ತೆಂಗಿನಕಾಯಿ ಒಡೆಯಲು ಇನ್ನು ಕಷ್ಟಪಡಬೇಕಿಲ್ಲ! ಈ ಟ್ರಿಕ್ಸ್ ಗೊತ್ತಿದ್ರೆ 2 ಸೆಕೆಂಡ್‌ನಲ್ಲಿ ಎರಡು ಭಾಗ !

Published : Sep 28, 2026, 06:03 PM IST

Easy Kitchen Tips; ತೆಂಗಿನಕಾಯಿಯನ್ನು ಒಡೆಯಲು ನೀವು ಕಷ್ಟ ಪಡುತ್ತಿದ್ದೀರಾ? ಇನ್ನು ಮುಂದೆ ಕಷ್ಟಪಡಬೇಕಾಗಿಲ್ಲ, ಯಾಕಂದ್ರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಟ್ರಿಕ್ಸ್ ಮೂಲಕ ಕೆಲವೇ ಸೆಕೆಂಡುಗಳಲ್ಲಿ ನೀವು ತೆಂಗಿನಕಾಯಿ ಎರಡು ಭಾಗ ಮಾಡಬಹುದು.

PREV
16
ತೆಂಗಿನ ಕಾಯಿ ಒಡೆಯಲು ಇನ್ನು ಕಷ್ಟ ಪಡಬೇಕಾಗಿಲ್ಲ

ತೆಂಗಿನಕಾಯಿಯನ್ನು ಭಾರತೀಯ ಅಡುಗೆಮನೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ, ತೆಂಗಿನಕಾಯಿಯ ಗಟ್ಟಿಯಾದ ಚಿಪ್ಪನ್ನು ಒಡೆಯುವುದು ಕೆಲಸ ಮಾತ್ರ ಸಿಕ್ಕಾಪಟ್ಟೆ ಕಷ್ಟ. ಕೆಲವೊಮ್ಮೆ, ಭಾರವಾದ ಉಪಕರಣಗಳಿದ್ದರೂ ಸಹ, ತೆಂಗಿನಕಾಯಿ ಒಡೆಯೋದು ಕಷ್ಟ ಆಗುತ್ತದೆ. ನಿಮಗೂ ಕೂಡ ಅಡುಗೆ ಮಾಡುವಾಗ ತೆಂಗಿನ ಕಾಯಿ ಒಡೆಯೋದು ಕಷ್ಟ ಆಗಿದ್ರೆ, ಶಶಾಂಕ್ ಅಲ್ಸಿ ಎನ್ನುವ ಇನ್ಫುಯನ್ಸರ್ ಹಂಚಿಕೊಂಡ ಈ ಹ್ಯಾಕ್ ನಿಮ್ಮ ಕೆಲಸವನ್ನು ಹೆಚ್ಚು ಸುಲಭಗೊಳಿಸುತ್ತದೆ. ತೆಂಗಿನಕಾಯಿಯ ನೈಸರ್ಗಿಕ ರಚನೆ ಮತ್ತು ಅದನ್ನು ಸರಿಯಾದ ದಿಕ್ಕಿನಲ್ಲಿ ಹಿಡಿದಿಟ್ಟುಕೊಳ್ಳುವ ಈ ತಂತ್ರವನ್ನು ಬಳಸಿಕೊಂಡು, ನೀವು ಹೆಚ್ಚು ಬಲ ಬಳಸದೆಯೇ ತೆಂಗಿನಕಾಯಿ ಒಡೆಯಬಹುದು ಹೇಗೆ ನೋಡೋಣ.

26
ತೆಂಗಿನಕಾಯಿಯ ನೈಸರ್ಗಿಕ ಭಾಗಗಳನ್ನು ಗುರುತಿಸಿ

ಹತ್ತಿರದಿಂದ ನೋಡಿದರೆ ತೆಂಗಿನಕಾಯಿಯ ಹೊರ ಚಿಪ್ಪಿನ ಮೇಲೆ ಮೂರು ನೈಸರ್ಗಿಕ ರೇಖೆಗಳು ಗೋಚರಿಸುತ್ತವೆ, ಅದು ತೆಂಗಿನಕಾಯಿಯನ್ನು ಮೂರು ಭಾಗಗಳಾಗಿ ವಿಭಜಿಸುತ್ತದೆ. ಈ ವಿಭಾಗಗಳಲ್ಲಿ ಒಂದು ಸ್ವಲ್ಪ ದೊಡ್ಡದಾಗಿದ್ದರೆ, ಉಳಿದ ಎರಡು ಚಿಕ್ಕದಾಗಿರುತ್ತವೆ. ತೆಂಗಿನಕಾಯಿಯನ್ನು ಸರಿಯಾಗಿ ಒಡೆಯಲು ಈ ರಚನೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

36
ಸರಿಯಾದ ದಿಕ್ಕು ಮತ್ತು ಹಿಡಿಯುವ ವಿಧಾನ

ತೆಂಗಿನಕಾಯಿಯನ್ನು ಎಂದಿಗೂ ಲಂಬವಾಗಿ ಹಿಡಿಯಬೇಡಿ. ಯಾವಾಗಲೂ ನಿಮ್ಮ ಕೈಯಲ್ಲಿ ಅಡ್ಡಲಾಗಿ ಹಿಡಿದುಕೊಳ್ಳಿ. ಹಾಗೆ ಮಾಡುವಾಗ, ತೆಂಗಿನಕಾಯಿಯ ಸಣ್ಣ ಭಾಗಗಳು ಕೆಳಮುಖವಾಗಿ ಮತ್ತು ದೊಡ್ಡ ಭಾಗಗಳು ಮೇಲಕ್ಕೆ ಮುಖ ಮಾಡಿರುವಂತೆ ನೋಡಿಕೊಳ್ಳಿ.

46
ಭಾರವಾದ ವಸ್ತುವನ್ನು ಬಳಸಿ

ತೆಂಗಿನಕಾಯಿಯನ್ನು ಹೊಡೆಯಲು ನಿಮಗೆ ಭಾರವಾದ ಕತ್ತಿ, ಸುತ್ತಿಗೆಯ ಅಗತ್ಯವಿಲ್ಲ. ನಿಮ್ಮ ಅಡುಗೆಮನೆಯಿಂದ ಸ್ವಲ್ಪ ಭಾರವಾದ ಯಾವುದೇ ವಸ್ತುವನ್ನು ತೆಗೆದುಕೊಳ್ಳಬಹುದು, ತೆಂಗಿನಕಾಯಿಯನ್ನು ಗುರಿಯಾಗಿಸಲು ಅದನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ.

56
ತೆಂಗಿನಕಾಯಿಯನ್ನು ಸರಿಯಾದ ಜಾಗದಲ್ಲಿ ಹೊಡೆಯಿರಿ

ಈಗ, ತೆಂಗಿನಕಾಯಿಯನ್ನು ನಿಮ್ಮ ಕೈಯಲ್ಲಿ ಅಡ್ಡಲಾಗಿ ಹಿಡಿದುಕೊಂಡು, ತೆಂಗಿನಕಾಯಿಯನ್ನು ಅದರ ಮಧ್ಯದ ರೇಖೆಯ ಉದ್ದಕ್ಕೂ ಭಾರವಾದ ವಸ್ತುವಿನಿಂದ ಒಂದೆರಡು ಬಾರಿ ಲಘುವಾಗಿ ಆದರೆ ದೃಢವಾಗಿ ಹೊಡೆಯಿರಿ. ನೀವು ಸರಿಯಾದ ಜಾಗಕ್ಕೆ ಹೊಡೆದರೆ, ತಕ್ಷಣವೇ ತೆಂಗಿನಕಾಯಿಯಲ್ಲಿ ಸ್ಪಷ್ಟವಾದ ಬಿರುಕು ಕಾಣಿಸಿಕೊಳ್ಳುತ್ತದೆ ತೆಂಗಿನಕಾಯಿಯಲ್ಲಿ ಬಿರುಕು ಉಂಟಾದ ತಕ್ಷಣ, ನೀರು ಒಳಗಿನಿಂದ ಹರಿಯಲು ಪ್ರಾರಂಭಿಸುತ್ತದೆ. ಆ ನೀರನ್ನು ಸಂಗ್ರಹಿಸಿ.

66
ಸುಲಭವಾಗಿ ಎರಡು ಸಮಾನ ಭಾಗಗಳಾಗಿ ಬೇರ್ಪಡಿಸಿ

ನೀರು ಬಸಿದ ನಂತರ, ತೆಂಗಿನಕಾಯಿಯನ್ನು ಮತ್ತೊಮ್ಮೆ ನಿಧಾನವಾಗಿ ಹೊಡೆಯಿರಿ, ಆಗ ಅದು ಮಧ್ಯದಲ್ಲಿ ಎರಡು ಸಮಾನ, ದುಂಡಗಿನ ಭಾಗಗಳಾಗಿ ಒಡೆಯುತ್ತದೆ. ಈ ಸರಳ ಹ್ಯಾಕ್ ಟ್ರೈ ಮಾಡಿದ್ರೆ ನಿಮ್ಮ ಕೈಗಳಿಗೆ ಗಾಯವಾಗುವುದಿಲ್ಲ ಅಥವಾ ಅಡುಗೆಮನೆ ಗಲೀಜು ಆಗುವುದಿಲ್ಲ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories