ಚಪಾತಿ ಹಿಟ್ಟನ್ನು ಫ್ರಿಡ್ಜ್ ನಲ್ಲಿ ಈ ರೀತಿಯಾಗಿಟ್ಟರೆ ಕಪ್ಪಾಗದೇ ಸಾಫ್ಟ್ ಆಗಿರುತ್ತೆ!

Published : Aug 17, 2025, 02:06 PM IST

ಫ್ರಿಡ್ಜ್‌ನಲ್ಲಿಟ್ಟ ಚಪಾತಿ ಹಿಟ್ಟು ಕಪ್ಪಾಗುವುದನ್ನು ತಡೆಯಲು ಈ ರೀತಿಯಾಗಿ ಹಿಟ್ಟು ಕಲಿಸಿ. ಈ ರೀತಿಯಾಗಿ ಹಿಟ್ಟು ಸ್ಟೋರ್ ಮಾಡೋದರಿಂದ ಚಪಾತಿ ಸಾಫ್ಟ್ ಆಗಿರುತ್ತದೆ.

PREV
16

ಕೆಲವರು ಎರಡ್ಮೂರು ದಿನಕ್ಕೆ ಬೇಕಾಗುವಷ್ಟು ಚಪಾತಿ ಹಿಟ್ಟನ್ನು ಒಂದೇ ಬಾರಿ ರೆಡಿ ಮಾಡಿಕೊಂಡು ಫ್ರಿಡ್ಜ್‌ನಲ್ಲಿ ಸ್ಟೋರ್ ಮಾಡುತ್ತಾರೆ. ಸ್ವಲ್ಪ ಸ್ವಲ್ಪವೇ ಹಿಟ್ಟು ತೆಗೆದುಕೊಂಡು ಬಿಸಿ ಬಿಸಿಯಾದ ಚಪಾತಿ ಮಾಡಿಕೊಳ್ಳುತ್ತಾರೆ. ಆದ್ರೆ ಫ್ರಿಡ್ಜ್‌ನಲ್ಲಿ ಸ್ಟೋರ್ ಮಾಡಲಾಗಿರುವ ಹಿಟ್ಟು ಕೆಲ ಸಮಯದ ಬಳಿಕ ಕಪ್ಪು ಆಗುತ್ತದೆ. ಹಿಟ್ಟು ಕಪ್ಪಾದ ನಂತರ ತಯಾರಿಸುವ ಚಪಾತಿ ರುಚಿಯನ್ನು ಕಳೆದುಕೊಳ್ಳುತ್ತದೆ.

26

ನೀವು ಚಪಾತಿ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಸ್ಟೋರ್ ಮಾಡುತ್ತಿದ್ದರೆ ಕೆಲವು ಟಿಪ್ಸ್ ಅನುಸರಿಸಬೇಕು. ಕೆಲವು ವಿಧಾನಗಳ ಮೂಲಕ ಹಿಟ್ಟನ್ನು ಕಲಿಸಬೇಕು. ಹೀಗೆ ಮಾಡೋದರಿಂದ ಹಿಟ್ಟು ಕಪ್ಪು ಬಣ್ಣಕ್ಕೆ ತಿರುಗುವುದಿಲ್ಲ. ಚಪಾತಿ ಹಿಟ್ಟು ನಾದುವಾಗ ಪಾಲಿಸಬೇಕಾದ ನಿಯಮಗಳು ಇಲ್ಲಿವೆ. ಹೀಗೆ ಮಾಡಿದರೆ ಹಿಟ್ಟು ಬೇಗ ಹಾಳಾಗುವುದಿಲ್ಲ.

36

ಐಸ್ ಕ್ಯೂಬ್ ಬಳಕೆ

ಗೋಧಿ ಹಿಟ್ಟು ಕಲಿಸುವಾಗ ನೀರಿನ ಜೊತೆ ಒಂದೆರಡು ಐಸ್ ಕ್ಯೂಬ್ ಬಳಕೆ ಮಾಡಿ. ಹಿಟ್ಟಿಗೆ ಐಸ್ ಕ್ಯೂಬ್ ಹಾಕಿ. ಅದು ಸಂಪೂರ್ಣವಾಗಿ ಕರಗಿದ ನಂತರವೇ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಹಿಟ್ಟು ಕಲಿಸಿಕೊಳ್ಳಿ. ಈ ರೀತಿಯಾಗಿ ಕಲಿಸಿಕೊಂಡ ಹಿಟ್ಟನ್ನು ಫ್ರಿಡ್ಜ್‌ನಲ್ಲಿಟ್ಟರೆ ಕಪ್ಪು ಆಗಲ್ಲ. ಹೀಗೆ ಮಾಡಿ ಚಪಾತಿ ಮಾಡಿದರೆ ಮೃದುವಾಗಿರುತ್ತದೆ. ಫ್ರಿಡ್ಜ್‌ನಲ್ಲಿಡೋದರಿಂದ ಕಡಿಮೆ ನೀರಿನಲ್ಲಿಯೇ ಹಿಟ್ಟನ್ನು ಗಟ್ಟಿಯಾಗಿ ಕಲಿಸಿಕೊಳ್ಳಿ. ಹಿಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚು ಇದ್ದರೆ ಅದು ಹಾಳಾಗುತ್ತದೆ

46

ಫ್ರಿಡ್ಜ್‌ನಲ್ಲಿಟ್ಟ ಚಪಾತಿ ಹಿಟ್ಟು ಮೃದುವಾಗಿರಲು ಏನು ಮಾಡಬೇಕು?

ಹಲವು ಬಾರಿ, ಫ್ರಿಡ್ಜ್‌ನಲ್ಲಿಟ್ಟ ಹಿಟ್ಟಿನಿಂದ ಮಾಡಿದ ಚಪಾತಿ ಮೃದುವಾಗಿರುವುದಿಲ್ಲ. ನಿಮಗೂ ಈ ರೀತಿಯ ಸಮಸ್ಯೆ ಆಗುತ್ತಿದ್ರೆ ಹಿಟ್ಟಿನ ಮೇಲೆ ಎರಡು ಮೂರು ಚಮಚ ನೀರು ಚಿಮುಕಿಸಿ ಮುಚ್ಚಳ ಮುಚ್ಚಿ 10 ನಿಮಿಷ ಬಿಡಿ. ನಂತರ ಸ್ವಲ್ಪ ಹಿಟ್ಟು ಸೇರಿಸಿ ನಾದಿದರೆ ಚಪಾತಿ ಮೃದುವಾಗಿರುತ್ತದೆ.

56

ಚಪಾತಿ ಹಿಟ್ಟನ್ನು ದೀರ್ಘಕಾಲ ಸಂಗ್ರಹಿಸುವ ವಿಧಾನ

ಚಪಾತಿ ಹಿಟ್ಟನ್ನು ನಾದಿ ಫ್ರಿಡ್ಜ್‌ನಲ್ಲಿಡುವ ಮುನ್ನ ಮೇಲೆ ಸ್ವಲ್ಪ ಎಣ್ಣೆ ಹಾಕಿ. ಹಿಟ್ಟು ಸುತ್ತಲೂ ಸಂಪೂರ್ಣ ಎಣ್ಣೆಮಯ ಆಗವಬೇಕು. ನಂತರ ಹಿಟ್ಟನ್ನು ಗಾಳಿಯಾಡದ ಡಬ್ಬದಲ್ಲಿಟ್ಟು ಫ್ರಿಡ್ಜ್‌ನಲ್ಲಿಡಬೇಕು. ಹೀಗೆ ಮಾಡೋದರಿಂದ ಚಪಾತಿ ಹಿಟ್ಟು ದೀರ್ಘಕಾಲ ಚೆನ್ನಾಗಿರುತ್ತದೆ. ಈ ರೀತಿ ಸ್ಟೋರ್ ಮಾಡಿರುವ ಹಿಟ್ಟಿನಿಂದ ಮಾಡುವ ಚಪಾತಿಯೂ ಸಾಫ್ಟ್ ಆಗಿರುತ್ತದೆ.

66

ಚಪಾತಿಯಲ್ಲಿರುವ ಪೋಷಕಾಂಶಗಳು:

ಚಪಾತಿಯಲ್ಲಿ ವಿಟಮಿನ್ ಬಿ1, ವಿಟಮಿನ್ ಬಿ2, ವಿಟಮಿನ್ ಬಿ3, ವಿಟಮಿನ್ ಬಿ6 ಮತ್ತು ವಿಟಮಿನ್ ಬಿ9, ವಿಟಮಿನ್ ಇ ಸಮೃದ್ಧವಾಗಿದೆ. ಇದರಲ್ಲಿ ಸತು, ತಾಮ್ರ, ಅಯೋಡಿನ್, ಸಿಲಿಕಾನ್, ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳು ಕೂಡ ಸಮೃದ್ಧವಾಗಿವೆ. ತೂಕ ಇಳಿಕೆಯ ಪ್ರಯತ್ನದಲ್ಲಿರೋರು ಸಹ ಚಪಾತಿಯನ್ನೇ ಹೆಚ್ಚಾಗಿ ಸೇವಿಸುತ್ತಾರೆ.

Read more Photos on
click me!

Recommended Stories