Reduce spiciness in food ಅಡುಗೆಯಲ್ಲಿ ಖಾರ ಅಥವಾ ಉಪ್ಪು ಹೆಚ್ಚಾಯಿತೇ? ಟೊಮೆಟೋ, ತುಪ್ಪ, ಆಲೂಗಡ್ಡೆಯಂತಹ ಪದಾರ್ಥಗಳಿಂದ ಸರಿಪಡಿಸುವ ಸುಲಭ ಟಿಪ್ಸ್ ತಿಳಿಯಿರಿ. ನಿಮ್ಮ ಅಡುಗೆಯನ್ನು ಎಸೆಯದೆ ರುಚಿಕರವಾಗಿಸಿ!
ಕೆಲವೊಮ್ಮೆ ಇಷ್ಟಪಟ್ಟು, ಪ್ರೀತಿಯಿಂದ ಮಾಡಿದ ಅಡುಗೆಯಲ್ಲಿ ಕಣ್ತಪ್ಪಿನಿಂದ ಖಾರ ಹೆಚ್ಚಾಗಿರುತ್ತದೆ. ಉಪ್ಪು ಅಥವಾ ಖಾರ ಕಡಿಮೆಯಾದ್ರೆ ಸೇರಿಸಿಕೊಂಡು ಅಡುಗೆ ಸಮತೋಲನ ಮಾಡಬಹುದು. ಒಂದ್ವೇಳೆ ಈ ಎರಡು ಅಂಶಗಳು ಹೆಚ್ಚಾದ್ರೆ ಅಡುಗೆಯೆಲ್ಲಾ ಹಾಳದಂತೆ. ಇಂತಹ ಸಂದರ್ಭದಲ್ಲಿ ಚಿಂತೆ ಮಾಡುತ್ತಾ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳದೇ ಈ ಸಲಹೆಗಳನ್ನು ಪಾಲನೆ ಮಾಡಿ.
27
ಟೊಮೆಟೋ
ಮಾಡಿರುವ ಅಡುಗೆಯಲ್ಲಿ ಅಂದ್ರೆ ಪಲ್ಯ ಅಥವಾ ಸಾಂಬಾರ್‌ನಲ್ಲಿ ಖಾರ ಹೆಚ್ಚಾದ್ರೆ ಟೊಮೆಟೋ ಬಳಸಬಹುದು. ಟೊಮೆಟೋ ಸಣ್ಣದಾಗಿ ಕತ್ತರಿಸಿಕೊಂಡು ಎಣ್ಣೆಯಲ್ಲಿ ಎರಡರಿಂದ ಮೂರು ನಿಮಿಷ ಫ್ರೈ ಮಾಡಿಕೊಳ್ಳಿ. ಈ ಸಿದ್ಧವಾದ ಟೊಮೆಟೋವನ್ನು ಖಾರ ಹೆಚ್ಚಾಗಿರುವ ಪಲ್ಯ/ಸಾಂಬಾರ್‌ಗೆ ಸೇರಿಸಿಕೊಳ್ಳಿ. ಇದರಿಂದ ಖಾರ ಕಡಿಮೆಯಾಗುತ್ತದೆ. ಟೊಮೆಟೋವನ್ನು ಪೇಸ್ಟ್ ಮಾಡಿಕೊಂಡು ಸೇರಿಸಿಕೊಳ್ಳಲೂಬಹುದು.
37
ಹುಣಸೆಹಣ್ಣು ಮತ್ತು ಬೆಲ್ಲ
ಅಡುಗೆಯಲ್ಲಿ ಖಾರ ಹೆಚ್ಚಾದಾಗ ಅದಕ್ಕೆ ಹುಣಸೆಹಣ್ಣಿನ ರಸ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಹುಣಸೆಹಣ್ಣಿನಲ್ಲಿರುವ ಹುಳಿ ಮತ್ತು ಸಿಹಿ ಅಂಶ ಖಾರ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹುಣಸೆ ಸೇರಿಸಿದ್ರೂ ಖಾರ ಕಡಿಮೆಯಾಗದಿದ್ರೆ ಬೆಲ್ಲ ಹಾಕಿಕೊಳ್ಳಿ. ಇದರಿಂದ ಅಡುಗೆ ರುಚಿ ಹೆಚ್ಚಾಗೋದರ ಜೊತೆ ಖಾರ ಕಡಿಮೆಯಾಗುತ್ತದೆ.
ಖಾರ ಹೆಚ್ಚಾಗಿದ್ರೆ ದೇಸಿ ತುಪ್ಪ ಅಥವಾ ಎಣ್ಣೆ ಬಳಕೆ ಮಾಡಿಕೊಳ್ಳಬೇಕು. ತುಪ್ಪ ಅಥವಾ ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಿಕೊಂಡು ಖಾರ ಹೆಚ್ಚಾಗಿರುವ ಅಡುಗೆ ಸೇರಿಸಿಕೊಳ್ಳಬಹುದು. ಇದರಿಂದ ಖಾರ ಕಡಿಮೆಯಾಗುತ್ತದೆ. ನಂತರ ಖಾರ ಸೇರ್ಪಡೆಯಾಗಿರುವ ಎಣ್ಣೆಯನ್ನು ಅಡುಗೆಯಿಂದ ಬೇರ್ಪಡಿಸಿಕೊಳ್ಳಬಹುದು. ಇದರಿಂದ ಎಣ್ಣೆಯಂಶವನ್ನು ಬೇರೆಯಾದಂತೆ ಆಗುತ್ತದೆ.
57
ಜೇನುತಪ್ಪ ಅಥವಾ ಕ್ರೀಮ್
ಖಾರ ಅಧಿಕವಾಗಿರುವ ಅಡುಗೆಗೆ ಎರಡು ಟೀ ಸ್ಪೂನ್‌ನಷ್ಟು ಜೇನುತುಪ್ಪ ಸೇರಿಸೋದರಿಂದ ಅಡುಗೆಯ ರುಚಿ ಇಮ್ಮಡಿಯಾಗೋದರ ಜೊತೆ ಸ್ವೀಟ್‌ನೆಸ್ ಹೆಚ್ಚಾಗಿ ಸ್ಪೈಸ್ ಕಡಿಮೆಯಾಗುತ್ತದೆ. ಅದೇ ರೀತಿ ಕ್ರೀಮ್ ಸೇರಿಸಿ ಮಧ್ಯಮ ಉರಿಯಲ್ಲಿ ಎರಡರಿಂದ ಮೂರು ನಿಮಿಷ ಬೇಯಿಸಿಕೊಂಡ್ರೆ ಅಡುಗೆಯ ಖಾರ ಕಡಿಮೆಯಾಗುತ್ತದೆ.
67
ಹಿಟ್ಟು
ಇನ್ನು ಸಾಂಬರ್ ಅತ್ಯಧಿಕ ಖಾರವಾಗಿದ್ರೆ ಹಿಟ್ಟು ಬಳಸಿ. ಬಿಸಿನೀರಿನಲ್ಲಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಕಲಿಸಿಕೊಂಡು ಖಾರ ಹೆಚ್ಚಾಗಿರುವ ಸಾಂಬಾರ್‌ಗೆ ಸೇರಿಸಿಕೊಂಡು ಮಧ್ಯಮ ಉರಿಯಲ್ಲಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಇದಕ್ಕಾಗಿ ನೀವು ಕಡಲೆ ಅಥವಾ ಜೋಳದ ಹಿಟ್ಟನ್ನು ಬಳಸಿಕೊಳ್ಳಬಹುದು.
ಇನ್ನು ಅಡುಗೆಯಲ್ಲಿ ಉಪ್ಪು ಹೆಚ್ಚಾದ್ರೆ ಅಡುಗೆಯಲ್ಲಿ ಆಲೂಗಡ್ಡೆ ಸೇರಿಸಿಕೊಳ್ಳಬಹುದು. ಆಲೂಗಡ್ಡೆ ಅಡುಗೆಯಲ್ಲಿನ ಉಪ್ಪಿನಂಶ ಹೀರಿಕೊಳ್ಳುತ್ತದೆ. ನಂತರ ಆಲೂಗಡ್ಡೆಯನ್ನು ಆಹಾರದಿಂದ ಬೇರ್ಪಡಿಸಿಕೊಳ್ಳಬಹುದು. ಆಲೂಗಡ್ಡೆ ಇಲ್ಲದಿದ್ರೆ ಅಡುಗೆ ಪ್ರಮಾಣವನ್ನು ಹೆಚ್ಚಿಸಿಕೊಂಡರೂ ಆಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.