Health Benefits: ಹಸಿ ಮೆಣಸಿನಕಾಯಿ vs ಕೆಂಪು ಮೆಣಸಿನಕಾಯಿ: ಆರೋಗ್ಯಕ್ಕೆ ಯಾವುದು ಬೆಸ್ಟ್?

Published : Jun 11, 2026, 10:17 PM IST

ಪ್ರತಿನಿತ್ಯ ನಾವು ಆಹಾರದಲ್ಲಿ ಬಳಸುವಂತಹ ತರಕಾರಿಗಳಲ್ಲಿ ಮೆಣಸಿಕಾಯಿಯೂ (Chilli) ಒಂದಾಗಿದೆ. ಈ ಮೆಣಸಿನಕಾಯಿ ಅಗತ್ಯ ಖನಿಜಗಳು ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿದ್ದು, ನಮ್ಮ ದೈನಂದಿನ ಆಹಾರದಲ್ಲಿ ಇರಲೇಬೇಕು. ಆದರೆ, ಹಸಿರು ಅಥವಾ ಕೆಂಪು ಮೆಣಸಿನಕಾಯಿ ಯಾವುದು ಆರೋಗ್ಯಕ್ಕೆ ಉತ್ತಮ? ಇಲ್ಲಿದೆ ನೋಡಿ.

PREV
16
Green chilli or red chilli: Which is better option for your health
ಮೆಣಸಿನಕಾಯಿ ನಮ್ಮ ಊಟಕ್ಕೆ ಖಾರವನ್ನು ಹೆಚ್ಚಿಸುತ್ತದೆ. ಭಾರತೀಯ ಅಡುಗೆಯಲ್ಲಿ ಮಸಾಲೆ ಪದಾರ್ಥಗಳಿಗೆ ವಿಶೇಷ ಸ್ಥಾನವಿದೆ. ಇದು ಊಟದ ರುಚಿ ಹೆಚ್ಚಿಸುವುದಲ್ಲದೆ, ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
26
ಅಗತ್ಯ ಖನಿಜ ಮತ್ತು ವಿಟಮಿನ್‌ಗಳಿಂದ ತುಂಬಿರುವ ಮೆಣಸಿನಕಾಯಿ ನಮ್ಮ ಡಯಟ್‌ನಲ್ಲಿ ಇರಲೇಬೇಕು. ನಮ್ಮ ಮನೆಗಳಲ್ಲಿ ಸಾಮಾನ್ಯವಾಗಿ ಎರಡು ಬಗೆಯ ಮೆಣಸಿನಕಾಯಿ ಸಿಗುತ್ತವೆ - ಹಸಿ ಮೆಣಸಿನಕಾಯಿ ಮತ್ತು ಕೆಂಪು ಮೆಣಸಿನಕಾಯಿ (ಹೆಚ್ಚಾಗಿ ಪುಡಿ ರೂಪದಲ್ಲಿ).
36
ಇತ್ತೀಚೆಗೆ, ಯಾವ ಮೆಣಸಿನಕಾಯಿ ಹೆಚ್ಚು ಉತ್ತಮ ಎಂಬ ಚರ್ಚೆ ಶುರುವಾಗಿದೆ. ವಿಭಿನ್ನ ಅಭಿಪ್ರಾಯಗಳಿಂದಾಗಿ ಜನರಲ್ಲಿ ಗೊಂದಲ ಮೂಡಿದೆ. ಆದರೂ, ಅನೇಕರು ಕೆಂಪು ಮೆಣಸಿನ ಪುಡಿಯ ಬದಲು ಹಸಿ ಮೆಣಸಿನಕಾಯಿ ಬಳಸಲು ಆರಂಭಿಸಿದ್ದಾರೆ.
46

ಆಹಾರ ಜಗತ್ತಿನಲ್ಲಿ 'ಹಸಿರಾಗಿರುವುದು ಆರೋಗ್ಯಕ್ಕೆ ಒಳ್ಳೆಯದು' ಎಂಬ ಸಾಮಾನ್ಯ ನಂಬಿಕೆ ಇದೆ. ಹಸಿ ಮೆಣಸಿನಕಾಯಿಗಳು ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸುತ್ತವೆ ಎಂದು ಅಧ್ಯಯನಗಳು ಸಾಬೀತು ಮಾಡಿವೆ.

ಹಸಿ ಮೆಣಸಿನಕಾಯಿಯಲ್ಲಿ ನೀರಿನಂಶ ಹೆಚ್ಚಿರುತ್ತದೆ ಮತ್ತು ಕ್ಯಾಲೋರಿಗಳು ಶೂನ್ಯ. ಹಾಗಾಗಿ, ತಮ್ಮ ತೂಕದ ಬಗ್ಗೆ ಕಾಳಜಿ ವಹಿಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

56

ಕೆಂಪು ಮೆಣಸಿನಕಾಯಿಗಳು ಬೇರೇನೂ ಅಲ್ಲ, ಕಾಲಕ್ರಮೇಣ ಬಲಿತು, ಕೆಂಪಾಗಿ ಒಣಗಿದ ಹಸಿ ಮೆಣಸಿನಕಾಯಿಗಳೇ. ಒಣಗಿದಾಗ, ಅವು ಹೆಚ್ಚಿನ ನೀರಿನಂಶ ಮತ್ತು ಪ್ರಮುಖ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತವೆ.

ಕೆಂಪು ಮೆಣಸನ್ನು ಸಾಮಾನ್ಯವಾಗಿ ಪುಡಿ ರೂಪದಲ್ಲಿ ಬಳಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕಲಬೆರಕೆಯ ಅಪಾಯವಿರುತ್ತದೆ. ಅಂಗಡಿಯಿಂದ ತಂದ ಕೆಂಪು ಮೆಣಸಿನ ಪುಡಿಯಲ್ಲಿ ಕೃತಕ ಬಣ್ಣಗಳನ್ನು ಸೇರಿಸುವ ಸಾಧ್ಯತೆಯೂ ಇರುತ್ತದೆ.

66

ಕೆಂಪು ಮೆಣಸಿನಕಾಯಿಯನ್ನು ಅತಿಯಾಗಿ ಸೇವಿಸಿದರೆ, ಅದು ಆಂತರಿಕ ಉರಿಯೂತಕ್ಕೆ ಕಾರಣವಾಗಬಹುದು. ಇದು ಪೆಪ್ಟಿಕ್ ಅಲ್ಸರ್ ಅಥವಾ ಹೊಟ್ಟೆಯ ಕ್ಯಾನ್ಸರ್‌ಗೂ ಕಾರಣವಾಗುವ ಸಾಧ್ಯತೆ ಇದೆ.

ಹಸಿ ಮೆಣಸಿನಕಾಯಿ ಖಂಡಿತವಾಗಿಯೂ ಉತ್ತಮ ಮಸಾಲೆ ಪದಾರ್ಥ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ, ಕೆಂಪು ಮೆಣಸಿನಕಾಯಿಗೂ ತನ್ನದೇ ಆದ ಕೆಲವು ಆರೋಗ್ಯ ಪ್ರಯೋಜನಗಳಿವೆ. ಹಾಗಾಗಿ ಅದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories