ಅಡುಗೆಮನೆ ಪಾತ್ರೆಗಳನ್ನು ಕ್ಲೀನ್ ಮಾಡಲು ಜನರು ಬೇರೆ ಬೇರೆ ಸ್ಕ್ರಬ್ಬರ್ ಬಳಕೆ ಮಾಡ್ತಾರೆ. ಸ್ಟೀಲ್ ಸ್ಕ್ರಬ್ಬರ್, ಪ್ಲಾಸ್ಟಿಕ್ ಸ್ಕ್ರಬ್ಬರ್ ಮತ್ತು ಸ್ಪಂಜು ಸೇರಿದಂತೆ ವಿವಿಧ ಸ್ಕ್ರಬ್ಬರ್ ಗಳು ಮಾರ್ಕೆಟ್ ನಲ್ಲಿ ಲಭ್ಯ ಇದೆ. ಪಾತ್ರೆಗೆ ಯಾವ ಸ್ಕ್ರಬ್ಬರ್ ಬೆಸ್ಟ್ ಎನ್ನುವ ಉತ್ತರ ಇಲ್ಲಿದೆ.
ಪಾತ್ರೆಗಳು ಹೆಚ್ಚು ದಿನ ಬಾಳಿಕೆ ಬರಬೇಕು, ಗೀರಾಗಬಾರದು ಅಂದ್ರೆ ಒಳ್ಳೆ ಸ್ಕ್ರಬ್ಬರ್ ಬಳಕೆ ಮಾಡ್ಬೇಕು. ನಾವಬು ಬಳಸುವ ಸ್ಕ್ರಬ್ಬರ್ ತಪ್ಪಾಗಿದ್ದರೆ ಪಾತ್ರೆ ಬೇಗ ಹಾಳಾಗುತ್ತದೆ. ಹೊಳಪು ಕಳೆದುಕೊಳ್ಳುತ್ತದೆ. ಪ್ರತಿಯೊಂದು ಪಾತ್ರೆಯು ವಿಭಿನ್ನ ವಿನ್ಯಾಸವನ್ನು ಹೊಂದಿರುತ್ತದೆ, ಆದ್ದರಿಂದ ಅವುಗಳನ್ನು ಸ್ವಚ್ಛಗೊಳಿಸಲು ವಿವಿಧ ರೀತಿಯ ಸ್ಕ್ರಬ್ಬರ್ಗಳನ್ನು ಬಳಸಬೇಕು. ಒಂದೇ ಸ್ಕ್ರಬ್ಬರ್ ಎಲ್ಲ ಪಾತ್ರೆಗೆ ವರ್ಕ್ ಆಗೋದಿಲ್ಲ.
25
ಸ್ಟೀಲ್ ಸ್ಕ್ರಬ್ಬರ್
ಸ್ಟೀಲ್ ಸ್ಕ್ರಬ್ಬ ಹೆಚ್ಚು ಗಟ್ಟಿಯಾಗಿರುತ್ತದೆ. ಇದನ್ನು ಹೆಚ್ಚಾಗಿ ಪ್ಯಾನ್ ಅಥವಾ ಮಡಕೆಗಳ ಮೊಂಡುತನದ ಕಲೆಗಳು ಮತ್ತು ಸುಟ್ಟ ಕರಕಲನ್ನು ತೆಗೆದುಹಾಕಲು ಬಳಸಲಾಗುತ್ತದೆ. ಇದು ಕಬ್ಬಿಣ ಮತ್ತು ಅಲ್ಯೂಮಿನಿಯಂ ಪಾತ್ರೆಗಳಿಗೆ ಸೂಕ್ತವಾಗಿದೆ. ನಾನ್-ಸ್ಟಿಕ್ ಪ್ಯಾನ್ಗಳು, ಗಾಜು ಅಥವಾ ಸೆರಾಮಿಕ್ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಇದನ್ನು ಬಳಸಬಾರದು. ಇವು ಪಾತ್ರೆಗಳ ಮೇಲೆ ಆಳವಾದ ಗೀರುಗಳನ್ನುಂಟು ಮಾಡುತ್ತವೆ.
35
ಪ್ಲಾಸ್ಟಿಕ್ ಸ್ಕ್ರಬ್ಬರ್
ಪ್ಲಾಸ್ಟಿಕ್ ಅಥವಾ ನೈಲಾನ್ ಸ್ಕ್ರಬ್ ಪ್ಯಾಡ್ಗಳನ್ನು ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ದೈನಂದಿನ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಬಳಸಲಾಗುತ್ತದೆ. ಅವು ಸ್ಟೀಲ್ ಸ್ಕ್ರಬ್ಬರ್ ಅಷ್ಟು ಗಟ್ಟಿಯಾಗಿರುವುದಿಲ್ಲ. ನೀವು ಇದನ್ನು ಉಕ್ಕಿನ ಪಾತ್ರೆಗಳು, ಪ್ಲಾಸ್ಟಿಕ್ ಪಾತ್ರೆಗಳು ಮತ್ತು ಗಾಜಿನ ಗ್ಲಾಸ್ಗಳನ್ನು ಸ್ವಚ್ಛಗೊಳಿಸಲು ಸುಲಭವಾಗಿ ಬಳಸಬಹುದು. ಇದು ಗ್ರೀಸ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಪ್ರಾತೆಗಳ ಹೊಳಪನ್ನು ಹಾಳು ಮಾಡೋದಿಲ್ಲ.
ಅಡುಗೆಮನೆಯಲ್ಲಿ ದುಬಾರಿ ನಾನ್-ಸ್ಟಿಕ್ ಪ್ಯಾನ್ಗಳು, ಟೆಫ್ಲಾನ್-ಲೇಪಿತ ಪಾತ್ರೆಗಳು ಅಥವಾ ಸೂಕ್ಷ್ಮವಾದ ಕ್ರೋಕರಿ ಸೆಟ್ಗಳನ್ನು ಹೊಂದಿದ್ದರೆ, ಸ್ಪಾಂಜ್ ಸ್ಕ್ರಬ್ಬರ್ ಅತ್ಯುತ್ತಮ ಆಯ್ಕೆಯಾಗಿದೆ. ಸ್ಪಾಂಜ್ ತುಂಬಾ ಮೃದುವಾಗಿದ್ದು, ಪಾತ್ರೆಗಳ ಮೇಲ್ಮೈ ಪದರವನ್ನು ರಕ್ಷಿಸುತ್ತದೆ. ಒಂದು ಬದಿಯಲ್ಲಿ ಸ್ವಲ್ಪ ಒರಟಾದ ಭಾಗವಿದ್ದು, ಸಣ್ಣ ಪ್ರಮಾಣದ ಕೊಳೆಯನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ.
55
ಯಾವ ಸ್ಕ್ರಬ್ಬರ್ ಉತ್ತಮ?
ಸ್ಕ್ರಬ್ಬರ್ ಬರೀ ಪಾತ್ರೆ ಕ್ಲೀನ್ ಮಾತ್ರ ಮಾಡೋದಿಲ್ಲ. ಅವು ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ. ಹಾಗಾಗಿ ಇದ್ರ ಬಗ್ಗೆ ವಿಶೇಷ ಕಾಳಜಿ ಅಗತ್ಯ. ಸ್ಪಾಂಜ್ ಮತ್ತು ಪ್ಲಾಸ್ಟಿಕ್ ಸ್ಕ್ರಬ್ಬರ್ಗಳು ದೀರ್ಘಕಾಲದವರೆಗೆ ಒದ್ದೆಯಾಗಿರುವುದರಿಂದ ಬ್ಯಾಕ್ಟೀರಿಯಾ ಸಂತಾನೋತ್ಪತ್ತಿ ವೇಗವಾಗಿ ಆಗುತ್ತದೆ. ಹಾಗಾಗಿ ಇವುಗಳನ್ನು ಬಳಸಿದ ನಂತ್ರ ಚೆನ್ನಾಗಿ ಒಳಗಿಸಬೇಕು. ಎರಡು – ಮೂರು ವಾರಕ್ಕೊಮ್ಮೆಇದನ್ನು ಬದಲಿಸಬೇಕು. ಸ್ಟೀಲ್ ಸ್ಕ್ರಬ್ಬರ್ ಬೇಗ ಒಣಗಿದ್ರೂ ನಿಮ್ಮ ಪಾತ್ರೆ ಹಾಗೂ ಕೈಗೆ ಅಪಾಯವುಂಟು ಮಾಡುವ ಸಾಧ್ಯತೆ ಇರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.