ಮನೆಯಲ್ಲಿನ ಜಿರಳೆ ಮತ್ತು ಹಲ್ಲಿಗಳ ಕಾಟವನ್ನು ರಾಸಾಯನಿಕಗಳಿಲ್ಲದೆ ನಿವಾರಿಸಬಹುದು. ಟೂತ್‌ಪೇಸ್ಟ್, ಸಾಬೂನು ಮತ್ತು ಸಕ್ಕರೆ ಬಳಸಿ ತಯಾರಿಸಿದ ಸರಳ ಮನೆಮದ್ದಿನಿಂದ ಇವುಗಳನ್ನು ಶಾಶ್ವತವಾಗಿ ಓಡಿಸಬಹುದು.
ಮನುಷ್ಯರು ಹುಟ್ಟುವ ಮೊದಲೇ ಹುಟ್ಟಿದ್ದು ಜಿರಳೆ ಎನ್ನುವುದು ಅಧ್ಯಯನದಿಂದ ಸಾಬೀತು ಆಗುತ್ತದೆ. ಹೊಸ ಮನೆ ಕಟ್ಟಿಸಿದರೂ ಅದ್ಯಾವುದೋ ಮಾಯೆಯಿಂದ, ಎಷ್ಟೇ ಮನೆ ಸ್ವಚ್ಛ ಇಟ್ಟರೂ ಜಿರಳೆ ಕಾಟವಂತೂ ಇದ್ದೇ ಇದೆ. ಅದೇ ರೀತಿ ಹಲ್ಲಿಗಳೂ ಬಂದು ಸೇರಿಕೊಳ್ಳುತ್ತವೆ.
26
ರಾಸಾಯನಿಕದ ಸಮಸ್ಯೆ
ಹಲ್ಲಿ ಮತ್ತು ಜಿರಳೆಗಳನ್ನು ಸಾಯಿಸಲು ಹಲವಾರು ರಾಸಾಯನಿಕ ಸಿಂಪಡಣೆಗಳು ಮಾರುಕಟ್ಟೆಯಲ್ಲಿ ಸಿಕ್ಕರೂ, ಅವು ಆರೋಗ್ಯಕ್ಕೆ ಅಷ್ಟೇ ಡೇಂಜರಸ್, ಅವುಗಳಿಂದ ಭಯಾನಕ ರೋಗಗಳು ಬರುತ್ತವೆ ಎನ್ನುವುದು ಇದಾಗಲೇ ಸಾಬೀತು ಆಗಿದೆ.
36
ಈ ರೆಮಿಡಿ ಮಾಡಿ ನೋಡಿ
ಹಲ್ಲಿ, ಜಿರಳೆ ಓಡಿಸಲು ಇದಾಗಲೇ ಹಲವು ಹೋಮ್ ರೆಮಿಡಿಗಳನ್ನುಟ್ರೈ ಮಾಡಿರಬಹುದು. ಆದರೆ ಅದು ವರ್ಕ್ ಆಗಿದ್ಯೋ ಇಲ್ಲವೋ. ಆದರೆ ಈ ಒಂದು ಟ್ರಿಕ್ಸ್ನಿಂದ ನಿಜಕ್ಕೂ ನಿಮ್ಮ ಮನೆಯಲ್ಲಿನ ಜಿರಳೆ ಮತ್ತು ಹಲ್ಲಿಗಳು ಸಾಯುತ್ತವೆ. ಮನೆಯ ಕಡೆ ಮತ್ತೊಮ್ಮೆ ಸುಳಿಯಲ್ಲ.
ಇದು ಯಾವುದಾದರೂ ಟೂಥ್ ಪೇಸ್ಟ್ ಮತ್ತು ಸಾಬೂನು ಬೇಕು. ಮೊದಲು ಸಾಬೂನನ್ನು ಒಂದು ಪಾತ್ರೆಯಲ್ಲಿ ಸ್ವಲ್ಪವೇ ತುರಿದುಕೊಳ್ಳಿ. ಇದಕ್ಕೆ ಒಂದು ಚಮಚ ಯಾವುದಾದರೂ ಟೂಥ್ಪೇಸ್ಟ್ ಸೇರಿಸಿ.
56
ಸಕ್ಕರೆ ಸೇರಿಸಿ
ಇದಕ್ಕೆ ಎರಡು ದೊಡ್ಡ ಚಮಚದಲ್ಲಿ ಸಕ್ಕರೆ ಹಾಕಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಬ್ರೆಡ್ ಪೀಸ್ಪೀಸ್ ಮಾಡಿ ಅಥವಾ ಬಿಸ್ಕೆಟ್ ಅನ್ನು ಪೀಸ್ ಪೀಸ್ ಮಾಡಿ ಇದಕ್ಕೆ ಸೇರಿಸಿ.
66
ಬಾಟಲಿಯ ಮುಚ್ಚಳದಲ್ಲಿ
ಬಳಿಕ ಚಿಕ್ಕ ಚಿಕ್ಕ ಪಾತ್ರೆ ಅಥವಾ ಯಾವುದಾದರೂ ಬಾಟಲಿಯ ಮುಚ್ಚಳದಲ್ಲಿ ಈ ಪೇಸ್ಟ್ ಹಾಕಿ, ಬಳಿಕ ಎಲ್ಲೆಲ್ಲಿ ಜಿರಳೆ, ಹಲ್ಲಿಯ ಕಾಟವೋ ಅಲ್ಲಿ ಇವುಗಳನ್ನು ಇಡಿ. ಕೆಲವೇ ದಿನಗಳಲ್ಲಿ ಜಿರಳೆ, ಹಲ್ಲಿ ನಿಮ್ಮ ಮನೆಯಿಂದ ನಾಪತ್ತೆಯಾಗುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.