Kannada

ಹೋಳಿಗೆ ತಟ್ಟುವ ಸುಲಭ ವಿಧಾನ

ಹೋಳಿಗೆ ಮಾಡುವುದೆಂದರೆ ಹಲವರಿಗೆ ಲಟ್ಟಿಸುವುದೇ ದೊಡ್ಡ ಸಾಹಸದ ಕೆಲಸ. ಆದರೆ, ಲಟ್ಟಣಿಗೆಯ ಸಹಾಯವಿಲ್ಲದೆ ಅತ್ಯಂತ ವೇಗವಾಗಿ ಮತ್ತು ತೆಳುವಾಗಿ ಹೋಳಿಗೆ ತಟ್ಟುವ ಸುಲಭ ವಿಧಾನ ಇಲ್ಲಿದೆ ನೋಡಿ.

Kannada

ಹೂರಣ ತುಂಬಿ

ಮಾಮೂಲಿಯಾಗಿ ಮಾಡುವಂತೆ ಕಣಕದ (ಹಿಟ್ಟಿನ) ಒಳಗೆ ಹೂರಣವನ್ನು ಇಟ್ಟು ಚೆನ್ನಾಗಿ ಮುಚ್ಚಿ ಉಂಡೆ ಮಾಡಿಕೊಳ್ಳಿ.

Image credits: graduate housewife
Kannada

ಎಣ್ಣೆ ಹಚ್ಚಿ

ಹೋಳಿಗೆ ಹಾಳೆಯ (ಪ್ಲಾಸ್ಟಿಕ್ ಶೀಟ್) ಮೇಲೆ ಉಂಡೆಯನ್ನು ಇಟ್ಟು, ಕೈಯಿಂದ ಸ್ವಲ್ಪ ತಟ್ಟಿ, ಅದರ ಮೇಲ್ಭಾಗಕ್ಕೆ ಸ್ವಲ್ಪ ಎಣ್ಣೆ ಸವರಿ.

Image credits: graduate housewife
Kannada

ಮೇಲೆ ಮತ್ತೊಂದು ಪ್ಲಾಸ್ಟಿಕ್ ಶೀಟ್ ಹಾಕಿ

ಇದರ ಮೇಲೆ ಮತ್ತೊಂದು ತೆಳುವಾದ ಪ್ಲಾಸ್ಟಿಕ್ ಶೀಟ್ ಹಾಕಿ, ಕೈಯಿಂದ ಸುಲಭವಾಗಿ ಮೇಲಿಂದ ಕೆಳಕ್ಕೆ ನಯವಾಗಿ ಸರಿಸುತ್ತಾ (ಸ್ಪ್ರೆಡ್ ಮಾಡುತ್ತಾ) ಬನ್ನಿ.

Image credits: graduate housewife
Kannada

ಕ್ಷಣಾರ್ಧದಲ್ಲಿ ರೆಡಿ

ಲಟ್ಟಣಿಗೆ ಇಲ್ಲದೆಯೂ ಹೋಳಿಗೆ ತಕ್ಷಣವೇ ತೆಳುವಾಗಿ ಮತ್ತು ದುಂಡಗೆ ಹರಡಿಕೊಳ್ಳುತ್ತದೆ. ನಂತರ ಬೇಯಿಸಿಕೊಳ್ಳಿ.

Image credits: graduate housewife
Kannada

ಎಣ್ಣೆಯ ಬಳಕೆ

ಪ್ಲಾಸ್ಟಿಕ್ ಶೀಟ್ ಮೇಲೆ ಮತ್ತು ಕಣಕದ ಉಂಡೆಯ ಮೇಲೆ ಎಣ್ಣೆ ಸರಿಯಾಗಿ ಸವರಿದರೆ, ಶೀಟ್ ಮೇಲೆ ಕೈ ಆರಾಮಾಗಿ ಜಾರುತ್ತದೆ ಹಾಗೂ ಹೋಳಿಗೆ ಎಲ್ಲಿಯೂ ಹರಿಯುವುದಿಲ್ಲ.

Image credits: graduate housewife
Kannada

ಕಣಕ ಮತ್ತು ಹೂರಣದ ಹದ

ಕಣಕ ಮತ್ತು ಹೂರಣ ಎರಡೂ ಒಂದೇ ರೀತಿಯ ಮೃದುವಾದ ಹದದಲ್ಲಿ (ಸಾಫ್ಟ್ ಆಗಿ) ಇರಬೇಕು, ಗಟ್ಟಿಯಾಗಿದ್ದರೆ ಕೈಯಿಂದ ಸರಿಸುವಾಗ ಹೂರಣ ಹೊರಬರಬಹುದು.

Image credits: graduate housewife

ಹೃದಯ ಗಟ್ಟಿಮುಟ್ಟಾಗಿರಲು ಈ ತರಕಾರಿಗಳನ್ನು ತಪ್ಪದೇ ತಿನ್ನಿ!

ಇವುಗಳನ್ನು ಸಿಪ್ಪೆ ಸಮೇತ ತಿನ್ನಿ, ಇಲ್ಲಾಂದ್ರೆ ಅರ್ಧಕ್ಕರ್ಧ ವೇಸ್ಟ್ ಆಗುತ್ತೆ!

ವೈರಲ್ 'ಜೆನ್ ಜಿ' ಅರ್ಜೆಂಟ್ ಬ್ರೇಕ್‌ಫಾಸ್ಟ್ ಉಪಾಯಗಳು ಇವೇ ನೋಡಿ!

ಇವು ಸಹಜವಾಗಿ ಹಿಮೋಗ್ಲೋಬಿನ್ ಹೆಚ್ಚಿಸುತ್ತವೆ, ಕೃತಕ ಮಾತ್ರೆ ನುಂಗೋದು ತಪ್ಪುತ್ತೆ!