ಹೆಚ್ಚು ಪ್ರಮಾಣದಲ್ಲಿ ಖರೀದಿಸಿದ ಡ್ರೈ ಫ್ರೂಟ್ಸ್‌ಗಳು ಬೇಗನೆ ಹಾಳಾಗುವುದು ಸಾಮಾನ್ಯ. ಗಾಳಿಯಾಡದ ಡಬ್ಬಗಳಲ್ಲಿಡುವುದು, ತಂಪಾದ ಜಾಗದಲ್ಲಿ ಸಂಗ್ರಹಿಸುವುದು, ಮತ್ತು ಗಾಜಿನ ಬಾಟಲಿಗಳನ್ನು ಬಳಸುವುದು ಮುಂತಾದ ಸರಳ ವಿಧಾನಗಳಿಂದ ಅವುಗಳನ್ನು ದೀರ್ಘಕಾಲ ತಾಜಾವಾಗಿಡಬಹುದು.
ಡ್ರೈ ಫ್ರೂಟ್ಸ್ ಅಂದ್ರೆ ಆರೋಗ್ಯದ ಗಣಿ ಅಂತ ನಮಗೆಲ್ಲಾ ಗೊತ್ತು. ಗೋಡಂಬಿ, ಬಾದಾಮಿ, ಪಿಸ್ತಾ, ಒಣದ್ರಾಕ್ಷಿ ಹೀಗೆ ಪ್ರತಿಯೊಂದು ಡ್ರೈ ಫ್ರೂಟ್ ಕೂಡ ನಮ್ಮ ಆರೋಗ್ಯಕ್ಕೆ ಒಂದಲ್ಲ ಒಂದು ರೀತಿ ಪ್ರಯೋಜನಕಾರಿ. ಇದೇ ಕಾರಣಕ್ಕೆ ಪ್ರತಿದಿನ ಸ್ವಲ್ಪವಾದರೂ ಡ್ರೈ ಫ್ರೂಟ್ಸ್ ತಿನ್ನಬೇಕು ಎಂದು ಹೇಳುತ್ತಾರೆ. ಪ್ರತಿದಿನ ತಿನ್ನಬೇಕಾದ ಕಾರಣ, ಹೆಚ್ಚಿನವರು ಒಟ್ಟಿಗೆ ಹೆಚ್ಚು ಪ್ರಮಾಣದಲ್ಲಿ ಡ್ರೈ ಫ್ರೂಟ್ಸ್ ಖರೀದಿಸಿ ತಂದಿಡುತ್ತಾರೆ.
26
ಮೆತ್ತಗಾಗುವುದು, ವಾಸನೆ
ಹೆಚ್ಚು ಡ್ರೈ ಫ್ರೂಟ್ಸ್ ತಂದಿಟ್ಟಾಗ ಎದುರಾಗುವ ದೊಡ್ಡ ಸಮಸ್ಯೆಯೇ ಅವು ಬೇಗ ಹಾಳಾಗುವುದು. ಮೆತ್ತಗಾಗುವುದು, ವಾಸನೆ ಬರುವುದು ಅಥವಾ ಶಿಲೀಂಧ್ರ ಹಿಡಿಯುವುದು ಸಾಮಾನ್ಯ. ನೀವು ಎಷ್ಟೇ ಪ್ರಯತ್ನಿಸಿದರೂ ಡ್ರೈ ಫ್ರೂಟ್ಸ್ ಹಾಳಾಗುತ್ತಿದ್ದರೆ, ಈ ನಾಲ್ಕು ವಿಧಾನಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ. ಖಂಡಿತವಾಗಿಯೂ ನಿಮ್ಮ ಡ್ರೈ ಫ್ರೂಟ್ಸ್‌ಗಳು ಹೆಚ್ಚು ದಿನಗಳ ಕಾಲ ತಾಜಾವಾಗಿರುತ್ತವೆ.
36
ವಿಧಾನ 1
ಡ್ರೈ ಫ್ರೂಟ್ಸ್ ಇಡಲು ಯಾವಾಗಲೂ ಗಾಳಿಯಾಡದ (ಏರ್‌ಟೈಟ್) ಡಬ್ಬವನ್ನೇ ಬಳಸಿ. ನೀವು ಸಾಮಾನ್ಯ ಡಬ್ಬ ಅಥವಾ ಬಾಟಲಿಗಳಲ್ಲಿಟ್ಟರೆ, ಗಾಳಿಯ ಸಂಪರ್ಕದಿಂದಾಗಿ ಅವು ಬೇಗನೆ ಮೆತ್ತಗಾಗಿ ಹಾಳಾಗುತ್ತವೆ. ಏರ್‌ಟೈಟ್ ಡಬ್ಬಿಗಳಲ್ಲಿ ಆಮ್ಲಜನಕದ ಸಂಪರ್ಕ ಕಡಿಮೆಯಾಗಿ, ಡ್ರೈ ಫ್ರೂಟ್ಸ್ ದೀರ್ಘಕಾಲ ತಾಜಾವಾಗಿರುತ್ತವೆ.
ಡ್ರೈ ಫ್ರೂಟ್ಸ್‌ಗಳನ್ನು ಯಾವಾಗಲೂ ತಂಪಾದ ಮತ್ತು ಒಣಗಿದ ಜಾಗದಲ್ಲಿಡಿ. ಈಗಾಗಲೇ ಒಣಗಿರುವ ಪದಾರ್ಥಗಳಾದ್ದರಿಂದ ಬಿಸಿ ಜಾಗದಲ್ಲಿಟ್ಟರೆ ಬೂಸ್ಟ್ ಬರುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ಅದು ತಪ್ಪು. ಅಡುಗೆಮನೆಯ ಶೆಲ್ಫ್‌ಗಳಲ್ಲಿ ಸೂರ್ಯನ ಬಿಸಿಲು ಬೀಳದ, ತಂಪಾಗಿರುವ ಜಾಗವನ್ನು ಆಯ್ಕೆ ಮಾಡಿಕೊಳ್ಳಿ.
56
ವಿಧಾನ 3
ಡ್ರೈ ಫ್ರೂಟ್ಸ್ ಹಾಳಾಗುವ ಲಕ್ಷಣಗಳು ಕಾಣಿಸಿದ ತಕ್ಷಣ, ಅವನ್ನು ಸ್ವಲ್ಪ ಹುರಿದು (ಟೋಸ್ಟ್) ಮತ್ತೆ ಸಂಗ್ರಹಿಸಿಡಬಹುದು. ನಿಮ್ಮ ಮನೆಯಲ್ಲಿ ಓವನ್ ಇದ್ದರೆ, ನಾಲ್ಕರಿಂದ ಐದು ನಿಮಿಷಗಳ ಕಾಲ ಟೋಸ್ಟ್ ಮಾಡಿ. ಓವನ್ ಇಲ್ಲದಿದ್ದರೆ, ಒಂದು ಬಾಣಲೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬಹುದು. ಹೀಗೆ ಮಾಡುವುದರಿಂದ ಅವು ಮತ್ತೆ ಗರಿಗರಿಯಾಗುತ್ತವೆ.
ಡ್ರೈ ಫ್ರೂಟ್ಸ್‌ಗಳನ್ನು ಪ್ಲಾಸ್ಟಿಕ್ ಡಬ್ಬಗಳಲ್ಲಿ ಇಡಲೇಬೇಡಿ. ಪ್ಲಾಸ್ಟಿಕ್‌ನಲ್ಲಿಟ್ಟರೆ ಅವು ಬೇಗ ಹಾಳಾಗುವ ಸಾಧ್ಯತೆ ಹೆಚ್ಚು. ಬದಲಿಗೆ, ದಪ್ಪಗಿರುವ ಗಾಜಿನ ಬಾಟಲಿಗಳನ್ನು ಬಳಸಿ. ಅದರಲ್ಲೂ, ಬೆಳಕು ಒಳಗೆ ಹೋಗದ ಬಣ್ಣದ ಅಥವಾ ಅಪಾರದರ್ಶಕ ಬಾಟಲಿಗಳಾದರೆ ಇನ್ನೂ ಉತ್ತಮ. ಇದರಿಂದ ಅವುಗಳ ತಾಜಾತನ ಹೆಚ್ಚು ದಿನ ಉಳಿಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.