ಮಿಕ್ಸಿಯಲ್ಲಿ ಮಜ್ಜಿಗೆ ಕಡೆಯುವಾಗ ಬೆಣ್ಣೆ ಅಂಟಿಕೊಳ್ಳತ್ತಾ? ಹೀಗೆ ಮಾಡಿ ಎರಡೇ ನಿಮಿಷಗಳಲ್ಲಿ ಮ್ಯಾಜಿಕ್​ ನೋಡಿ

Published : Sep 16, 2026, 08:12 PM IST

ಮಜ್ಜಿಗೆಯು ದೇಹಕ್ಕೆ ತಂಪು ನೀಡುವುದರ ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆದರೆ ಮಿಕ್ಸಿಯಲ್ಲಿ ಮಜ್ಜಿಗೆ ಮಾಡುವಾಗ ಬೆಣ್ಣೆ ಬೇರ್ಪಡಿಸುವುದು ಕಷ್ಟವಾಗುತ್ತದೆ. ಐಸ್ ತುಂಡು ಮತ್ತು ತಂಪು ನೀರು ಬಳಸುವ ಸರಳ ಟ್ರಿಕ್‌ನಿಂದ ಬೆಣ್ಣೆಯನ್ನು ಸುಲಭವಾಗಿ ಬೇರ್ಪಡಿಸಬಹುದು.

PREV
16
ಮಜ್ಜಿಗೆಗೆ ವಿಶೇಷ ಪ್ರಾತಿನಿಧ್ಯ

ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ ಮಜ್ಜಿಗೆಗೆ ವಿಶೇಷ ಪ್ರಾತಿನಿಧ್ಯವಿದೆ. ಹಾಲು ಕುಡಿಯಬಾರದು, ಮೊಸರು ತಿನ್ನಬಾರದು ಎಂದು ಕೆಲವು ಸಮಸ್ಯೆಗಳಿಗೆ ವೈದ್ಯರು ಹೇಳುವುದು ಇದೆ. ಆದರೆ ಮಜ್ಜಿಗೆ ವಿಷ್ಯ ಹಾಗಲ್ಲ. ಸಾಮಾನ್ಯವಾಗಿ ಹಾಲಿನ ಪದಾರ್ಥ ವ್ಯರ್ಜ್ಯ ಇರುವಾಗಲೂ ಮಜ್ಜಿಗೆಯನ್ನು ಮಾತ್ರ ಕುಡಿಯಲು ಓಕೆ ಎನ್ನುವುದು ಉಂಟು. ಇದು ಮಜ್ಜಿಗೆಯ ಪವರ್​.

26
ಹಲವು ಸಮಸ್ಯೆಗಳಿಗೆ

ಅಷ್ಟಕ್ಕೂ ಮಜ್ಜಿಗೆ ಹಲವು ಸಮಸ್ಯೆಗಳಿಗೆ ರಾಮಬಾಣ ಕೂಡ. ದೇಹಕ್ಕೆ ತಂಪನ್ನು ನೀಡುತ್ತದೆ ಮತ್ತು ನಿರ್ಜಲೀಕರಣವನ್ನು ತಡೆಯುತ್ತದೆ.ಇದರಲ್ಲಿ ಕ್ಯಾಲೊರಿ ಮತ್ತು ಕೊಬ್ಬಿನಾಂಶ ಕಡಿಮೆ ಇರುತ್ತದೆ.ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ ಜೊತೆಗೆ ಮಜ್ಜಿಗೆಯೊಟ್ಟಿಗೆ ಶುಂಠಿ, ಜೀರಿಗೆ ಮಿಕ್ಸ್​ ಮಾಡಿ ಕುಡಿಯುವುದರಿಂದಲೂ ಹಲವಾರು ಸಮಸ್ಯೆಗಳನ್ನು ಹೋಗಲಾಡಿಸಬಹುದು.

36
ಮನೆಯಲ್ಲಿ ಮಾಡುವುದು ಉಂಟು

ಇದೇ ಕಾರಣಕ್ಕೆ ಹಲವರು ಮಜ್ಜಿಯನ್ನು ಮನೆಯಲ್ಲಿ ಮಾಡುವುದು ಉಂಟು. ಆದರೆ, ನಗರ ಪ್ರದೇಶಗಳಲ್ಲಿ ಪ್ಯಾಕೆಟ್​ ಹಾಲು ತೆಗೆದುಕೊಳ್ಳುವ ಕಾರಣ, ಮಜ್ಜಿಗೆಯಿಂದ ಬೆಣ್ಣೆ ತೆಗೆಯುವುದು ತುಸು ಕಷ್ಟವೇ.

46
ಮಿಕ್ಸಿಯಲ್ಲಿ ಮಜ್ಜಿಗೆ

ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಮಿಕ್ಸಿಯಲ್ಲಿ ಮಜ್ಜಿಗೆ ಮಾಡಲು ಮೊಸರನ್ನು ಹಾಕುತ್ತಾರೆ. ಆದರೆ, ಮೊಸರು, ಮಜ್ಜಿಗೆ ಜೊತೆಗೆ ಬೆಣ್ಣೆ ಕೂಡ ಮಿಕ್ಸ್​ ಆಗಿಬಿಡುತ್ತದೆ. ಇದು ಮಿಕ್ಸಿಗೆ ಅಂಟಿಕೊಳ್ಳುತ್ತದೆ. ಕಡಿದ ಮಜ್ಜಿಗೆಯನ್ನೇ ಕುಡಿಯಬೇಕು ಎಂದುಕೊಂಡರೂ ಅದರ ಜೊತೆ ಬೆಣ್ಣೆ ಅಂಟಿಕೊಂಡು ಅದು ಕುಡಿಯಲೂ ಕಷ್ಟವಾಗುವ ಸ್ಥಿತಿ ತಲುಪುತ್ತದೆ.

56
ಬೆಣ್ಣೆ ಮತ್ತು ಮಜ್ಜಿಗೆ ಬೇರ್ಪಡಬೇಕಾ

ಹಾಗಿದ್ದರೆ ಮಿಕ್ಸಿಯಲ್ಲಿ ಮೊಸರು ಹಾಕಿ ಮಜ್ಜಿಗೆ ಕಡಿಯುವಾಗ ಬೆಣ್ಣೆ ಮತ್ತು ಮಜ್ಜಿಗೆ ಬೇರ್ಪಡಬೇಕಾ? ಇದಕ್ಕಾಗಿ ಸಿಂಪಲ್​ ಟ್ರಿಕ್​ ಇದೆ. ಹೀಗೆ ಮಾಡಿದ್ರೆ ಎರಡೇ ನಿಮಿಷಗಳಲ್ಲಿ ನಿಮ್ಮ ಸಮಸ್ಯೆ ಸಾಲ್ವ್​ ಆಗುತ್ತದೆ.

66
ನೀವು ಮಾಡಬೇಕಿರುವುದು ಇಷ್ಟೇ

ಅದಕ್ಕೆ ನೀವು ಮಾಡಬೇಕಿರುವುದು ಇಷ್ಟೇ. ನೀವು ಮೊಸರನ್ನು ಹಾಕಿದಾಗ ಅದರ ಜೊತೆ ಎರಡು ಬರ್ಫ್​ ತುಂಡು ಮತ್ತು ಸ್ವಲ್ಪ ತಂಪು ನೀರನ್ನು ಹಾಕಿ. ಹೀಗೆ ಮಾಡಿದ್ರೆ ನಿಮಿಷಾರ್ಧದಲ್ಲಿ ಮಜ್ಜಿಗೆ ಮತ್ತು ಬೆಣ್ಣೆ ಬೇರೆಯಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories