ಕಿಚನ್ ಸಿಂಕ್ ಕೆಳಗೆ ಕಸದ ರಾಶಿ, ಟೆನ್ಷನ್ ಬೇಡ ನಿಮಿಷದಲ್ಲಿ ಹೀಗೆ ಸೆಟ್ ಮಾಡಿ

Published : Apr 09, 2026, 03:56 PM IST

Kitchen Tips : ಕಿಚನ್ ಸಿಂಕ್ ಕೆಳಭಾಗ ತುಂಬಾ ಕೊಳಕಾಗಿದ್ಯಾ? ಆ ಡಬ್ಬ ಈ ಬಾಟಲ್ ತುಂಬಿ ಹೋಗಿದ್ಯಾ? ಹಾಕಿದ್ರೆ ಈ ಸೂಪರ್ ಹ್ಯಾಕ್ಸ್ ಟ್ರೈ ಮಾಡಿ ಸಿಂಕ್ ಕ್ಯಾಬಿನೆಟ್ ಗೆ ಸ್ಪೇಷಲ್ ಹೊಳಪು ನೀಡಿ. 

PREV
110
ಜಂಕ್ಯಾರ್ಡ್ ಸಿಂಕ್ ಕ್ಯಾಬಿನೆಟ್

ಮನೆ ಸುಂದರವಾಗಿ ಕಾಣ್ಬೇಕು ಅಂತ ಹಾಲ್, ಕಿಚನ್, ಬೆಡ್ ರೂಮ್ ಎಲ್ಲ ಕ್ಲೀನ್ ಮಾಡ್ತೇವೆ. ಆದ್ರೆ ಕಿಚನ್ ಸಿಂಕ್ ಕೆಳಗಿರುವ ಜಾಗ ಮರೆತು ಬಿಡ್ತೇವೆ. ಬಹುತೇಕರ ಮನೆಯಲ್ಲಿ ಸಿಂಕ್ ಕೆಳಗಿನ ಜಾಗ ಕಸದ ತೊಟ್ಟಿಯಾಗಿರುತ್ತೆ. ಅಲ್ಲಿ ಖಾಲಿಯಾದ ಅನೇಕ ಬಾಟಲಿ, ಬಾಕ್ಸ್ ಗಳ ರಾಶಿ ಇರುತ್ತೆ. ಸಿಂಕ್ ಅಡಿಯಲ್ಲಿರುವ ಕ್ಯಾಬಿನೆಟ್ ಜಂಕ್ಯಾರ್ಡ್ನಂತಾಗಿರುತ್ತೆ. ಅದನ್ನು ಸುಲಭವಾಗಿ ಕ್ಲೀನ್ ಮಾಡಿ, ಅದನ್ನು ಹೊಳೆಯುವಂತೆ ಮಾಡ್ಬಹುದು.

210
ಸುಂದರ ಬಾಕ್ಸ್

ಸಾಮಾನ್ಯವಾಗಿ ಕಿಚನ್ ಸಿಂಕ್ ಕೆಳಗೆ ಜಾಗ ಚಿಕ್ಕದಾಗಿರುತ್ತೆ. ನೀವು ವರ್ಟಿಕಲ್ ಜಾಗ ಬಳಸಿಕೊಳ್ಬೇಕು. ಒಂದರ ಮೇಲೆ ಒಂದು ಇಡಬಲ್ಲ ಡಬ್ಬವನ್ನು ನೀವು ಇಲ್ಲಿ ಇಡ್ಬಹುದು. ಮೊದಲು ಸಿಂಕ್ ಕೆಳ ಭಾಗದಲ್ಲಿರುವ ಎಲ್ಲ ಅನುಪಯುಕ್ತ ವಸ್ತುಗಳನ್ನು ಕಸಕ್ಕೆ ಎಸೆದು ಜಾಗ ಕ್ಲೀನ್ ಮಾಡಿ. ಆ ನಂತ್ರ ಡಬ್ಬವನ್ನು ಇಡಿ. ಅದ್ರೊಳಗೆ ನಿಮಗೆ ಉಪಯೋಗವಾಗುವ ವಸ್ತುಗಳನ್ನು ಇಡ್ಬಹುದು.

310
ಪುಲ್-ಔಟ್ ಡ್ರಾಯರ್

ಸಿಂಕ್ ಕೆಳಗಿರುವ ಅಗತ್ಯ ವಸ್ತು ಹುಡುಕೋದು ಕಷ್ಟ. ಎಲ್ಲ ವಸ್ತು ತೆಗೆದು ನಂತ್ರ ನಿಮಗೆ ಬೇಕಾದ ವಸ್ತು ಹುಡುಕ್ಬೇಕು. ಆದ್ರೆ ಪುಲ್-ಔಟ್ ಸ್ಲೈಡಿಂಗ್ ಡ್ರಾಯರ್ ಬಳಕೆ ಬಹಳ ಬೆಸ್ಟ್. ನೀವು ಅವುಗಳನ್ನು ಸುಲಭವಾಗಿ ಹೊರತೆಗೆದು ಎಲ್ಲಾ ವಸ್ತುಗಳನ್ನು ತೆಗೆದುಹಾಕಬಹುದು.

410
ಟೆನ್ಷನ್ ರಾಡ್ ನಿಂದ ಜಾಗ ಉಳಿಸಿ

ಇದು ತುಂಬಾ ಅಗ್ಗದ ಮತ್ತು ಸ್ಮಾರ್ಟ್ ಹ್ಯಾಕ್. ಸಿಂಕ್ ಒಳಗೆ ರಾಡ್ ಅಳವಡಿಸಿ ಮತ್ತು ಅದರ ಮೇಲೆ ಸ್ಪ್ರೇ ಬಾಟಲಿಗಳು ಮತ್ತು ಇತರ ವಸ್ತುಗಳನ್ನು ನೇತುಹಾಕಿ. ಇದು ಕೆಳಗೆ ಜಾಗವನ್ನು ಫ್ರೀಗೊಳಿಸುತ್ತೆ.

510
ಶೆಲ್ಫ್ ರೈಸರ್ ಬಳಸಿ

ಕ್ಯಾಬಿನೆಟ್ ಎತ್ತರವಾಗಿದ್ರೆ, ಶೆಲ್ಫ್ ರೈಸರ್ಗಳನ್ನು ಬಳಸಬಹುದು. ಅವು ಮಿನಿ ಟೇಬಲ್ ಆಗಿ ಕಾರ್ಯನಿರ್ವಹಿಸುತ್ತವೆ. ಒಂದೇ ಸ್ಥಳದಲ್ಲಿ ಎರಡು ಲೇಯರ್ ನಲ್ಲಿ ವಸ್ತುಗಳನ್ನು ಇಡ್ಬಹುದು.

610
ಟ್ರಾನ್ಸ್ಫರೆಂಟ್ ಪಾತ್ರೆ

ಟ್ರಾರ್ನ್ಪರೆಂಟ್ ಪಾತ್ರೆಗಳನ್ನು ಬಳಸೋದ್ರಿಂದ ವಸ್ತು ಯಾವ ಪಾತ್ರೆಯಲ್ಲಿದೆ ಎಂಬುದನ್ನು ಆರಾಮವಾಗಿ ಪತ್ತೆ ಮಾಡ್ಬುಹುದು. ಇದು ಸಮಯ ಉಳಿಸುತ್ತೆ. ಪಾತ್ರೆಗಳನ್ನು ತೆಗೆಯುವ ಟೈಂ ಉಳಿಸುತ್ತೆ.

710
ಬಾಗಿಲ ಹಿಂಭಾಗವನ್ನು ಖಾಲಿ ಬಿಡ್ಬೇಡಿ

ಸಿಂಕ್ ಅಡಿಯಲ್ಲಿರುವ ಕ್ಯಾಬಿನೆಟ್ ಬಾಗಿಲುಗಳ ಹಿಂಭಾಗಕ್ಕೆ ಸ್ಟ್ಯಾಂಡ್ ಹಾಕಿ. ಅದ್ರ ಮೇಲೆ ನಿಮಗೆ ಅಗತ್ಯವಿರುವ ವಸ್ತುಗಳನ್ನು ಇಡ್ಬಹುದು. ಧೂಳು ತೆಗೆಯುವ ಬಟ್ಟೆ, ಸ್ಕ್ರಬ್ ಪ್ಯಾಡ್ ಇಲ್ಲಿ ಹಾಕ್ಬಹುದು.

810
ಲೇಬಲಿಂಗ್

ಪ್ರತಿ ಪಾತ್ರೆಗೆ ಸಣ್ಣ ಲೇಬಲ್ ಅಂಟಿಸಿ. ಇದು ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಪ್ರತಿ ವಸ್ತುವನ್ನು ಎಲ್ಲಿ ಇಡಬೇಕೆಂದು, ಎಲ್ಲಿದೆ ಎಂಬುದನ್ನು ತಿಳಿಸುತ್ತೆ.

910
ವಾಟರ್ ಪ್ರೂಫ್ ಮ್ಯಾಟ್

ಸಿಂಕ್ ಕೆಳಗಿನ ಕ್ಯಾಬಿನೆಟ್ ನಲ್ಲಿ ನೀರು ತೊಟ್ಟಿಕ್ಕುವ ಸಾಧ್ಯತೆ ಇರುತ್ತೆ. ಅದು ಸದಾ ಡ್ರೈ ಆಗಿರ್ಬೇಕು ಅಂದ್ರೆ ಕ್ಯಾಬಿನೆಸ್ ಕೆಳಗೆ ವಾಟರ್ ಪ್ರೂಫ್ ಮ್ಯಾಟ್ ಹಾಕಿ.

1010
ಪಾತ್ರೆ ಹೀಗಿರಲಿ

ನೀವು ಪಾತ್ರೆಗಳನ್ನು ಸಿಂಕ್ ಕೆಳಗಿರುವ ಕ್ಯಾಬಿನೆಟ್ ನಲ್ಲಿಡಲು ಬಯಸಿದ್ರೆ ಅಗತ್ಯವಿರುವ ಪಾತ್ರೆಗಳನ್ನು ಮುಂದೆ ಇಟ್ಕೊಳ್ಳಿ. ಅತಿ ಕಡಿಮೆ ಬಳಸುವ ಪಾತ್ರೆಗಳನ್ನು ಹಿಂದಿಡಿ. ನಿತ್ಯ ಬಳಕೆ ಇದ್ರಿಂದ ಸುಲಭವಾಗುತ್ತದೆ. ಸಿಂಕ್ ಕೆಳಗಿನ ಜಾಗವನ್ನು ನೀವು ಸುಂದರ ಸ್ಟ್ಯಾಂಡ್, ವಸ್ತುಗಳಿಂದ ತುಂಬಿಸಿದ್ರೆ ಅದು ಜಂಕ್ ಬಾಕ್ಸ್ ಆಗೋದು ತಪ್ಪುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories