LED Buld Cleaning: ಕರೆಂಟ್ ಇದ್ರೂ ಮನೆ ಕತ್ತಲಾಗಿದ್ಯಾ? ಹೊಸ ಬಲ್ಬ್ ಕೊಳ್ಳುವ ಮುನ್ನ ಈ ಸಣ್ಣ ಕೆಲ್ಸ ಮಾಡಿ

Published : Jul 21, 2026, 11:55 AM IST

ಮನೆಯ ಎಲ್ಲ ಲೈಟ್‌ ಆನ್‌ ಆಗಿದ್ರೂ ಮೊದಲಿನಂಗೆ ಬೆಳಕು ಬರ್ತಿಲ್ಲ ಅಂದ್ರೆ ಅದಕ್ಕೆ ಲೈಟ್‌ ಬದಲಿಸೋದು ಪರಿಹಾರ ಅಲ್ಲ.  ಬಲ್ಬ್‌ ಮೇಲೆ ಕುಳಿತಿರುವ ಧೂಳು, ಬೆಳಕನ್ನು ಮಂದ ಮಾಡಿರ್ಬಹುದು. ಇಡೀ ಮನೆ ಕ್ಲೀನ್‌ ಮಾಡಿ ಬಲ್ಬ್ ಕ್ಲೀನ್‌ ಮಾಡೋದನ್ನು ಮರೆತಿರ್ತೇವೆ. ಬಲ್ಬ್‌ ಕ್ಲೀನಿಂಗ್‌ ಸುಲಭ ಹ್ಯಾಕ್ಸ್‌ ಇಲ್ಲಿದೆ.

PREV
15
ಬಲ್ಬ್‌ ಮೇಲೆ ಧೂಳು

ನಾವು ಪ್ರತಿದಿನ ಮನೆ ಒರೆಸ್ತೇವೆ. ಟೇಬಲ್, ಕಿಟಕಿ, ಫ್ಯಾನ್, ಟಿವಿ ಎಲ್ಲವನ್ನೂ ಕ್ಲೀನ್‌ ಮಾಡ್ತೇವೆ. ಆದ್ರೆ ಬಲ್ಬ್ ಕಡೆಗೆ ಗಮನ ಕೊಡೋದಿಲ್ಲ. ದಿನದಿಂದ ದಿನಕ್ಕೆ ಧೂಳು ಬಲ್ಬ್ ಮೇಲ್ಮೈಯಲ್ಲಿ ಕುಳಿತುಕೊಳ್ಳುತ್ತೆ. ಆರಂಭದಲ್ಲಿ ನಮಗೆ ಇದು ಗೊತ್ತಾಗೋದಿಲ್ಲ. ತಿಂಗಳುಗಳು ಕಳೆದಂತೆ ಆ ಧೂಳು ಹೆಚ್ಚಾಗೋದ್ರಿಂದ ಬಲ್ಬ್ ನಿಂದ ಬರ್ತಿದ್ದ ಲೈಟ್‌ ಕಡಿಮೆಯಾಗುತ್ತೆ.

25
ಬಲ್ಬ್‌ ಆಯಸ್ಸು

ಹಿಂದಿನ ಕಾಲದಲ್ಲಿ ಬಳಸ್ತಿದ್ದ ಬಲ್ಬ್ಗಳು ಹೆಚ್ಚು ಕಾಲ ಬಾಳಿಕೆ ಬರ್ತಿರಲಿಲ್ಲ. ಸುಮಾರು ಸಾವಿರ ಗಂಟೆಗಳ ನಂತರ ಅದು ಹಾಳಾಗ್ತಿತ್ತು. ಹಾಗಾಗಿ ಬಲ್ಬ್ ಕ್ಲೀನ್‌ ಮಾಡುವ ಸ್ಥಿತಿ ಇರಲಿಲ್ಲ. ಆದ್ರೆ ಈಗ ಪರಿಸ್ಥಿತಿ ಬದಲಾಗಿದೆ. ಎಲ್ಇಡಿ ಮತ್ತು ಸಿಎಫ್ಎಲ್ ಬಲ್ಬ್ಗಳು ಹಲವು ವರ್ಷಗಳ ಕಾಲ ಕೆಲಸ ಮಾಡುತ್ವೆ. ಕೆಲವೊಂದು ಎಲ್ಇಡಿ ಬಲ್ಬ್ಗಳ ಆಯುಷ್ಯ ಸುಮಾರು ಇಪ್ಪತ್ತೈದು ಸಾವಿರ ಗಂಟೆಗಳವರೆಗೆ ಇರುತ್ತೆ. ಅಷ್ಟು ವರ್ಷಗಳ ಕಾಲ ಒಂದೇ ಬಲ್ಬ್ ಬಳಸಿದ್ರೆ ಅದರ ಮೇಲೆ ಧೂಳು ಸೇರುವುದು ಸಹಜ.

35
ತಜ್ಞರು ಹೇಳೋದೇನು?

ತಜ್ಞರ ಪ್ರಕಾರ, ಧೂಳಿನಿಂದ ಮುಚ್ಚಿರುವ ಬಲ್ಬ್ ಸ್ವಚ್ಛವಾದ ಬಲ್ಬ್ಗೆ ಹೋಲಿಸಿದರೆ ಸುಮಾರು ಐವತ್ತು ಪ್ರತಿಶತದಷ್ಟು ಕಡಿಮೆ ಬೆಳಕನ್ನು ನೀಡುತ್ತದೆ. ಅಂದರೆ, ವಿದ್ಯುತ್ ಬಿಲ್ ಮಾತ್ರ ಅದೇ ಇರುತ್ತದೆ. ಆದರೆ ನಿಮ್ಮ ಮನೆ ಮಾತ್ರ ಕತ್ತಲೆಯಾಗಿ ಕಾಣಿಸುತ್ತೆ. ಹೀಗಾಗಿ ಬಲ್ಬ್ ಬದಲಾಯಿಸುವ ಮೊದಲು, ಅದನ್ನು ಒಮ್ಮೆ ಸ್ವಚ್ಛಗೊಳಿಸಿ ನೋಡಿ. ವ್ಯತ್ಯಾಸ ನಿಮಗೇ ಆಶ್ಚರ್ಯ ಉಂಟುಮಾಡಬಹುದು.

45
ಹೀಗೆ ಕ್ಲೀನ್‌ ಮಾಡಿ

ಬಲ್ಬ್ ಸ್ವಚ್ಛಗೊಳಿಸುವಾಗ ಸ್ವಲ್ಪ ಎಚ್ಚರಿಕೆ ಅಗತ್ಯ. ಮೊದಲಿಗೆ ಲೈಟ್ ಸ್ವಿಚ್ ಆಫ್ ಮಾಡಿ. ಬಲ್ಬ್ ಉರಿಯುತ್ತಿದೆಯಾದರೆ ಅದು ಸಂಪೂರ್ಣ ತಣ್ಣಗಾಗುವವರೆಗೆ ಕಾಯಿರಿ. ನಂತರ ಒಣ ಮೈಕ್ರೋಫೈಬರ್ ಬಟ್ಟೆ ಅಥವಾ ಮೃದುವಾದ ಡಸ್ಟರ್ ಬಳಸಿ ಅದರ ಮೇಲಿರುವ ಧೂಳನ್ನು ನಿಧಾನವಾಗಿ ಒರೆಸಿ. ಅಡುಗೆಮನೆಯ ಬಲ್ಬ್ ಮೇಲೆ ಎಣ್ಣೆಯ ಜಿಡ್ಡು ಅಂಟಿಕೊಂಡಿದ್ದರೆ, ಅದನ್ನು ಹೋಲ್ಡರ್ನಿಂದ ತೆಗೆದು ಬೆಳಕು ಹೊರಬರುವ ಭಾಗವನ್ನು ಮಾತ್ರ ಸ್ವಲ್ಪ ಒದ್ದೆಯಾದ ಬಟ್ಟೆಯಿಂದ ಒರೆಸಬಹುದು. ನಂತರ ಅದು ಸಂಪೂರ್ಣ ಒಣಗಿದ ಮೇಲೆ ಮಾತ್ರ ಮತ್ತೆ ಅಳವಡಿಸಬೇಕು.

55
ಎಷ್ಟು ಬಾರಿ ಬಲ್ಬ್‌ ಒರೆಸಬೇಕು

ಇದನ್ನು ವರ್ಷಕ್ಕೆ ಕನಿಷ್ಠ ಎರಡು ಬಾರಿ ಮಾಡಿದರೆ ಸಾಕು. ನಿಮ್ಮ ಮನೆಯ ಬೆಳಕು ಮತ್ತೆ ಮೊದಲಿನಂತೆ ಹೊಳೆಯುತ್ತದೆ. ಹೆಚ್ಚುವರಿ ವಿದ್ಯುತ್ ಬಳಸುವ ಅಗತ್ಯವಿಲ್ಲ. ಹೊಸ ಬಲ್ಬ್ ಖರೀದಿಸುವ ಖರ್ಚೂ ಉಳಿಯುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories