ಟೀ – ಕಾಫಿಗೆ ಮಾತ್ರವಲ್ಲ ಜಿರಳೆ ಓಡಿಸುತ್ತೆ ಹಾಲು ! ತಿಂಗಳಿಗೆರಡು ಬಾರಿ ಸುಲಭ ಮನೆ ಮದ್ದು ಟ್ರೈ ಮಾಡಿ

Published : Sep 24, 2026, 08:23 PM IST

ಕಿಚನ್ ಮತ್ತು ಬಾತ್ರೂಮ್ನಲ್ಲಿ ಓಡಾಡುವ ಜಿರಳೆಗಳು ಅಸಹ್ಯ ಮಾತ್ರವಲ್ಲ, ಆಹಾರಗಳನ್ನು ಕಲುಷಿತಗೊಳಿಸುವ ಮೂಲಕ ಆರೋಗ್ಯದ ಸಮಸ್ಯೆಗಳಿಗೂ ಕಾರಣವಾಗುತ್ವೆ. ಮಾರುಕಟ್ಟೆಯಲ್ಲಿ ಸಿಗುವ ಸ್ಪ್ರೇ ಬಳಸಿದರೂ ಕೆಲವೊಮ್ಮೆ ಜಿರಳೆಗಳ ಕಾಟ ಕಡಿಮೆಯಾಗೋದಿಲ್ಲ. ಇಂಥ ಸಂದರ್ಭದಲ್ಲಿ ನೀವು ಹಾಲಿನ ಉಪಾಯ ಟ್ರೈ ಮಾಡ್ಬಹುದು.

PREV
17
ಜಿರಳೆ ಕಾಟ

ಜಿರಳೆ ನೋಡಿದ್ರೆ ಮೈ ಜುಮ್‌ ಎನ್ನುತ್ತೆ. ಒಂದೇ ಒಂದು ಜಿರಳೆ ಮನೆಗೆ ಬಂದ್ರೂ ಸಾಕು, ಒಂದು ಹತ್ತಾಗಿ, ಹತ್ತು ನೋರಾಗಲು ಹೆಚ್ಚು ದಿನ ಬೇಡ. ಈ ಜಿರಳೆಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ವೆ. ಶೆಫ್ ರೂಪಮ್ ಸೆಹತ್ಯಾ ಜಿರಳೆ ಓಡಿಸಲು ಉಪಾಯ ಹಂಚಿಕೊಂಡಿದ್ದಾರೆ.

27
ಜಿರಳೆ ಮದ್ದಿಗೆ ಬೇಕಾಗುವ ಪದಾರ್ಥ

ಶೆಫ್‌ ರೂಪಮ್‌ ಸೆಹತ್ಯಾ ಪ್ರಕಾರ ಹಾಲು, ಗೋಧಿ ಹಿಟ್ಟು, ಸಕ್ಕರೆ ಮತ್ತು ಬೋರಿಕ್ ಆಸಿಡ್ ಬಳಸಿ ನೀವು ಜಿರಳೆ ಓಡಿಸಬಹುದು. ಬೋರಿಕ್ ಆಸಿಡ್ ಇರುವುದರಿಂದ ಇದನ್ನು ಬಳಸುವಾಗ ಸುರಕ್ಷತೆ ಮುಖ್ಯ. ಬೋರಿಕ್ ಆಸಿಡ್ ಪೌಡರ್ – 100 ಗ್ರಾಂ, ಗೋಧಿ ಹಿಟ್ಟು – 2ರಿಂದ 3 ಟೇಬಲ್ ಸ್ಪೂನ್, ಪುಡಿ ಸಕ್ಕರೆ ಅಥವಾ ಖಾಂಡ್ – 1ರಿಂದ 2 ಟೇಬಲ್ ಸ್ಪೂನ್, ಹಾಲು – ಅಗತ್ಯಕ್ಕೆ ತಕ್ಕಷ್ಟು ಬೇಕಾಗುತ್ತದೆ.

37
ಈ ಮಿಶ್ರಣ ಹೇಗೆ ಕೆಲಸ ಮಾಡುತ್ತದೆ?

ಈ ವಿಧಾನದಲ್ಲಿ ಸಕ್ಕರೆ ಮತ್ತು ಹಾಲಿನ ವಾಸನೆ ಜಿರಳೆಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಗೋಧಿ ಹಿಟ್ಟು ಮಿಶ್ರಣಕ್ಕೆ ಗಟ್ಟಿತನ ನೀಡುತ್ತದೆ. ಬೋರಿಕ್ ಆಸಿಡ್ ಜಿರಳೆಗಳಿಗೆ ವಿಷಕಾರಿ ಪರಿಣಾಮ ಬೀರುವ ವಸ್ತುವಾಗಿ ಕಾರ್ಯನಿರ್ವಹಿಸುತ್ತದೆ.

47
ಮಿಶ್ರಣ ತಯಾರಿಸುವ ವಿಧಾನ

ಮೊದಲು ಒಂದು ಸ್ವಚ್ಛವಾದ ಪಾತ್ರೆಯಲ್ಲಿ ಬೋರಿಕ್ ಆಸಿಡ್, ಗೋಧಿ ಹಿಟ್ಟು ಮತ್ತು ಪುಡಿ ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪಸ್ವಲ್ಪವಾಗಿ ಹಾಲು ಸೇರಿಸುತ್ತಾ ಕಲಸಿ. ತುಂಬಾ ತೆಳುವಾಗಿಯೂ ಅಥವಾ ಗಟ್ಟಿಯಾಗಿಯೂ ಇರದಂತೆ ದಪ್ಪವಾದ ಪೇಸ್ಟ್ನಂತೆ ತಯಾರಿಸಿಕೊಳ್ಳಬೇಕು. ಈ ಮಿಶ್ರಣವನ್ನು ಸ್ವಲ್ಪ ಸಮಯ ಮುಚ್ಚಿಟ್ಟು ನಂತರ ಸಣ್ಣ ಉಂಡೆಗಳನ್ನಾಗಿ ಮಾಡಿ.

57
ಜಿರಳೆ ಕಾಣಿಸುವ ಜಾಗದಲ್ಲಿ ಇಡಿ

ಜಿರಳೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಜಾಗಗಳಲ್ಲಿ ಈ ಉಂಡೆಗಳನ್ನು ಇಡಬೇಕು. ಕಿಚನ್ ಸಿಂಕ್ನ ಕೆಳಭಾಗ, ಚರಂಡಿಯ ಸುತ್ತಮುತ್ತ, ಕಿಚನ್ ಕ್ಯಾಬಿನೆಟ್ನ ಮೂಲೆಗಳು, ಗ್ಯಾಸ್ ಸ್ಟೌವ್ನ ಸುತ್ತಮುತ್ತ, ಫ್ರಿಜ್ ಮತ್ತು ಮೈಕ್ರೋವೇವ್ ಹಿಂಭಾಗ, ಡಸ್ಟ್ಬಿನ್ ಸುತ್ತಮುತ್ತ, ಬಾತ್ರೂಮ್ನ ಮೂಲೆಗಳಲ್ಲಿ ನೀವು ಇದನ್ನು ಇಡಬೇಕು.

67
ತಕ್ಷಣ ಫಲಿತಾಂಶ ಸಿಗುವುದಿಲ್ಲ

ಈ ಮಿಶ್ರಣವನ್ನು ಬಳಸಿದ ತಕ್ಷಣವೇ ಜಿರಳೆಗಳು ಕಾಣೆಯಾಗುತ್ತವೆ ಎನ್ನಲು ಸಾಧ್ಯವಿಲ್ಲ. 24 ರಿಂದ 72 ಗಂಟೆಗಳಲ್ಲಿ ಪರಿಣಾಮ ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಜಿರಳೆಗಳ ಸಮಸ್ಯೆ ಮುಂದುವರಿದರೆ, ಅವುಗಳ ಗೂಡು, ಆಹಾರದ ಮೂಲ ಮತ್ತು ನೀರಿನ ಮೂಲಗಳನ್ನು ಪತ್ತೆಹಚ್ಚಿ ಸ್ವಚ್ಛಗೊಳಿಸುವುದು ಮುಖ್ಯ. ಅಗತ್ಯವಿದ್ದರೆ ವೃತ್ತಿಪರ ಪೆಸ್ಟ್ ಕಂಟ್ರೋಲ್ ಸಹಾಯ ಪಡೆಯಬಹುದು.

77
ಬೋರಿಕ್ ಆಸಿಡ್ ಬಳಸುವಾಗ ಎಚ್ಚರಿಕೆ ಅಗತ್ಯ

ಬೋರಿಕ್ ಆಸಿಡ್ ಇರುವುದರಿಂದ ಈ ಮಿಶ್ರಣವನ್ನು ಮಕ್ಕಳಿಗೂ ಸಾಕುಪ್ರಾಣಿಗಳಿಗೂ ಸಿಗದ ಜಾಗದಲ್ಲಿ ಮಾತ್ರ ಇಡಬೇಕು. ತಯಾರಿಸುವಾಗ ಕೈಗವಸು ಬಳಸುವುದು ಉತ್ತಮ. ಆಹಾರ, ಅಡುಗೆ ಪಾತ್ರೆಗಳು ಅಥವಾ ಕುಡಿಯುವ ನೀರಿನ ಸಂಪರ್ಕಕ್ಕೆ ಈ ಮಿಶ್ರಣ ಬರದಂತೆ ಎಚ್ಚರಿಕೆ ವಹಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories