ಅಡುಗೆಮನೆಯಲ್ಲಿ ದಿನಾ ಬಳಸುವ ಅಲ್ಯೂಮಿನಿಯಂ ಪಾತ್ರೆಗೂ ಇದೆ ಎಕ್ಸ್‌ಪೈರಿ ಡೇಟ್!

Published : Jun 24, 2025, 12:13 PM ISTUpdated : Jun 24, 2025, 12:40 PM IST

ದೀರ್ಘಕಾಲದವರೆಗೆ ಹೆಚ್ಚಿನ ತಾಪಮಾನದಲ್ಲಿ ಬಳಸಿದರೆ ಹೆವಿ ಅಲ್ಯೂಮಿನಿಯಂ ಪಾತ್ರೆಗಳು ಸಹ ಐದು-ಹತ್ತು ದಿನಗಳಲ್ಲಿ ಹಾಳಾಗಬಹುದು.

PREV
16

ಯಾರೊಬ್ಬರ ಅಡುಗೆಮನೆಗಾದರೂ ಹೋಗಿ ನೋಡಿ ಅಲ್ಲಿ ಪ್ಲಾಸ್ಟಿಕ್, ಅಲ್ಯೂಮಿನಿಯಂ ಪಾತ್ರೆಗಳು ಕಾಮನ್. ಕಾರಣವಿಷ್ಟೇ ಇತರ ಪಾತ್ರೆಗಳು, ಡಬ್ಬಿಗಳು ಹೋಲಿಸಿಕೊಂಡರೆ ಇವರೆಡಕ್ಕೂ ರೇಟ್ ಕಡಿಮೆ. ಅದಕ್ಕಾಗಿಯೇ ಜನರು ಅಡುಗೆ ಮಾಡಲು ಸುಲಭವಾಗಿ ಅಲ್ಯೂಮಿನಿಯಂ ಪಾತ್ರೆ ಖರೀದಿಸುತ್ತಾರೆ. ಆದರೆ ನೀವು ಬಹಳಷ್ಟು ವರ್ಷಗಳಿಂದ ಒಂದೇ ಪಾತ್ರೆಯನ್ನು ಬಳಸುತ್ತಿದ್ದರೆ ಅದನ್ನು ಚೇಂಜ್ ಮಾಡಬೇಕಾಗುತ್ತದೆ. ಏಕೆಂದರೆ ಇದಕ್ಕೂ ಎಕ್ಸ್‌ಪೈರಿ ಡೇಟ್ ಇದೆ.

26

ಇತ್ತೀಚೆಗೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಆಯೋಜಿಸಿದ್ದ ಓರಿಯಂಟೇಶನ್ ಕಾರ್ಯಕ್ರಮದಲ್ಲಿ, ನಿಯಂತ್ರಕರು ಮತ್ತು ತಯಾರಕರು ಅಲ್ಯೂಮಿನಿಯಂ ಪಾತ್ರೆಗಳ ಎಕ್ಸ್‌ಪೈರಿ ಡೇಟ್ ಬಹಳ ಬೇಗ ಮುಗಿಯುತ್ತದೆ ಎಂದು ತಿಳಿಸಿದ್ದಾರೆ. ಹಾಗಾಗಿ ಬಳಕೆ ಮತ್ತು ವಸ್ತುಗಳ ಗುಣಮಟ್ಟವನ್ನು ಅವಲಂಬಿಸಿ ಪ್ರತಿ 12 ರಿಂದ 24 ತಿಂಗಳಿಗೊಮ್ಮೆ ಬದಲಾಯಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

36

ಪರಿಷ್ಕೃತ ಬಿಐಎಸ್ ಮಾನದಂಡಗಳ ಪ್ರಕಾರ, ಅಡುಗೆ ಪಾತ್ರೆಗಳಲ್ಲಿ ಸೀಸ, ಕ್ಯಾಡ್ಮಿಯಮ್, ಪಾದರಸ ಮತ್ತು ಹೆಕ್ಸಾವೆಲೆಂಟ್ ಕ್ರೋಮಿಯಂನಂತಹ ವಿಷಕಾರಿ ಲೋಹದ ಅಂಶವು 0.05% ಕ್ಕಿಂತ ಕಡಿಮೆ ಇರಬೇಕೆಂದು ಸೂಚಿಸಲಾಗಿದೆ.

46

ಅತಿಯಾಗಿ ಬಳಸಿದ ಅಥವಾ ಹಾಳಾದ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ ನಾನಾ ಆರೋಗ್ಯ ಸಮಸ್ಯೆಗಳು ಸಮಸ್ಯೆಗಳು ಹೆಚ್ಚಾಗಲಿದೆ. "ಅಲ್ಯೂಮಿನಿಯಂ ಒಂದು ಮೃದುವಾದ ಲೋಹ. ದೀರ್ಘಕಾಲದವರೆಗೆ ಹೆಚ್ಚಿನ ತಾಪಮಾನದಲ್ಲಿ ಬಳಸಿದರೆ, ಹೆವಿ ಪಾತ್ರೆಗಳು ಸಹ ಐದು-ಹತ್ತು ದಿನಗಳಲ್ಲಿ ಹಾಳಾಗಬಹುದು. ಹಗುರವಾದ, ಮೆತು ಅಲ್ಯೂಮಿನಿಯಂ ಪಾತ್ರೆಗಳು ಕೇವಲ ಒಂದು ವರ್ಷ ಬಾಳಿಕೆ ಬರುತ್ತವೆ, ಆದರೆ ಮಧ್ಯಮ ಮತ್ತು ಭಾರೀ ಗಾತ್ರದವು ಎರಡು ವರ್ಷಗಳವರೆಗೆ ವಿಸ್ತರಿಸಬಹುದು" ಎಂದು ಬಿಐಎಸ್ ಬೆಂಗಳೂರಿನ ನಿರ್ದೇಶಕ ನರೇಂದ್ರ ರೆಡ್ಡಿ ಬೀಸು ಹೇಳಿದರು.

56

"ಇಂದು ಗ್ರಾಹಕರು ಅಲ್ಯೂಮಿನಿಯಂ ಪಾತ್ರೆಗಳನ್ನು ಲೈಫ್ ಟೈಂ ಬಳಸಲು ಬಯಸುತ್ತಾರೆ, ಆದರೆ ಅದನ್ನು 12 ರಿಂದ 20 ತಿಂಗಳುಗಳು ಬಳಸಬಹುದು" ಎಂದು ಕವಿರಾಜ್ ಕಿನಾಕ್ಸ್ ಕಿಚನ್‌ನ ಸಹ-ಸಂಸ್ಥಾಪಕ ರೋಹಿತ್ ಚಾವ್ಲಾ ಹೇಳಿದ್ದಾರೆ. ಕೆಲವು ಪಾತ್ರೆ ತಯಾರಕರು, ಮೊದಲ ವರ್ಷದ ನಂತರ ಲೇಪನಗಳು ಸಿಪ್ಪೆ ಸುಲಿಯಲು ಪ್ರಾರಂಭಿಸುತ್ತವೆ ಎಂದು ಒಪ್ಪಿಕೊಂಡರು. ಇದು ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ. ಆದ್ದರಿಂದ ಆರೋಗ್ಯ ಅಪಾಯಗಳನ್ನು ತಪ್ಪಿಸಲು ಗ್ರಾಹಕರು ಅಂತಹ ಪಾತ್ರೆಗಳನ್ನು ಬದಲಾಯಿಸಬೇಕು ಎಂದು ತಯಾರಕರು ಹೇಳಿದರು.

66

"ಶುದ್ಧ ಅಲ್ಯೂಮಿನಿಯಂ 'ಗ್ರೇಡ್ 19000' ಆಗಿದ್ದು, 99% ಅಲ್ಯೂಮಿನಿಯಂ ಅಂಶವನ್ನು ಹೊಂದಿದೆ. '63540' ಅಥವಾ '60342' ನಂತಹ ಇತರ ಗ್ರೇಡ್‌ಗಳು ಮಿಶ್ರಲೋಹಗಳಾಗಿವೆ, ಅವು ಗಟ್ಟಿಯಾಗಿರುತ್ತವೆ, ಆದರೆ ಇತರ ಅಂಶಗಳೊಂದಿಗೆ ಬೆರೆತಿರುತ್ತವೆ" ಎಂದು ಬೀಸು ವಿವರಿಸಿದರು.

Read more Photos on
click me!

Recommended Stories