ಆಲೂಗಡ್ಡೆ ಬೆಣ್ಣೆಯಂತೆ ಮೃದುವಾಗ್ಬೇಕಾ?, ಒಂಚೂರು ನೀರು ಹಾಕ್ದೆ ಕುಕ್ಕರ್‌ನಲ್ಲಿ ಬೇಯಿಸಿ.. ಗ್ಯಾಸ್‌ ಉಳಿಸಿ

Published : Jan 16, 2026, 12:26 PM IST

Cook potatoes without water: ನೀವು ಅವುಗಳನ್ನು ಹೋಟೆಲ್ ಶೈಲಿಯಲ್ಲಿ ಪರ್‌ಫೆಕ್ಟ್ ಆಗಿ ಬೇಯಿಸಲು ಬಯಸಿದರೆ ನೀರಿಲ್ಲದೆ ಮಾಡುವ ಈ ಸಣ್ಣ ಟಿಪ್ಸ್ ಫಾಲೋ ಮಾಡಿ. ಕೇವಲ 15 ನಿಮಿಷಗಳಲ್ಲಿ ಅದ್ಭುತ ಫಲಿತಾಂಶಗಳನ್ನು ಪಡೆಯಬಹುದು.  

PREV
18
ಅದ್ಭುತ ಫಲಿತಾಂಶ ಪಡೆಯಿರಿ

ನಿಮ್ಮ ಅಡುಗೆಮನೆಯ ಕೆಲಸ ಸುಲಭಗೊಳಿಸಲು ಟಿಪ್ಸ್ ಹುಡುಕುತ್ತಿದ್ದೀರಾ?. ಹಾಗಾದರೆ ಈ ವೈರಲ್ 'ಆಲೂಗಡ್ಡೆ ಹ್ಯಾಕ್' ನಿಮಗಾಗಿ. ಕೆಲವೊಮ್ಮೆ ಆಲೂಗಡ್ಡೆಯನ್ನು ಕುಕ್ಕರ್‌ನಲ್ಲಿ ನೀರಿನಿಂದ ಬೇಯಿಸಿದಾಗ ತುಂಬಾ ಮೃದುವಾಗುತ್ತದೆ. ಆದ್ದರಿಂದ ನೀವು ಅವುಗಳನ್ನು ಹೋಟೆಲ್ ಶೈಲಿಯಲ್ಲಿ ಪರ್‌ಫೆಕ್ಟ್ ಆಗಿ ಬೇಯಿಸಲು ಬಯಸಿದರೆ ನೀರಿಲ್ಲದೆ ಮಾಡುವ ಈ ಸಣ್ಣ ಟಿಪ್ಸ್ ಫಾಲೋ ಮಾಡಿ. ಕೇವಲ 15 ನಿಮಿಷಗಳಲ್ಲಿ ಅದ್ಭುತ ಫಲಿತಾಂಶಗಳನ್ನು ಪಡೆಯಬಹುದು. 

28
ಎಷ್ಟು ಸಮಯ ಬೇಕು?

ಆಲೂಗಡ್ಡೆ ಬೇಯಿಸಲು ಎಷ್ಟು ಸಮಯ ಬೇಕು?, ಎಷ್ಟು ಗ್ಯಾಸ್ ಬೇಕು ಎಂಬುದು ನಿಮಗೆಲ್ಲರಿಗೂ ಗೊತ್ತಿದೆ. ಆದರೆ ಒಂದು ಹನಿ ನೀರು ಕೂಡ ಹಾಕದೆ ಆಲೂಗಡ್ಡೆಯನ್ನು ಬೆಣ್ಣೆಯಂತೆ ಮೃದುವಾಗುವವರೆಗೆ ಕುಕ್ಕರ್‌ನಲ್ಲಿ ಬೇಯಿಸಬಹುದು. ನೀರಿನ ಅಗತ್ಯವಿಲ್ಲ.

38
ಗ್ಯಾಸ್ ಉಳಿಸುವ ಸರಳ ಟ್ರಿಕ್

ಇದು ಎಷ್ಟೇ ವಿಚಿತ್ರವೆನಿಸಿದರೂ ಈ ಸ್ಮಾರ್ಟ್ ಕಿಚನ್ ಟ್ರಿಕ್ ಅನುಸರಿಸುವುದರಿಂದ ಆಲೂಗಡ್ಡೆ ಸಿಡಿಯುವುದನ್ನ ತಡೆಯುತ್ತದೆ ಮತ್ತು ಅವುಗಳ ಸಿಪ್ಪೆಯೂ ಬಹಳ ಸುಲಭವಾಗಿ ಹೊರಬರುತ್ತದೆ. ಹಾಗಾದರೆ ಗೃಹಿಣಿಯರ ಸಮಯ ಮತ್ತು ಗ್ಯಾಸ್ ಉಳಿಸುವ ಈ ಸರಳ ಟ್ರಿಕ್ ನೋಡೋಣ.

48
ಈ ಕೆಳಗಿನ ವಿಧಾನ ಟ್ರೈ ಮಾಡಿ

ನೀರನ್ನು ಬಳಸದೆ ಆಲೂಗಡ್ಡೆಯನ್ನು ಸಂಪೂರ್ಣವಾಗಿ ಬೇಯಿಸಲು ಈ ಕೆಳಗಿನ ವಿಧಾನವನ್ನ ಪ್ರಯತ್ನಿಸಿ.

ಮೊದಲು ಪ್ರೆಶರ್ ಕುಕ್ಕರ್‌ನ ಕೆಳಭಾಗಕ್ಕೆ ಸ್ವಲ್ಪ ತುಪ್ಪ ಅಥವಾ ಎಣ್ಣೆಯನ್ನು ಸವರಿ. ಇದು ಆಲೂಗಡ್ಡೆ ಕುಕ್ಕರ್‌ಗೆ ಅಂಟಿಕೊಳ್ಳದಂತೆ ಸಹಾಯ ಮಾಡುತ್ತದೆ ಮತ್ತು ಅದಕ್ಕೆ ಉತ್ತಮ ಪರಿಮಳವನ್ನು ನೀಡುತ್ತದೆ.

58
ಒಂದೇ ಪದರದಲ್ಲಿ ಜೋಡಿಸಿ

ಆಲೂಗಡ್ಡೆಯನ್ನು ತೊಳೆದು ಕುಕ್ಕರ್‌ನಲ್ಲಿ ಒಂದೇ ಪದರದಲ್ಲಿ ಜೋಡಿಸಿ, ಒಂದರ ಮೇಲೊಂದು ಜೋಡಿಸದಂತೆ ಎಚ್ಚರವಹಿಸಿ.

68
ಒದ್ದೆ ಬಟ್ಟೆಯ ತಂತ್ರ

ಸ್ವಚ್ಛವಾದ ಹತ್ತಿ ಬಟ್ಟೆಯನ್ನು ನೀರಿನಲ್ಲಿ ಅದ್ದಿ ಮತ್ತು ನೀರು ತೊಟ್ಟಿಕ್ಕದಂತೆ ಬಿಗಿಯಾಗಿ ಹಿಂಡಿ. ಈ ಒದ್ದೆ ಬಟ್ಟೆಯನ್ನು ಕುಕ್ಕರ್‌ನಲ್ಲಿರುವ ಆಲೂಗಡ್ಡೆಯ ಮೇಲೆ ಇರಿಸಿ. ಇದು ಕುಕ್ಕರ್ ಒಳಗೆ ಹಬೆಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

78
10 ರಿಂದ 15 ನಿಮಿಷ ಬೇಯಿಸಿ

ಕುಕ್ಕರ್ ಮುಚ್ಚಿ ಸ್ಟೌವ್ ಮೇಲೆ ಇಡಿ. ಮೊದಲು ಮಧ್ಯಮ ಉರಿಯಲ್ಲಿ ಇಡಿ. ಕುಕ್ಕರ್ ಬಿಸಿಯಾದ ನಂತರ ಉರಿಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ. 10 ರಿಂದ 15 ನಿಮಿಷ ಬೇಯಿಸಿ.

88
ಹಬೆಯೂ ಹೋಗುವವರೆಗೆ ಕುಕ್ಕರ್ ತೆರೆಯಬೇಡಿ

ಸ್ಟೌವ್ ಆಫ್ ಮಾಡಿದ ನಂತರ ಎಲ್ಲಾ ಹಬೆಯೂ ಹೋಗುವವರೆಗೆ ಕುಕ್ಕರ್ ಅನ್ನು ತೆರೆಯಬೇಡಿ. ಆಗ ಆಲೂಗಡ್ಡೆ ಸಂಪೂರ್ಣವಾಗಿ ಬೇಯುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories