ಮಳೆಗಾಲದಲ್ಲಿ ಅಡುಗೆಮನೆ ಹೀಗಿರಲಿ.. ಇಲ್ಲಾಂದ್ರೆ ಅನಾರೋಗ್ಯ ಉಂಟಾಗುತ್ತೆ!

Published : Aug 13, 2025, 04:49 PM IST

ಮಳೆಗಾಲದಲ್ಲಿ ಅಡುಗೆಮನೆಯಲ್ಲಿ ತೇವಾಂಶ ಹೆಚ್ಚಾಗಿ ಕಾಡುತ್ತದೆ. ಗಾಳಿ ಬೆಳಕು, ಸ್ವಚ್ಛತೆ ಕಾಪಾಡುವುದು, ಲೀಕೇಜ್ ಸರಿಪಡಿಸುವುದು ಹಾಗೂ ಆಹಾರ ಸಂಗ್ರಹಣೆಯಲ್ಲಿ ಎಚ್ಚರಿಕೆ ವಹಿಸುವುದರಿಂದ ಈ ಸಮಸ್ಯೆ ತಡೆಯಬಹುದು.

PREV
15
ಮಳೆಗಾಲದಲ್ಲಿ ಅಡುಗೆಮನೆ

ಮಳೆಗಾಲ ಎಲ್ಲರಿಗೂ ಇಷ್ಟವಾಗುತ್ತದೆ. ಆದ್ರೆ ಮಳೆ ಜೊತೆಗೆ ಕೆಲ ಸಮಸ್ಯೆಗಳೂ ಇರುತ್ತವೆ. ಗೋಡೆ, ಪೀಠೋಪಕರಣ ಎಲ್ಲದರಲ್ಲೂ ತೇವ ಹಿಡಿಯುತ್ತೆ. ಇದು ಆರೋಗ್ಯಕ್ಕೂ ಒಳ್ಳೆಯದಲ್ಲ. ಮನೆಯಲ್ಲಿನ ತೇವಾಂಶ ತಡೆಯೋಕೆ ಏನು ಮಾಡುಬೇಕು ಅನ್ನೋದರ ಮಾಹಿತಿ ಇಲ್ಲಿದೆ.

25
ಗಾಳಿ ಬೆಳಕು

ಮನೆಯಲ್ಲಿ ಗಾಳಿ ಬೆಳಕು ಇದ್ರೆ ಹೆಚ್ಚು ತೇವ ಹಿಡಿಯೋದಿಲ್ಲ. ಪ್ರತಿದಿನ ಅರ್ಧ ಗಂಟೆ ಬಾಗಿಲು ತೆಗೆದು ಮನೆಯೊಳಗೆ ಗಾಳಿ ಬರುವ ಹಾಗೆ ಮಾಡಬೇಕು. ಹೀಗೆ ಮಾಡಿದ್ರೆ ಒದ್ದೆ ಇರೋದಿಲ್ಲ. ಗಾಳಿ ಬೆಳಕು ಇದ್ರೆ ಅಡುಗೆ ಮನೆಯಲ್ಲಿನ ತೇವಾಂಶ ಕಡಿಮೆಯಾಗುತ್ತದೆ. ಅಡುಗೆ ಮನೆ ಆಗಾಗ ಕ್ಲೀನ್ ಮಾಡಬೇಕು. ಹೀಗೆ ಮಾಡಿದ್ರೆ ಒದ್ದೆ ಇರೋದಿಲ್ಲ, ತಿಂದಿದ್ದೆಲ್ಲಾ ಅಲ್ಲಲ್ಲಿ ಬಿದ್ದಿರೋದಿಲ್ಲ. ಕೊಳೆ ಇದ್ರೆ ಹಾಳು ಹಿಡಿಯುತ್ತದೆ. ಅಡುಗೆಮನೆಯಲ್ಲಿ ನೀರು ಬಳಕೆ ಹೆಚ್ಚಾಗಿರುತ್ತದೆ. ಹಾಗಾಗಿ ಇಲ್ಲಿ ಸ್ಚಚ್ಛತೆ ಮುಖ್ಯವಾಗುತ್ತದೆ.

35
ಒದ್ದೆ ಕಡಿಮೆ ಮಾಡಿ

ಅಡುಗೆ ಮನೆಯಲ್ಲಿ ಒದ್ದೆ ಇರೋದು ಸಹಜ. ಮಳೆಗಾಲದಲ್ಲಿ ಇದು ಜಾಸ್ತಿ ಆಗುತ್ತದೆ. ತೇವ ಹೆಚ್ಚಾಗಲು ಇದುವೇ ಮುಖ್ಯ ಕಾರಣವಾಗುತ್ತದೆ. ಹಾಗಾಗಿ ಒದ್ದೆ ಬಟ್ಟೆ, ಸ್ಪಾಂಜ್ ಅಡುಗೆ ಮನೆಯಲ್ಲಿ ಇಡಬೇಡಿ. ಇದರಿಂದ ಕೀಟಾಣುಗಳು ಬರುತ್ತದೆ. ಪಾತ್ರೆಗಳನ್ನು ತೊಳೆಯದೇ ಹೆಚ್ಚು ಸಮಯ ಸಿಂಕ್‌ನಲ್ಲಿಡಬೇಡಿ. ಇದರಿಂದ ತೇವಾಂಶ ಅಧಿಕವಾಗುತ್ತದೆ.

45
ತಿಂಡಿ ಸಂಗ್ರಹ

ಮಳೆಗಾಲದಲ್ಲಿ ತಿಂಡಿ ಹಾಳಾಗದ ಹಾಗೆ ಇಡೋದು ಮುಖ್ಯ. ಗಾಳಿ ಆಡದ ಡಬ್ಬದಲ್ಲಿ ತಿಂಡಿ ಇರಿಸಬೇಕು. ಹಾಳಾದ ತಿಂಡಿ ತಿನ್ನಬೇಡಿ. ಫ್ರಿಡ್ಜ್‌ನಲ್ಲೂ ತಿಂಡಿ ಇಡುವಾಗ ಹುಷಾರಾಗಿರಿ. ಈ ಸಮಯದಲ್ಲಿ ಆಹಾರದ ಮೇಲೆ ಕಡಿಮೆ ಸಮಯದಲ್ಲಿ ಶಿಲೀಂದ್ರ ಉಂಟಾಗುತ್ತದೆ.

55
ಲೀಕೇಜ್

ಅಡುಗೆ ಮನೆ ಪೈಪ್‌ನಲ್ಲಿ ಲೀಕೇಜ್ ಇದ್ಯಾ ನೋಡಿ. ಇದ್ರಿಂದ ಒದ್ದೆ ಆಗುತ್ತದೆ ಮತ್ತು ಸುತ್ತಲಿನ ಗೋಡೆಯೂ ತೇವವಾಗುತ್ತದೆ. ಹಾಗಾಗಿ ಲೀಕೇಜ್ ಇದ್ರೆ ಬೇಗ ಸರಿ ಮಾಡಿಸಿ. ನೀರು ನಿಲ್ಲೋ ಹಾಗೆ ಬಿಡಬೇಡಿ. ಹೆಚ್ಚು ನೀರು ನಿಂತರೆ ಮನೆಯಲ್ಲಿ ಸೂಕ್ಷ್ಮ ಜೀವಿಗಳ ಸಂಖ್ಯೆಯೂ ಅಧಿಕವಾಗುತ್ತದೆ.

Read more Photos on
click me!

Recommended Stories