Kannada

ಕುಕ್ಕರ್​ ಬಳಸಿ ಲಿಂಬೆಕಾಯಿಯ ಉಪ್ಪಿನಕಾಯಿ

ಕುಕ್ಕರ್​ ಬಳಸಿ ಲಿಂಬೆಕಾಯಿಯ ಉಪ್ಪಿನಕಾಯಿ ಮಾಡುವುದು ನಿಮಗೆ ಗೊತ್ತೆ? ಹಂತ ಹಂತದ ಮಾಹಿತಿ ಇಲ್ಲಿದೆ.

Kannada

ಲಿಂಬು ಮತ್ತು ಹಸಿ ಮೆಣಸಿನ ಕಾಯಿ

ಒಂದು ಪಾತ್ರೆಯಲ್ಲಿ 12 ಲಿಂಬು ಹಾಕಿಕೊಳ್ಳಿ. ಅದಕ್ಕೆ 250 ಗ್ರಾಂ ಹಸಿ ಮೆಣಸಿನ ಕಾಯಿ ಸೇರಿಸಿ. ಜೊತೆ ಒಂದು ಕಪ್​ ನೀರು ಸೇರಿಸಿ.

Image credits: Puviya kitchen instagram
Kannada

ನೆನೆಸಿಟ್ಟ ಹುಣಸೆ ಹಣ್ಣು

ಕುದಿಯಲು ಬಿಟ್ಟು ಚೆನ್ನಾಗಿ ಕುದ್ದ ಮೇಲೆ ಅದನ್ನು ತೆಗೆದು ಪಾತ್ರೆಗೆ ಹಾಕಿಕೊಳ್ಳಿ. ಸ್ವಲ್ಪ ಬಿಸಿ ನೀರಿನಲ್ಲಿ ಲಿಂಬೆಗಾತ್ರದ ಹುಣಸೆ ಹಣ್ಣನ್ನು ಇಟ್ಟುಕೊಳ್ಳಿ.

Image credits: Puviya kitchen instagram
Kannada

ಪ್ಯಾನ್​ನಲ್ಲಿ ಒಗ್ಗರಣೆ

ಬಳಿಕ ಒಂದು ಪ್ಯಾನ್​ನಲ್ಲಿ ಎಣ್ಣೆ ಹಾಕಿ. ಸಾಸಿವೆ, ಮೆಂತ್ಯ ಕಾಳು ಹಾಕಿ ಮಿಕ್ಸ್​ ಮಾಡಿಕೊಳ್ಳಿ. ಅದನ್ನು ಕುಟಾಣಿಯಲ್ಲಿ ಪುಡಿ ಮಾಡಿಕೊಳ್ಳಿ.

Image credits: Puviya kitchen instagram
Kannada

ಲಿಂಬೆ ಹಣ್ಣಿನ ಬೀಜ

ಬೇಯಿಸಿದ ಲಿಂಬೆ ಹಣ್ಣನ್ನು ಎರಡು ಹೋಳು ಮಾಡಿ ಬೀಜ ತೆಗೆಯಿರಿ. ಮಿಕ್ಸಿಯಲ್ಲಿ ಬೇಯಿಸಿಟ್ಟ ಹಸಿರುಮೆಣಸಿನ ಕಾಯಿ ಮತ್ತು ಹುಣಸೆಹಣ್ಣನ್ನು ಸೇರಿಸಿ ಮಿಕ್ಸಿ ಮಾಡಿ.

Image credits: Puviya kitchen instagram
Kannada

ಬೆಳ್ಳುಳ್ಳಿ ಒಗ್ಗರಣೆ

ಒಗ್ಗರಣೆ ಪಾತ್ರೆಯಲ್ಲಿ ಎಣ್ಣೆ ಹಾಕಿ ಒಂದು ಗಡ್ಡೆ ಬೆಳ್ಳುಳ್ಳು ಎಸಳು ಸೇರಿಸಿ ಫ್ರೈ ಮಾಡಿ. ಅದಕ್ಕೆ ಸ್ವಲ್ಪ ಇಂಗು ಹಾಕಿ.

Image credits: Puviya kitchen instagram
Kannada

ಕೊನೆಯಲ್ಲಿ ಕುಕ್ಕರ್​ಗೆ

ಎಲ್ಲವನ್ನೂ ಕುಕ್ಕರ್​ ಪಾತ್ರೆಗೆ ಹಾಕಿ. ಚಿಟಿಕೆ ಅರಿಶಿಣದ ಪುಡಿ ಸೇರಿಸಿ. ಮೆಣಸಿನ ಪೌಡರ್​ ಅನ್ನೂ ಒಂದು ಚಮಚ ಸೇರಿಸಿ, ಉಪ್ಪು ಹಾಕಿ ಮಿಕ್ಸ್​ ಮಾಡಿ. ಉಪ್ಪಿನಕಾಯಿ ರೆಡಿ. ಅದನ್ನು ಬಾಟಲಿಗೆ ಹಾಕಿ ಇಡಿ. 

Image credits: Puviya kitchen instagram

ನಿಮ್ಮನೆ ಕರಿಬೇವು ಗಿಡ ಕಡ್ಡಿಯಾಗಿದೆಯೇ? ಪೊದೆಯಂತೆ ಬೆಳೆಯಲು ಕುಡಿ ಕತ್ತರಿಸಿ ನೋಡಿ

ಕಿಚನ್‌ಗೆ ನೀಡಿ ಮಾಡರ್ನ್ ಲುಕ್: ಗ್ಯಾಸ್ ಸಿಲಿಂಡರ್ ಮುಚ್ಚಿಡಲು ಈ 5 ವಿಧಾನ ಬಳಸಿ!

ಫ್ರೆಶ್ ಪುದೀನಾ ಬೇಕಾ? ಮನೆಯ ಚಿಕ್ಕ ಜಾಗದಲ್ಲಿ ಬೆಳೆಸಲು ಇಲ್ಲಿವೆ 6 ಸೂಪರ್ ಟಿಪ್ಸ್

ಸ್ಟೇನ್‌ಲೆಸ್ ಸ್ಟೀಲ್ ಸಿಂಕ್ ಔಟ್‌ಡೇಟೆಡ್? ಈಗ ಟ್ರೆಂಡ್‌ನಲ್ಲಿವೆ ಈ 5 ಡಿಸೈನ್‌ಗಳು