ಭಾರತದಲ್ಲಿ ಸಿಹಿತಿಂಡಿಗಳಿಗೆ ಕೊರತೆಯೇ ಇಲ್ಲ. ಕೆಲವರಿಗೆ ರಸಗುಲ್ಲಾ ಇಷ್ಟವಾದ್ರೆ, ಮತ್ತೆ ಕೆಲವರಿಗೆ ಜಿಲೇಬಿ ಅಂದ್ರೆ ಜೀವ ಬಿಡ್ತಾರೆ. ಇನ್ನು ಕರ್ನಾಟಕ ಭಾಗದವರಿಗೆ ಮೈಸೂರು ಪಾಕ ಎಂದರೆ ಇಷ್ಟ. ಮೈಸೂರು ಪಾಕ ತಯಾರಿಸುವುದು ಸುಲಭ. ಕೇವಲ ಈ ಮೂರು ಪದಾರ್ಥಗಳಿಂದ ತಯಾರಿಸಬಹುದು!
ಭಾರತದ 'ಸಿಹಿ ತಿಂ'ಡಿಗಳ ರಾಜ' ಎಂದು ಯಾವುದನ್ನ ಕರೆಯಲಾಗುತ್ತೆ?
ಭಾರತದಲ್ಲಿ ಸಿಹಿತಿಂಡಿಗಳಿಗೆ ಕೊರತೆಯೇ ಇಲ್ಲ. ಕೆಲವರಿಗೆ ರಸಗುಲ್ಲಾ ಇಷ್ಟವಾದ್ರೆ, ಮತ್ತೆ ಕೆಲವರಿಗೆ ಜಿಲೇಬಿ ಅಂದ್ರೆ ಜೀವ ಬಿಡ್ತಾರೆ. ಇನ್ನು ಕೆಲವರಿಗೆ ಪೇಡಾ ಎಂದ್ರೆ ಊಟೇ ಬೇಡಾ!ಭಾರತದ ಸಿಹಿತಿಂಡಿಗಳು ಹಬ್ಬಗಳಿಗೆ ವಿಶೇಷ ಮೆರುಗು ನೀಡುತ್ತವೆ. ಸಿಹಿತಿಂಡಿಗಳಿಲ್ಲದೆ ಹಬ್ಬಗಳೇ ಇಲ್ಲ. ಸಿಹಿ-ತಿಂಡಿಗೂ ಹಬ್ಬಕ್ಕೂ ಎಂಥದೋ ಬಿಡಿಸಲಾಗದ ನಂಟು. ಭಾರತದಲ್ಲಿ ಮುಕ್ಕೂಟಿ ದೇವರುಗಳಿರುವಂತೆ ಮುಕ್ಕೋಟಿ ಸಿಹಿ ತಿನಿಸುಗಳಿವೆ. ಅವೆಲ್ಲವುಗಳ ಹೊರತಾಗಿಯೂ ದಕ್ಷಿಣ ಭಾರತದಲ್ಲಿ ಅದ್ಭುತವಾಗಿ ರುಚಿಯುಳ್ಳ, ರಾಜಮನೆತನದ ಹಿನ್ನೆಲೆಯುಳ್ಳ ಒಂದು ಸಿಹಿ ತಿನಿಸಿದೆ ಅದನ್ನ 'ಸಿಹಿ ತಿಂಡಿಗಳ ರಾಜ' ಎಂದೇ ಕರೆಯಲಾಗುತ್ತೆ. ಅದು ಯಾವುದು? ಅದರ ಹಿನ್ನೆಲೆ ಏನು ಎಂಬುದು ಇಲ್ಲಿ ವಿವರಿಸಲಾಗಿದೆ.
27
ಮೈಸೂರು ಪಾಕ ಹಿನ್ನೆಲೆ ಏನು?
ನೀವು ದಕ್ಷಿಣ ಭಾರತೀಯರಾಗಿದ್ದರೆ ಅದರಲ್ಲೂ ಕರ್ನಾಟಕದ ಮೈಸೂರು ಭಾಗದವರಾಗಿದ್ದರೆ ಆ ಸಿಹಿತಿಂಡಿಯನ್ನ ಊಹಿಸಿಯೇ ಇರುತ್ತೀರಿ. ಹೌದು ನಾವು ಹೇಳಲು ಹೊರಟಿರುವುದು ಅದೇ ಸಿಹಿತಿಂಡಿಗಳ ರಾಜ ಮೈಸೂರು ಪಾಕ್. ಓಹ್! ಮೈಸೂರಿಗೂ ಪಾಕ್ಗೂ ಎತ್ತೆಣಿಂದೆತ್ತ ಸಂಬಂಧವಯ್ಯ ಅನ್ನೋ ಪ್ರಶ್ನೆ ಕಾಡುತ್ತಲ್ಲವ? ಹೌದು ಮೈಸೂರು ಪಾಕಗೂ ಪಾಕಿಸ್ತಾನಕ್ಕೂ ನಂಟಿಲ್ಲ. ಆದರೆ ಬಹುತೇಕರು ಅದನ್ನ ಮೈಸೂರು ಪಾಕ್ ಎಂದೇ ಕರೆಯುವುದರಿಂದಾಗಿಯೇ ಹಿಂಗೊಂದು ತರಲೇ ಪ್ರಶ್ನೆ ಹುಟ್ಟಿಕೊಳ್ಳುತ್ತೆ.
ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಹುಟ್ಟಿ ಇಂದು 'ದಾವಣಗೆರೆ ಬೆಣ್ಣೆ ದೋಸೆ' ಎಂದು ಹೇಗೆ ಜನಪ್ರಿಯವಾಗಿದೆಯೋ ಹಾಗೆಯೇ ಮೈಸೂರು ಪಾಕ ಮೈಸೂರಿನಲ್ಲೇ ಹುಟ್ಟಿಕೊಂಡು ಇಂದು ದೇಶಾದ್ಯಂತ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಸಿಹಿ ತಿಂಡಿ ಮೈಸೂರು ಪಾಕ.
37
ಮೈಸೂರು ಪಾಕ ಹೇಗೆ ತಯಾರಿಸಲಾಗುತ್ತೆ?
ಈ ವಿಶೇಷ ಸಿಹಿತಿಂಡಿಯನ್ನ ಕೇವಲ ಮೂರು ಪದಾರ್ಥ ಬಳಸಿಕೊಂಡು ತಯಾರಿಸಲಾಗುತ್ತೆ. ಮೈಸೂರು ಪಾಕ್ನ ಅತ್ಯಂತ ಆಸಕ್ತಿದಾಯಕ ವಿಷವೆಂದರೆ ಇದನ್ನು ತಯಾರಿಸಲು ಹೆಚ್ಚಿನ ಆಹಾರ ಪದಾರ್ಥಗಳೇ ಬೇಕಿಲ್ಲ. ಕಡಲೆಹಿಟ್ಟು(ಬೇಸನ್), ಸಕ್ಕರೆ, ತುಪ್ಪ.. ಈ ಮೂರು ಮುಖ್ಯವಾಗಿ ಇದ್ದರೆ ಸಾಕು.
ಆದರೆ ಈ ಮೂರು ಪದಾರ್ಥಗಳನ್ನ ಸರಿಯಾದ ಪ್ರಮಾಣದಲ್ಲಿ ಸೇರಿಸುವುದು, ತಯಾರಿಸುವ ವಿಧಾನವೇ ಅದರ ರುಚಿಯನ್ನ ಇತರೆ ಸಿಹಿತಿಂಡಿಗಳಿಗಿಂತ ವಿಶೇಷವಾಗಿಸುತ್ತದೆ. ಕೆಲವು ಬಗೆಯ ಮೈಸೂರು ಪಾಕ್ಗಳು ಸ್ವಲ್ಪ ಕ್ರಿಸ್ಪಿಯಾಗಿ, ಉದುರು ಉದುರಾಗಿ ಇರುತ್ತದೆ. ಇನ್ನು ಕೆಲವು ಮೈಸೂರು ಪಾಕ್ ಬಾಯಿಗಿಟ್ಟರೆ ಕರಗಿಹೋಗುವಷ್ಟು ಮೃದುವಾಗಿರುತ್ತದೆ. ಈ ವಿಶಿಷ್ಟ ಗುಣವೇ ಇತರೆ ಸಿಹಿತಿಂಡಿಗಳಿಗಿಂತ ವಿಶಿಷ್ಠವಾಗಿಸುತ್ತದೆ.
ಮೈಸೂರು ಪಾಕ ಹುಟ್ಟಿದ ಬಗ್ಗೆ ಅನೇಕ ಐತಿಹಾಸಿಕ ಕತೆಗಳೇ ಇವೆ. ಅದರ ಇತಿಹಾಸದ ಬಗ್ಗೆ ಜನಪ್ರಿಯ ಕಥೆಯೊಂದಿಗೆ ಅದರ ಪ್ರಕಾರ ಹೇಳುವುದಾದರೆ, ಮೈಸೂರು ಪಾಕ ಮೈಸೂರಿನ ಒಡೆಯರ್ ರಾಜವಂಶದ ರಾಜಮನೆತನದ ಅಡುಗೆ ಮೇನುವಿನ ಮುಖ್ಯವಾದ ಸಿಹಿತಿಂಡಿಯಾಗಿದೆ. ಮೊದಲಿಗೆ ಮೈಸೂರು ಪಾಕವನ್ನು ರಾಜಮನೆತನಕ್ಕಾಗಿ ತಯಾರಿಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ.
57
ಸಿಹಿತಿಂಡಿಗಳ ರಾಜ ಮೈಸೂರು ಪಾಕ್
ಅರಮನೆಯಲ್ಲಿದ್ದ ಅಡುಗೆಭಟರು ಸಾಮಾನ್ಯ ಅಡುಗೆ ಪದಾರ್ಥಗಳನ್ನು ಪ್ರಯೋಗಿಸಿ ರಾಜಮನೆತನವು ಇಷ್ಟಪಡುವ ಈ ಸಿಹಿತಿಂಡಿ ತಯಾರಿಸಿದ್ದರು. ಇದು ಕ್ರಮೇಣ ಸಿಹಿತಿಂಡಿ ಪರಿಮಳ ಅರಮನೆ ಗೋಡೆಗಳನ್ನು ದಾಟಿ ಹರಡಿತು. ಬಳಿಕ ಇದನ್ನು ಸಾಮಾನ್ಯರು, ಸ್ಥಳೀಯರು ತಯಾರಿಸಲಾರಂಭಿಸಿದರು, ಮೈಸೂರು ಪಾಕ ಅಂಗಡಿಗಳೇ ಆರಂಭವಾದವು. ಇದರ ಜನಪ್ರಿಯತೆ ಹೆಚ್ಚಾಗಿ ಮೈಸೂರು ಪಾಕ್ ಕರ್ನಾಟಕದ ಪಾಕಶಾಲೆಯ ಸಂಪ್ರದಾಯದ ಅವಿಭಾಜ್ಯ ಅಂಗವಾಯಿತು.
67
ಕೇವಲ ಈ ಪದಾರ್ಥಗಳಿಂದ ಮೈಸೂರು ಪಾಕ ತಯಾರಿಸಿ!
ಕೇವಲ ಮೂರು ಪದಾರ್ಥಗಳಿಂದ ಮೈಸೂರು ಪಾಕ್ ತಯಾರಿಸುವುದು ಸುಲಭ ಅನಿಸಬಹುದು. ಆದ್ರೆ ಆ ಮೂರು ಪದಾರ್ಥಗಳನ್ನ ಸರಿಯಾದ ಪ್ರಮಾಣದಲ್ಲಿ ಸೇರಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಮೈಸೂರು ಪಾಕ ತಯಾರಿಸುವುದು ಒಂದು ಕಲೆ. ಅದರ ರುಚಿ, ಸ್ವಾದ ಮೂರು ಪದಾರ್ಥಗಳನ್ನ ಹೇಗೆ ಸಮಪ್ರಮಾಣದಲ್ಲಿ ಬಳಸಲಾಗಿದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಕಡಲೆ ಹಿಟ್ಟು (ಬೇಸನ್), ಸಕ್ಕರೆ ಮತ್ತು ತುಪ್ಪದ ಪ್ರಮಾಣ ಮತ್ತು ಅದನ್ನು ಬೇಯಿಸುವ ಸಮಯವೇ ಈ ಸಿಹಿತಿಂಡಿಯ ಟೆಕ್ಸ್ಚರ್ ಹೇಗಿರಬೇಕು ಎಂಬುದನ್ನು ನಿರ್ಧರಿಸುತ್ತವೆ.
ಸರಿಯಾಗಿ ಮಿಶ್ರಣ ಮಾಡದಿದ್ರೆ ಸಿಹಿತಿಂಡಿಯ ರುಚಿ ಮತ್ತು ಅದರ ರಚನೆ ಎರಡೂ ಮೈಸೂರು ಪಾಕನಂತೆ ಇರುವುದಿಲ್ಲ. ಇದೇ ಕಾರಣಕ್ಕೆ ಅನುಭವಿ ಸಿಹಿತಿಂಡಿ ತಯಾರಕರು ಇದನ್ನು ಮಾಡುವಾಗ ಬಹಳ ಎಚ್ಚರಿಕೆ ವಹಿಸುತ್ತಾರೆ. ಕೆಲವು ಅಂಗಡಿಗಳಲ್ಲಿ ಸಾಂಪ್ರಾದಾಯಿಕ ಆಕಾರದಲ್ಲಿರುವ ತುಂಡು ಮೈಸೂರು ಪಾಕ ಸಿಗುತ್ತವೆ. ಇನ್ನು ಕೆಲವು ಶಾಪ್ಗಳಲ್ಲಿ ಬಾಯಲ್ಲಿಟ್ಟರೆ ಕರಗುವಷ್ಟು ಬೆಣ್ಣೆಯಂತೆ ಮೃದುವಾಗಿರುವ ಮೈಸೂರು ಪಾಕವೂ ಸಿಗುತ್ತೆ.
77
ಮೈಸೂರು ಪಾಕ ಹಬ್ಬದಲ್ಲಿ ವಿಶೇಷ ತಿಂಡಿ
ಮೈಸೂರು ಪಾಕ್ ರುಚಿಗಾಗಿ ಮಾತ್ರವಲ್ಲ. ಪ್ರೀತಿಪಾತ್ರರಿಗೆ, ಅತಿಥಿಗಳಿಗೆ, ದಸರಾ ಹಬ್ಬದ ಸಮಯದಲ್ಲಿ ಉದ್ಯೋಗಿಗಳಿಗೆ ಗಿಫ್ಟ್ ಕೊಡುವಾಗಲೂ ಮೈಸೂರು ಪಾಕ ಹೆಚ್ಚು ಕೊಡಲಾಗುತ್ತದೆ. ಹಬ್ಬ, ಮದುವೆ, ಕುಟುಂಬದ ಕಾರ್ಯಕ್ರಮಗಳಲ್ಲಿ ಮೈಸೂರು ಪಾಕಗೆ ಮೊದಲ ಸ್ಥಾನ. ಇದಕ್ಕೆ ಕಾರಣವೆಂದರೆ ಇತರೆ ತಿನಿಸುಗಳಿಗೆ ಹೋಲಿಸಿದರೆ ಇದರ ರುಚಿಯೇ ವಿಶಿಷ್ಟ, ಜೊತೆಗೆ ಸಂಪ್ರಾದಾಯಿಕ ಹಿನ್ನೆಲೆ ಇರೋದ್ರಿಂದ ಮೈಸೂರು ಪಾಕ ಹೆಚ್ಚಾಗಿ ಬಡಿಸಲಾಗುತ್ತೆ.
ಮೈಸೂರು ಪಾಕ್ ಜನಪ್ರಿಯತೆಗೆ ಕಾರಣವೇನು?
ಮೈಸೂರು ಪಾಕ್ನ ಜನಪ್ರಿಯತೆಯು ಕೇವಲ ಅದರ ಸಿಹಿಯಿಂದ ಮಾತ್ರವಲ್ಲದೆ, ಅದರ ಶ್ರೀಮಂತ ಪರಂಪರೆ, ಅದನ್ನು ತಯಾರಿಸುವ ಕಲೆ ಮತ್ತು ಅದರ ವಿಶಿಷ್ಟವಾದ ರಚನೆಯಿಂದಲೂ (texture) ಬಂದಿದೆ. ಇನ್ನು ವಿಶೇಷವೆಂದರೆ ಇದನ್ನು ತಯಾರಿಸಲು ಹೆಚ್ಚು ಆಹಾರ ಪದಾರ್ಥಗಳೇ ಬೇಕಿಲ್ಲ. ಕೇವಲ ಮೂರು ನಾಲ್ಕು ಪದಾರ್ಥಗಳಿಂದ ತಯಾರಿಸಿದರೂ ಇದರ ರುಚಿಯು ವಿಶೇಷವಾಗಿರುತ್ತದೆ. ಮೈಸೂರು ಪಾಕ ರಾಜಮನೆತನದ ಅಡುಗೆಮನೆಯಲ್ಲಿ ಹುಟ್ಟಿದ್ದರೂ ಇಂದು ತಲೆಮಾರುಗಳಿಂದಲೂ ರಾಯಲ್ ಆಗಿಯೆ ಉಳಿದಿದೆ. ಅದಕ್ಕೆ ಕಾರಣ ಮೈಸೂರು ಪಾಕನ ವಿಶಿಷ್ಟ ರುಚಿ!
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.