ಜಿಗುಟು ಎಣ್ಣೆ ಡಬ್ಬವನ್ನು ಸ್ವಚ್ಛಗೊಳಿಸುವ ಸುಲಭ ಸಲಹೆ; ಮೊಂಡುಕಲೆ ನಿವಾರಣೆ ಇದು ರಾಮಬಾಣ

Published : Jun 20, 2026, 08:36 PM IST

ಅಡುಗೆಮನೆಯಲ್ಲಿ ಜಿಗುಟಾದ ಎಣ್ಣೆ ಕ್ಯಾನ್‌ಗಳನ್ನು ಸ್ವಚ್ಛಗೊಳಿಸುವುದು ಕಷ್ಟಕರ. ಆದರೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಮೊಂಡುತನದ ಜಿಡ್ಡು ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು.

PREV
15
ಅಡುಗೆಮನೆಯಲ್ಲಿರುವ ಎಣ್ಣೆ ಕ್ಯಾನ್‌ಗಳು

ಅಡುಗೆಮನೆಯಲ್ಲಿರುವ ಎಣ್ಣೆ ಕ್ಯಾನ್‌ಗಳು ಜಿಗುಟು ಕಲೆಗಳಿಂದ ತುಂಬಿಕೊಂಡಿರುತ್ತವೆ. ದಿನನಿತ್ಯ ಎಣ್ಣೆ ಬಳಕೆಯಿಂದ ಆಯಿಲ್ ಕ್ಯಾನ್ ಅಥವಾ ಪಾತ್ರೆಗಳನ್ನು ಕ್ಲೀನ್ ಮಾಡೋದು ಸವಾಲಿನ ಕೆಲಸ. ಮನೆಯಲ್ಲಿರುವ ಕೆಲವು ವಸ್ತುಗಳಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು.

25
ಎಣ್ಣೆ ಕ್ಯಾನ್‌ಕ್ಲೀನ್ ಮಾಡುವ ವಿಧಾನಗಳು

ಮೊದಲು ಕ್ಯಾನ್‌ನಲ್ಲಿರುವ ಎಣ್ಣೆಯನ್ನು ಸಂಪೂರ್ಣವಾಗಿ ತೆಗೆದುಕೊಳ್ಳಿ. ಈಗ ಕಾಟನ್ ಬಟ್ಟೆ ಅಥವಾ ಟಿಶ್ಯೂ ಪೇಪರ್‌ನಿಂದ ಡಬ್ಬವನ್ನು ಒರೆಸಿಕೊಳ್ಳಿ. ಡಬ್ಬದಲ್ಲಿರುವ ಎಣ್ಣೆ ಅಂಶ ಹೀರಿಕೊಳ್ಳಲು ಟಿಶ್ಯೂ ಪೇಪರ್ ಬಳಸಬೇಕಾಗುತ್ತದೆ. ಇದರಿಂದ ಡಬ್ಬ ಡ್ರೈ ಆಗುತ್ತೆ ಆದ್ರೆ ಒಳಗಿನ ಜಿಡ್ಡು ಕಡಿಮೆಯಾಗುತ್ತದೆ.

35
ಕಾಟನ್‌ ಬಟ್ಟೆ

ಕಾಟನ್‌ ಬಟ್ಟೆಯಿಂದ ಒರೆಸಿಕೊಂಡ ನಂತ್ರ ಡಬ್ಬಕ್ಕೆ ಬಿಸಿನೀರು ಹಾಕಿಕೊಳ್ಳಿ. ಈ ಬಿಸಿನೀರಿನಲ್ಲಿ ಸೋಪ್ ಪೌಡರ್, ವಿನೇಗರ್ ಸೇರಿಸಿ ಮುಚ್ಚಳ ಮುಚ್ಚಿ 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. 15-20 ನಿಮಿಷದ ಬಳಿಕ ಚೆನ್ನಾಗಿ ಅಲ್ಲಾಡಿಸಿ ನೀರನ್ನು ಹೊರಗೆ ತೆಗೆದುಕೊಳ್ಳಿ.

45
ಅಕ್ಕಿಕಾಳು ಮತ್ತು ಬಿಸಿನೀರು

ಈಗ ಡಬ್ಬದ ಮುಚ್ಚಳ ತೆಗೆದು ಮತ್ತೊಮ್ಮೆ ಕಾಟನ್‌ ಬಟ್ಟೆಯಿಂದ ಒರೆಸಿಕೊಳ್ಳಬೇಕು. ಇಷ್ಟಾದ್ರು ಮೊಂಡು ಜಿಗುಟು ಕಲೆಗಳು ಹೋಗದಿದ್ರೆ, ಈಗ ಒಂದು ಹಿಡಿಯಷ್ಟು ಅಕ್ಕಿಕಾಳು ಡಬ್ಬಕ್ಕೆ ಹಾಕಿ, ನಂತರ ಇದಕ್ಕೆ ಕೊಂಚ ಬಿಸಿನೀರು ಸೇರಿಸಿ ಮುಚ್ಚಳ ಮುಚ್ಚಿ ನಾಲ್ಕೈದು ನಿಮಿಷ ಚೆನ್ನಾಗಿ ಅಲ್ಲಾಡಿಸಿಕೊಳ್ಳಬೇಕು. ಹೀಗೆ ಮಾಡೋದರಿಂದ ಮೊಂಡುತನದ ಕಲೆಗಳನ್ನು ತೆಗೆಯುತ್ತದೆ

55
ತೇವಾಂಶ ಹೋದ್ಮೇಲೆ ಮರು ಬಳಕೆ ಮಾಡಿ

ನಂತರ ಇದಕ್ಕೆ ಸೋಪು-ಸ್ಪಾಂಜ್ ಬಳಸಿ ಡಬ್ಬಿಯ ಹೊರಭಾಗ, ಮುಚ್ಚಳ ಮತ್ತು ಅಂಚುಗಳನ್ನು ತೊಳೆದುಕೊಳ್ಳಿ. ಮುಚ್ಚಳದ ಗೆರೆ ಅಥವಾ ಡಬ್ಬದ ಮೂಲೆಯಲ್ಲಿ ಕಲೆಗಳು ಉಳಿದಿದ್ರೆ ಹಳೆಯ ಟೂಥ್ ಬ್ರಷ್ ಬಳಸಿ ಉಜ್ಜಿ ತೆಗೆಯಬಹುದು. ಅಂತಿಮವಾಗಿ ಮತ್ತೊಮ್ಮೆ ಬಿಸಿನೀರಿನಲ್ಲಿ ತೊಳೆದುಕೊಂಡು ಡಬ್ಬವನ್ನು ಒಣಗಿಸಿ. ಈಗ ಡಬ್ಬದಲ್ಲಿ ತೇವಾಂಶ ಹೋದ್ಮೇಲೆ ಡಬ್ಬಿಗೆ ಎಣ್ಣೆ ಹಾಕಿ ಬಳಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories