ಪೂರಿ ಹೆಚ್ಚು ಎಣ್ಣೆ ಹೀರಿಕೊಳ್ತಿದ್ಯಾ? ಕಲಸಿಟ್ಟ ಚಪಾತಿ ಹಿಟ್ಟು ಮರುದಿನ ಕಪ್ಪಗಾಗ್ತಿದ್ಯಾ? ಚಿಂತೆ ಬಿಡಿ, ಹೀಗೆ ಮಾಡಿ

Published : Aug 26, 2026, 06:50 PM IST

ಅಡುಗೆ ಮನೆಯಲ್ಲಿ ಎದುರಾಗುವ ಸಾಮಾನ್ಯ ಸಮಸ್ಯೆಗಳಿಗೆ ಸುಲಭ ಪರಿಹಾರಗಳಿವೆ. ಪೂರಿ ಹೆಚ್ಚು ಎಣ್ಣೆ ಹೀರಿಕೊಳ್ಳುವುದನ್ನು ತಡೆಯಲು ಮತ್ತು ಚಪಾತಿ ಹಿಟ್ಟು ಕಪ್ಪಾಗುವುದನ್ನು ತಪ್ಪಿಸಲು ಸರಳವಾದ ಟಿಪ್ಸ್‌ಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

PREV
15
ಒಂದಿಲ್ಲೊಂದು ಸಮಸ್ಯೆ

ಅಡುಗೆ ಮನೆಗಳಲ್ಲಿ ನಿತ್ಯವೂ ಮಹಿಳೆಯರು ಒಂದಲ್ಲೊಂದು ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ. ಅಡುಗೆ ಮಾಡುವಾಗ ಏನೇನೋ ಸಮಸ್ಯೆಗಳು ಎದುರಾಗುತ್ತವೆ. ಆದರೆ ಎಲ್ಲದ್ದಕ್ಕೂ ಒಂದಿಲ್ಲೊಂದು ಪರಿಹಾರ ಇದ್ದೇ ಇರುತ್ತದೆ. ಆದರೆ ಆ ವಿಷಯ ಹೆಚ್ಚಿನವರಿಗೆ ತಿಳಿದಿರುವುದಿಲ್ಲವಷ್ಟೇ. ಉಪ್ಪು, ಖಾರ, ಹುಳಿ ಹೆಚ್ಚಾದರೆ ಏನು ಮಾಡಬೇಕು, ಅಡುಗೆ ಪದಾರ್ಥ ಹೇಗೆ ಶೇಖರಿಸಿ ಇಟ್ಟುಕೊಳ್ಳಬೇಕು, ಹುಳು ಬೀಳದಂತೆ ಏನು ಮಾಡಬೇಕು, ತಿನಿಸುಗಳನ್ನು ಮಾಡುವಾಗ ಏನೇನು ಟಿಪ್ಸ್​ ಫಾಲೋ ಮಾಡಬೇಕು ಇತ್ಯಾದಿಗಳ ಬಗ್ಗೆ ತಿಳಿದುಕೊಂಡರೆ, ಅಡುಗೆ ಮನೆಯ ಕೆಲಸಗಳು ಸಲೀಸಾಗಿ ನಡೆಯುತ್ತಿವೆ.

25
ಪೂರಿಯಿಂದ ಸುರಿಯುವ ಎಣ್ಣೆ

ಇದೀಗ ಬಹುತೇಕ ಮಂದಿ ನೆಚ್ಚಿನ ಪೂರಿಯ ವಿಷಯಕ್ಕೆ ಬರೋಣ. ಪೂರಿ ಮಾಡಲು ಹಲವರು ಹೆದರುವುದು ಉಂಟು. ಇದಕ್ಕೆ ಕಾರಣ ಸಿಕ್ಕಾಪಟ್ಟೆ ಎಣ್ಣೆ ಬೇಕಾಗುತ್ತದೆ ಎನ್ನುವ ಕಾರಣಕ್ಕೆ. ಮತ್ತೆ ಕೆಲವರು ಪೂರಿಯಿಂದ ಸುರಿಯುವ ಎಣ್ಣೆ ನೋಡಿಯೇ ಅದರ ಉಸಾಬರಿ ಬೇಡ ಎಂದುಕೊಳ್ಳುವುದು ಉಂಟು.

35
ಹೀಗೆ ಮಾಡಿ

ಆದರೆ ನಿಮಗೆ ಗೊತ್ತಾ? ಈ ಒಂದು ಸಣ್ಣ ಟಿಪ್ಸ್​ ಫಾಲೋ ಮಾಡಿದ್ರೆ, ಪೂರಿ ಎಣ್ಣೆ ಹೆಚ್ಚು ಹೀರಿಕೊಳ್ಳೋದೇ ಇಲ್ಲ. ಜೊತೆಗೆ ಪೂರಿ ಮುಟ್ಟಿದರೂ ಎಣ್ಣೆ ಎಣ್ಣೆ ಎನ್ನಿಸುವುದಿಲ್ಲ.

45
ಏನು ಮಾಡಬೇಕು?

ಇದಕ್ಕೆ ಮಾಡಬೇಕಿರುವುದು ಇಷ್ಟೇ. ಪೂರಿಯ ಹಿಟ್ಟನ್ನು ಕಲಿಸಿ, ಅದನ್ನು ಲಟ್ಟಿಸಿದ ಬಳಿಕ, 10 ನಿಮಿಷ ಫ್ರಿಡ್ಜ್​ನಲ್ಲಿ ಇಟ್ಟು ಆಮೇಲೆ ಎಣ್ಣೆಯಲ್ಲಿ ಕರಿಯಿರಿ. ಇದರಿಂದ ಪೂರಿ ಎಣ್ಣೆಯನ್ನು ಹೆಚ್ಚು ಹೀರಿಕೊಳ್ಳುವುದೂ ಇಲ್ಲ, ಪೂರಿಯಿಂದ ಎಣ್ಣೆ ಸುರಿಯುವುದೂ ಇಲ್ಲ.

55
ಹಿಟ್ಟು ಕಪ್ಪಾಗುವುದು

ಇನ್ನು ಚಪಾತಿ ಅಥವಾ ಪೂರಿಯ ಕಲಸಿಟ್ಟ ಹಿಟ್ಟು ಹಾಗೆಯೇ ಇಟ್ಟರೆ ಮಾರನೆಯ ದಿನ ಅದು ಕಪ್ಪಾಗುವುದನ್ನು ನೋಡಿರುತ್ತೀರಿ. ಹೀಗೆ ಆಗದೇ ಇರಲು, ಉಳಿದ ಹಿಟ್ಟಿಗೆ ಸ್ವಲ್ಪ ಶುದ್ಧ ತುಪ್ಪವನ್ನು ಸವರಿ ಅದನ್ನು ಟೈಟ್​ ಆಗಿರೋ ಡಬ್ಬದಲ್ಲಿ ಇಟ್ಟು ಫ್ರಿಜ್​ನಲ್ಲಿ ಇಡಿ. ಆಗ ಮಾರನೆಯ ದಿನವೂ ಫ್ರೆಷ್​ ಆಗಿ ಇರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories