ಮೊಟ್ಟೆ ತಿನ್ನೋದು ರುಚಿ ಆದ್ರೆ ಬೇಯಿಸೋದು ಸುಲಭ ಅಲ್ಲ. ಮೊಟ್ಟೆ ಬೇಯ್ತಿರುವಾಗ್ಲೇ ಕೆಲ ಮೊಟ್ಟೆಯ ಸಿಪ್ಪೆ ಒಡೆಯುತ್ತೆ. ಕೆಲವೊಮ್ಮೆ ಸಿಪ್ಪೆ ತೆಗೆಯೋದೇ ಕಷ್ಟವಾಗುತ್ತೆ. ಮೊಟ್ಟೆ ಸರಿಯಾಗಿ ಬೆಂದಿದ್ಯಾ ಇಲ್ವ ಅನ್ನೋದನ್ನು ಪತ್ತೆ ಮಾಡೋದು ಕೂಡ ಕಷ್ಟ. ಅದಕ್ಕೆ ಸುಲಭ ಟ್ರಿಕ್ ಇಲ್ಲಿದೆ.
ಕುದಿಯುವ ನೀರಿನಲ್ಲಿ ಮೊಟ್ಟೆಯ ಸಿಪ್ಪೆ ಒಡೆದ್ರೆ ಒಳಗಿನ ಭಾಗ ಹೊರಗೆ ಬರುತ್ತೆ. ಇದ್ರಿಂದ ಮೊಟ್ಟೆ ತಿನ್ನೋದು ಕಷ್ಟವಾಗುತ್ತೆ. ಮೊಟ್ಟೆ ಸುಲಭವಾಗಿ ಬೇಯಬೇಕು, ಬೆಂದ್ಮೇಲೆ ಸಿಪ್ಪೆ ತೆಗೆಯೋದು ಕೂಡ ಸುಲಭ ಆಗ್ಬೇಕು ಅಂದ್ರೆ ನೀವು ಮನೆಯಲ್ಲಿರುವ ಒಂದು ಪದಾರ್ಥವನ್ನು ಮೊಟ್ಟೆ ಬೇಯಿಸೋವಾಗ ಹಾಕಿ.
24
ನಿಂಬೆ ರಸ
ಮೊಟ್ಟೆ ಬೇಯಿಸುವ ನೀರಿಗೆ ನೀವು ಅರ್ಧ ಚಮಚ ನಿಂಬೆ ರಸ ಸೇರಿಸಿ. ಈ ಸಣ್ಣ ಟ್ರಿಕ್ ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತೆ. ತಜ್ಞರ ಪ್ರಕಾರ, ನಿಂಬೆ ರಸದಲ್ಲಿ ಇರುವ ಸಿಟ್ರಿಕ್ ಆಸಿಡ್ ನೀರಿನ pH ಮಟ್ಟದಲ್ಲಿ ಸ್ವಲ್ಪ ಬದಲಾವಣೆ ಉಂಟುಮಾಡುತ್ತದೆ. ಇದರಿಂದ ಮೊಟ್ಟೆಯ ಸಿಪ್ಪೆ ಬೇಯಿಸುವ ವೇಳೆ ಒಡೆಯುವ ಸಾಧ್ಯತೆ ಕಡಿಮೆ.
34
ಹೀಗೆ ಬಳಸಿ
ನೀವು ಮೊಟ್ಟೆ ಬೇಯಿಸುವ ನೀರಿಗೆ ನಿಂಬೆ ರಸವನ್ನು ಹಾಕಿದಾಗ ಮೊಟ್ಟೆ ಬೆಂದ ನಂತ್ರ ಸಿಪ್ಪೆ ತೆಗೆಯೋದು ಕೂಡ ಸುಲಭವಾಗುತ್ತೆ. ಇದನ್ನು ಬಳಸುವ ವಿಧಾನವೂ ತುಂಬಾ ಸರಳ. ಮೊದಲು ಒಂದು ಪಾತ್ರೆಯಲ್ಲಿ ಮೊಟ್ಟೆ ಸಂಪೂರ್ಣ ಮುಳುಗುವಷ್ಟು ನೀರು ಹಾಕಿ. ನಂತರ ಅದಕ್ಕೆ ಅರ್ಧ ಚಮಚ ನಿಂಬೆ ರಸ ಸೇರಿಸಿ. ಈಗ ಮೊಟ್ಟೆಗಳನ್ನು ಎಚ್ಚರಿಕೆಯಿಂದ ನೀರಿನಲ್ಲಿ ಹಾಕಿ, ಸಾಮಾನ್ಯ ರೀತಿಯಲ್ಲಿ 10 ರಿಂದ 12 ನಿಮಿಷಗಳವರೆಗೆ ಬೇಯಿಸಿ. ನಂತರ ತಣ್ಣನೆಯ ನೀರಿಗೆ ಹಾಕಿದರೆ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು.
ಮೊಟ್ಟೆ ಬೇಯಿಸುವ ನೀರಿಗೆ ನಿಂಬೆ ರಸ ಹಾಕಿದ್ರೆ ಮೊಟ್ಟೆ ರುಚಿ ಬದಲಾಗುತ್ತಾ ಎನ್ನುವ ಪ್ರಶ್ನೆ ಕಾಡೋದು ಸಾಮಾನ್ಯ. ಅದ್ರ ಬಗ್ಗೆ ಟೆನ್ಷನ್ ಬೇಡ. ಮೊಟ್ಟೆ ರುಚಿಯಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ. ಸಿಪ್ಪೆ ಇರೋದ್ರಿಂದ ನಿಂಬೆ ರಸ ಮೊಟ್ಟೆಯ ಒಳಗಿನ ರುಚಿಯನ್ನು ಬದಲಾಯಿಸುವುದಿಲ್ಲ. ಹಳೆ ಮೊಟ್ಟೆಗಳಿಗೆ ಈ ಟ್ರಿಕ್ಸ್ ಹೆಚ್ಚು ಉಪಯೋಗಕಾರಿ ಎನ್ನಲಾಗುತ್ತದೆ. ನೆಕ್ಸ್ಟ್ ಟೈಂ ಮೊಟ್ಟೆ ಬೇಯಿಸುವಾಗ ಈ ಟ್ರಿಕ್ ಒಮ್ಮೆ ಪ್ರಯತ್ನಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.