ವೇಸ್ಟ್ ಅಂತ ಆಲೂಗಡ್ಡೆ ಬೇಯಿಸಿದ ನೀರನ್ನು ಸಿಂಕ್ ಗೆ ಹಾಕ್ಬೇಡಿ, ಹೀಗೆ ಬಳಸಿ

Published : Jun 09, 2026, 04:22 PM IST

potato water hacks : ಪರೋಟಾ, ಪಲ್ಯ ಅಂತ ನಾನಾ ಆಹಾರ ತಯಾರಿಸಲು ಆಲೂಗಡ್ಡೆ ಬೇಯಿಸ್ತೇವೆ. ಆಲೂಗಡ್ಡೆ ಬೆಂದ ಮೇಲೆ ನೀರನ್ನು ಸಿಂಕ್ ಗೆ ಹಾಕಿ, ಆಲೂಗಡ್ಡೆ ಮಾತ್ರ ಬಳಸ್ತೇವೆ. ಆದ್ರೆ ಈ ಆಲೂಗಡ್ಡೆ ನೀರು ಸಾಮಾನ್ಯ ನೀರಲ್ಲ. ಇದ್ರಿಂದ ನಿಮ್ಮ ಮನೆಯಲ್ಲಿರುವ ಅಮೂಲ್ಯ ವಸ್ತುವಿಗೆ ಹೊಳಪು ನೀಡ್ಬಹುದು.

PREV
14
ಆಲೂಗಡ್ಡೆ ನೀರು

ಆಲೂಗಡ್ಡೆಯನ್ನು ಚೆನ್ನಾಗಿ ಕ್ಲೀನ್ ಮಾಡಿ, ಅದನ್ನು ಕತ್ತರಿಸಿ, ನೀರು ಹಾಕಿ ಕುಕ್ಕರ್ ಇಲ್ಲ ಹಾಗೇ ಗ್ಯಾಸ್ ಮೇಲಿಟ್ಟು ಬೇಯಿಸ್ತೇವೆ. ಆಲೂ ಬೇಯ್ತಿದ್ದಂತೆ ಅದ್ರ ನೀರನ್ನು ಸಿಂಕ್ ಗೆ ಹಾಕ್ತೇವೆ. ಇನ್ಮುಂದೆ ಸಿಂಕ್ ಗೆ ಆಲೂ ನೀರು ಹಾಕಿ ವೇಸ್ಟ್ ಮಾಡ್ಬೇಡಿ. ಅದನ್ನು ನಿಮ್ಮ ಮನೆಯಲ್ಲಿರುವ, ಕಪ್ಪಾದ ಬೆಳ್ಳಿ ಆಭರಣ, ಪಾತ್ರೆಗಳಿಗೆ ಹೊಳಪು ನೀಡಲು ಬಳಸಿ.

24
ಆಲೂ ನೀರು ಹೇಗೆ ಕೆಲಸ ಮಾಡುತ್ತೆ?

ಬೇಯಿಸಿದ ಆಲೂಗಡ್ಡೆ ನೀರಿನಲ್ಲಿ ಬಹಳಷ್ಟು ಪಿಷ್ಟವಿದೆ. ವೈರಲ್ ಹ್ಯಾಕ್ ಪ್ರಕಾರ, ಇದಕ್ಕೆ ಸ್ವಲ್ಪ ಬಿಳಿ ವಿನೆಗರ್ ಸೇರಿಸಿದಾಗ, ಮಿಶ್ರಣವು ಬೆಳ್ಳಿಯ ಮೇಲ್ಮೈಗಳಿಂದ ಕಲೆಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಅನೇಕ ಜನರು ಬೆಳ್ಳಿ ಆಭರಣಗಳು ಮತ್ತು ಪಾತ್ರೆಗಳನ್ನು ಸ್ವಚ್ಛಗೊಳಿಸಲು ಇದನ್ನು ಬಳಸ್ತಾರೆ.

34
ಯಾವೆಲ್ಲ ವಸ್ತು ಅಗತ್ಯ?

ಆಲೂಗಡ್ಡೆ ಬೇಯಿಸಿದ ನೀರಿಗೆ ನೀವು ಹೆಚ್ಚುವರಿ ಯಾವುದೇ ಪದಾರ್ಥ ಹಾಕ್ಬೇಕಾಗಿಲ್ಲ. ಮಾರ್ಕೆಟ್ ನಿಂದ ದುಬಾರಿ ಬೆಳ್ಳಿ ಕ್ಲೀನರ್ ತಂದು ಬಳಸಬೇಕಾಗಿಲ್ಲ. ಆಲೂಗಡ್ಡೆ ಬೇಯಿಸಿದ ನೀರು, 1 ಟೀಚಮಚ ಬಿಳಿ ವಿನೆಗರ್ ಮಾತ್ರ ಇದಕ್ಕೆ ಅಗತ್ಯ.

44
ಬಳಕೆ ಹೇಗೆ ?

ಆಲೂಗಡ್ಡೆ ಬೇಯಿಸಿದ ನೀರನ್ನು ಒಂದು ಪಾತ್ರೆಗೆ ಹಾಕಿ. ಅದಕ್ಕೆ ಒಂದು ಚಮಚ ವಿನೆಗರ್ ಹಾಕಿ. ಕಪ್ಪಗಾದ ಬೆಳ್ಳಿ ಆಭರಣ ಅಥವಾ ಪಾತ್ರೆಗಳನ್ನು ಈ ನೀರಿನಲ್ಲಿ ನೆನೆಹಾಕಿ. ಅದು ಸಂಪೂರ್ಣವಾಗಿ ಮುಳುಗುವವರೆಗೆ ನೀರನ್ನು ಹಾಕಬೇಕು. ಸುಮಾರು 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತ್ರ ಆಭರಣ ತೆಗೆದು ಮೃದುವಾದ ಬಟ್ಟೆಯಲ್ಲಿ ಕ್ಲೀನ್ ಮಾಡಿ. ಕೆಲವೇ ನಿಮಿಷದಲ್ಲಿ ನಿಮಗೆ ವ್ಯತ್ಯಾಸ ತಿಳಿಯುತ್ತದೆ. ಕಲೆ ತುಂಬಾ ಹಳೆಯದಾಗಿದ್ದರೆ ಅದ್ರ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ ಎಂಬುದು ನೆನಪಿರಲಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories