೆನ್ನಾಗಿ ಉಬ್ಬುತ್ತದೆ. ಹಿಟ್ಟಿಗೆ ಒಂದು ಚಿಟಿಕೆ ಸಕ್ಕರೆ ಹಾಕಿದರೆ, ಪೂರಿ ಚೆನ್ನಾಗಿ ಕಲರ್ ಬರುತ್ತವೆ.

47
ಬಿಸಿ ನೀರಿನಲ್ಲಿ ಹಿಟ್ಟು ಕಲಸಿ

ಪೂರಿ ಹಿಟ್ಟನ್ನು ಯಾವಾಗ್ಲೂ ಬಿಸಿ ನೀರಿನಲ್ಲಿ ಕಲಸಬೇಕು. ಹೀಗೆ ಮಾಡಿದರೆ ಹಿಟ್ಟು ಚೆನ್ನಾಗಿ ಕಲಸುತ್ತದೆ. ಪೂರಿ ಗರಿಗರಿಯಾಗಿಯೂ ಇರುತ್ತದೆ. ಬಿಸಿ ನೀರಿನ ಜೊತೆಗೆ ಸ್ವಲ್ಪ ನಾರ್ಮಲ್ ನೀರನ್ನೂ ಹಾಕಬಹುದು.

57
15-20 ನಿಮಿಷ ಹಿಟ್ಟನ್ನು ನೆನಸಿಡಿ

ಹಿಟ್ಟು ಕಲಸಿದ ತಕ್ಷಣ ಪೂರಿ ಮಾಡಬಾರದು. ಹಿಟ್ಟಿಗೆ ಮುಚ್ಚಳ ಮುಚ್ಚಿ 15ರಿಂದ 20 ನಿಮಿಷ ಹಾಗೆ ಬಿಡಿ. ಹಿಟ್ಟಿನ ಮೇಲೆ ಸ್ವಲ್ಪ ಎಣ್ಣೆ ಹಚ್ಚಿ. ಇದರಿಂದ ಗಟ್ಟಿಯಾಗಿ ಕಲಸಿದ ಹಿಟ್ಟು ಮೆತ್ತಗಾಗುತ್ತದೆ. ಜೊತೆಗೆ, ಪೂರಿ ತಿನ್ನುವಾಗ ಸಾಫ್ಟ್ ಆಗಿರುತ್ತವೆ. ಈ ಟಿಪ್ಸ್ ಫಾಲೋ ಮಾಡಿದರೆ ಪೂರಿ ಮೆತ್ತಗೆ, ಚೆನ್ನಾಗಿ ಉಬ್ಬಿ, ಕಡಿಮೆ ಎಣ್ಣೆ ಹೀರಿಕೊಳ್ಳುತ್ತವೆ.

67
ಪೂರಿ ತೆಳ್ಳಗೆ/ದಪ್ಪಗೆ ಇರಬಾರದು

ಪೂರಿ ಚೆನ್ನಾಗಿ ಉಬ್ಬಬೇಕಂದರೆ ತುಂಬಾ ತೆಳ್ಳಗೆ ಅಥವಾ ದಪ್ಪಗೆ ಇರಬಾರದು. ತೆಳ್ಳಗಿದ್ದರೆ ಜಾಸ್ತಿ ಎಣ್ಣೆ ಹೀರಿಕೊಳ್ಳುತ್ತವೆ. ಇನ್ನು ಪೂರಿ ತುಂಬಾ ದಪ್ಪಗಿದ್ದರೆ ಸರಿಯಾಗಿ ಬೇಯುವುದಿಲ್ಲ. ಹಾಗಾಗಿ ಮೀಡಿಯಂ ದಪ್ಪ ಇರೋ ಹಾಗೆ ಪೂರಿ ಮಾಡಿ.

ಎಣ್ಣೆ ಚೆನ್ನಾಗಿ ಕಾಯಿಸಿ:

ಪೂರಿಯನ್ನು ತಣ್ಣನೆಯ ಎಣ್ಣೆಯಲ್ಲಿ ಹಾಕಬಾರದು. ಇದರಿಂದ ಪೂರಿ ಜಾಸ್ತಿ ಎಣ್ಣೆ ಹೀರಿಕೊಂಡು ಉಬ್ಬಲ್ಲ. ಮೀಡಿಯಂ ಉರಿಯಲ್ಲಿ ಎಣ್ಣೆ ಕಾಯಿಸಿ. ಎಣ್ಣೆ ಚೆನ್ನಾಗಿ ಕಾದ ಮೇಲೆ ಪೂರಿ ಹಾಕಿ. ಎಣ್ಣೆ ತುಂಬಾ ಕಾದರೂ ಪೂರಿ ಸರಿಯಾಗಿ ಬೇಯದೆ ಕಪ್ಪಗೆ ಆಗುತ್ತದೆ. ಹಾಗಾಗಿ ಎಣ್ಣೆ ಕಾದ ಮೇಲೆ ಉರಿ ಕಡಿಮೆ ಮಾಡಿ.

77
ಒಂದೇ ಬಾರಿಗೆ ಹಲವು ಪೂರಿ ಕರಿಯಬಾರದು

ಒಮ್ಮೆಲೆ ಹಲವು ಪೂರಿಗಳನ್ನು ಎಣ್ಣೆಯಲ್ಲಿ ಹಾಕಬಾರದು. ಹೀಗೆ ಮಾಡಿದರೆ ಪೂರಿ ಸರಿಯಾಗಿ ಬೇಯಲ್ಲ, ಉಬ್ಬಲ್ಲ. ಜಾಸ್ತಿ ಎಣ್ಣೆ ಹೀರಿಕೊಂಡು ರುಚಿಯೂ ಇರಲ್ಲ.

ಎಣ್ಣೆ ತೆಗೆಯಿರಿ:

ಪೂರಿ ಮಾಡಿದ ಮೇಲೆ ತೆಳ್ಳನೆಯ ಕಾಟನ್ ಬಟ್ಟೆ ಮೇಲೆ ಹಾಕಿ. ಇದರಿಂದ ಪೂರಿಯಲ್ಲಿರೋ ಹೆಚ್ಚುವರಿ ಎಣ್ಣೆ ಹೋಗುತ್ತದೆ. ಪೂರಿ ಗರಿಗರಿಯಾಗಿಯೂ, ಮೆತ್ತಗೂ, ರುಚಿಯಾಗಿಯೂ ಇರುತ್ತದೆ.

Read more Photos on
click me!

Recommended Stories