ಕೆಲವರು ಕೊತ್ತಂಬರಿ ಸೊಪ್ಪನ್ನು ಸ್ಟೋರ್ ಮಾಡಲಾಗದೆ ಕೊಳ್ಳುವುದನ್ನೇ ಬಿಟ್ಟುಬಿಡುತ್ತಾರೆ. ಕೊತ್ತಂಬರಿ ಸೊಪ್ಪು ತಿನ್ನುವುದನ್ನು ಬಿಟ್ಟರೆ ನಮಗೇ ನಷ್ಟ. ಕೊತ್ತಂಬರಿ ಸೊಪ್ಪನ್ನು ಪ್ರತಿದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದರಿಂದ ಲಿವರ್ ಚೆನ್ನಾಗಿ ಕೆಲಸ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುವ ಶಕ್ತಿ ಕೊತ್ತಂಬರಿ ಸೊಪ್ಪಿಗಿದೆ. ಡಯಾಬಿಟಿಸ್ ಇರುವವರು ಕೊತ್ತಂಬರಿ ಸೊಪ್ಪನ್ನು ಪ್ರತಿದಿನ ತಿಂದರೆ ಶುಗರ್ ಲೆವೆಲ್ಸ್ ಹೆಚ್ಚಾಗುವುದಿಲ್ಲ. ಹಾಗೆಯೇ ಗ್ಯಾಸ್ ಸಮಸ್ಯೆ, ಅಜೀರ್ಣ ಸಮಸ್ಯೆ, ಎದೆಯುರಿ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಕೊತ್ತಂಬರಿ ಸೊಪ್ಪು ಅದ್ಭುತ ಔಷಧಿಯಂತೆ ಕೆಲಸ ಮಾಡುತ್ತದೆ. ಮುಖ್ಯವಾಗಿ ಖಾರ ಹೆಚ್ಚಾಗಿ ತಿಂದರೆ ಕೊತ್ತಂಬರಿ ಸೊಪ್ಪನ್ನು ಪ್ರತಿದಿನ ಸೇವಿಸಿ. ಖಾರದಿಂದ ಬರುವ ಸಮಸ್ಯೆಗಳನ್ನು ಕೊತ್ತಂಬರಿ ಸೊಪ್ಪು ತಡೆಯುತ್ತದೆ.