ಗ್ಯಾಸ್ ಸಿಗ್ತಿಲ್ಲ, ಜನ ಇಂಡಕ್ಷನ್ ಸ್ಟೌವ್ ಮೊರೆ ಹೋಗ್ತಿದ್ದಾರೆ. ಪ್ರತಿ ದಿನ ಅನೇಕ ಸಮಯ ಇಂಡಕ್ಷನ್ ಸ್ವೌವ್ ಉರಿಸಿದ್ರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ. ಇಂಡಕ್ಷನ್ ಕುಕ್ಟಾಪ್ಗಳನ್ನು ಬುದ್ಧಿವಂತಿಕೆಯಿಂದ ಬಳಸುವುದರಿಂದ ಅಡುಗೆ ಸುಲಭವಾಗುವುದಲ್ಲದೆ ಕರೆಂಟ್ ಉಳಿಸ್ಬಹುದು.
ಇಂಡಕ್ಷನ್ ಕುಕ್ಟಾಪ್ಗಳಲ್ಲಿ ಅಡುಗೆ ಮಾಡೋದು ಗ್ಯಾಸ್ ನಷ್ಟು ಸುಲಭವಲ್ಲ. ಆದ್ರೆ ಇಂಡಕ್ಷನ್ ಕುಕ್ ಟಾಪ್ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಇದ್ರೆ ಅದನ್ನು ಬಳಸೋದು ಸುಲಭ. ಸರಿಯಾದ ವಿಧಾನ ಬಳಸಿದ್ರೆ ಕಡಿಮೆ ಸಮಯದಲ್ಲಿ ರುಚಿಕರವಾದ ಆಹಾರ ತಯಾರಿಸ್ಬಹುದು. ಇಂಡಕ್ಷನ್ ಕುಕ್ಟಾಪ್ಗಳಲ್ಲಿ ಕರೆಂಟ್ ಉಳಿಸಲು ಸುಲಭವಾದ ಮಾರ್ಗವೆಂದ್ರೆ ಮೊದಲೇ ತಯಾರಿ. ನೀವು ಇಂಡಕ್ಷನ್ ಕುಕ್ಟಾಪ್ ನಲ್ಲಿ ಪಾತ್ರೆ ಇಟ್ಮೇಲೆ ಪದಾರ್ಥಗಳನ್ನು ಹುಡುಕಬಾರದು. ತರಕಾರಿ ಕತ್ತರಿಸಿ, ಮಸಾಲೆ ಪದಾರ್ಥಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಆಗ ಒಲೆ ಮೇಲೆ ಪಾತ್ರೆಯನ್ನು ಖಾಲಿ ಬಿಡೋದು ತಪ್ಪುತ್ತದೆ. ಇದ್ರಿಂದ ಅಡುಗೆ ಬೇಗ ಮಾಡ್ಬಹುದು.
26
ಇದು ನೆನಪಿರಲಿ
ಇಷ್ಟೇ ಅಲ್ಲ ನೀವು ಇಂಡೆಕ್ಷನ್ ಕುಕ್ ಟಾಪ್ ನಲ್ಲಿ ಅಡುಗೆ ಮಾಡುವಾಗ ಆಹಾರವನ್ನು ಮುಚ್ಚಿಡಬೇಕು. ಇದು ಕರೆಂಟ್ ಉಳಿಸುತ್ತದೆ. ಆಹಾರ ಬೇಗ ಬೇಯುತ್ತದೆ. ಬಿಸಿ ನೀರನ್ನು ಅಡುಗೆಗೆ ಹಾಕೋದು ಕೂಡ ಬಹಳ ಮುಖ್ಯ.
36
ಬೇಳೆ ನೆನೆಸಿ
ಇಂಡಕ್ಷನ್ ನಲ್ಲಿ ಅಡುಗೆ ಮಾಡುವ ಮೊದಲು ಬೇಳೆ ಮತ್ತು ಅಕ್ಕಿಯನ್ನು ನೆನೆಸಿಡಬೇಕು. ಆಯುರ್ವೇದದ ಪ್ರಕಾರ, ಅಡುಗೆ ಮಾಡುವ ಮೊದಲು ಕೆಲವು ಗಂಟೆಗಳ ಕಾಲ ಬೇಳೆ ಮತ್ತು ಅಕ್ಕಿಯನ್ನು ನೆನೆಸುವುದು ಆರೋಗ್ಯಕ್ಕೆ ಒಳ್ಳೆಯದು. ಇಂಡಕ್ಷನ್ ಕುಕ್ಟಾಪ್ ವಿಷ್ಯಕ್ಕೆ ಬಂದಾಗ ನೀವು ಬೇಳೆ ನೆನೆಸಿಟ್ಟರೆ ಬೇಳೆ ಬೇಗ ಬೇಯುವುದಲ್ಲದೆ ಕರೆಂಟ್ ಉಳಿಯುತ್ತದೆ.
ಇಂಡಕ್ಷನ್ ಅಡುಗೆಯಲ್ಲಿ ಯಾವಾಗಲೂ ಚಪ್ಪಟೆಯಾದ, ದಪ್ಪ ತಳವಿರುವ ಪಾತ್ರೆಗಳನ್ನು ಬಳಸಿ. ಸ್ಟೀಲ್ ಅಥವಾ ಇಂಡಕ್ಷನ್-ಸ್ನೇಹಿ ನಾನ್-ಸ್ಟಿಕ್ ಕುಕ್ವೇರ್ ಉತ್ತಮ. ತೆಳುವಾದ ಅಥವಾ ಕಾಂತೀಯವಲ್ಲದ ಕುಕ್ವೇರ್ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ವಿದ್ಯುತ್ ಬಳಕೆಯನ್ನು ಹೆಚ್ಚಿಸುತ್ತದೆ.
56
ಈ ತಪ್ಪು ಮಾಡ್ಬೇಡಿ
ಒದ್ದೆಯಾದ ಕೈಗಳಿಂದ ಅಥವಾ ಒದ್ದೆಯಾದ ಪಾತ್ರೆಗಳಿಂದ ಇಂಡಕ್ಷನ್ ಕುಕ್ಕರ್ ಆನ್ ಮಾಡಬೇಡಿ. ಖಾಲಿ ಪಾತ್ರೆ ಇಟ್ಟು ಇಂಡಕ್ಷನ್ ಕುಕ್ಕರ್ ಆನ್ ಮಾಡಬೇಡಿ. ಹೆಚ್ಚಿನ ತಾಪಮಾನದಲ್ಲಿ ನಿರಂತರವಾಗಿ ಬೇಯಿಸಬೇಡಿ. ಆಗಾಗ್ಗೆ ಒಲೆ ಆನ್ ಮತ್ತು ಆಫ್ ಮಾಡುವುದನ್ನು ತಪ್ಪಿಸಿ. ಇಂಡಕ್ಷನ್ ಕುಕ್ ಟಾಪ್ ಸ್ವಚ್ಛಗೊಳಿಸಲು ಹತ್ತಿ ಅಥವಾ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ.
66
ತಾಪಮಾನ
ಕಡಿಮೆ ತಾಪಮಾನದಲ್ಲಿ ಅಡುಗೆ ಮಾಡುವುದರಿಂದ ವಿದ್ಯುತ್ ಬಳಕೆ ಕಡಿಮೆಯಾಗುತ್ತದೆ. ಇಂಡಕ್ಷನ್ ಕುಕ್ಕರ್ಗಳು ಬೇರೆ ಬೇರೆ ಅಡುಗೆಗೆ ಬೇರೆ ಬೇರೆ ವಿಧಾನ ಹೊಂದಿವೆ. ಹಾಲು, ಇಡ್ಲಿ ಸೇರಿದಂತೆ ಬೇರೆ ಬೇರೆ ಅಡುಗೆಗೆ ಸೂಕ್ತವಾದ ವಿಧಾನ ಬಳಸಿ. ಎಲ್ಲವನ್ನೂ ಒಂದೇ ಬಾರಿಗೆ ಬೇಯಿಸುವ ಅಭ್ಯಾಸ ಸಮಯ ಮತ್ತು ವಿದ್ಯುತ್ ಎರಡನ್ನೂ ಉಳಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.