ಸೇಬು ಹಣ್ಣು ತಿನ್ನೋದೊಂದೇ ಅಲ್ಲ, ಬಲು ಅಪರೂಪದ ಅಡುಗೆ ಹೇಳಿಕೊಟ್ಟ 'ಬೆಳದಿಂಗಳ ಬಾಲೆ' Suman Nagarkar

Published : Feb 25, 2026, 04:26 PM IST

ಬೆಳದಿಂಗಳ ಬಾಲೆ ಸುಮನ್‌ ನಗರ್ಕರ್‌ ಅವರು ಸದ್ಯ ವಿದೇಶದಲ್ಲಿದ್ದಾರೆ. ಫಿಟ್‌ನೆಸ್‌ ಎಂದು ಸದಾ ಆಕ್ಟಿವ್‌ ಆಗಿರುವ ಅವರು ಸೇಬು ಹಣ್ಣಿನಿಂದ ಮಾಡುವ ಗೊಜ್ಜು ಹೇಳಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. ಹಾಗಾದರೆ ಹೇಗೆ ಮಾಡುವುದು ನೋಡಿ… 

PREV
14
ಮೊದಲು ಏನು ಮಾಡಬೇಕು?

ಬಾಣಲೆಯಲ್ಲಿ ಸ್ವಲ್ಪ ಉದ್ದಿನಬೇಳೆಯನ್ನು ಕೆಂಪಗೆ ಹುರಿದುಕೊಂಡು, ಮಿಕ್ಸರ್ ಜಾರ್ ಗೆ ಹಾಕಿಕೊಳ್ಳಿ. ಅದೇ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಚೂರು ಮೆಂತ್ಯ, ಒಂದು ಚಿಟಿಕೆ ಇಂಗು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಇದಕ್ಕೆ ಖಾರಕ್ಕೆ ತಕ್ಕಷ್ಟು ಒಣಮೆಣಸಿನ ಕಾಯಿ, ಒಂದು ಎಸಳೆ ಕರಿಬೇವಿನ ಸೊಪ್ಪು, ಎಳ್ಳು, ತೆಂಗಿನಕಾಯಿ ತುರಿ ಹಾಗೂ ಒಣಕೊಬ್ಬರಿ ಹಾಕಿಕೊಂಡು ಇಷ್ಟನ್ನೂ ಹುರಿದುಕೊಳ್ಳಿ. ಇದೆಲ್ಲವನ್ನು ಹುರಿದಿಟ್ಟುಕೊಂಡ ಉದ್ದಿನ ಬೇಳೆ ಜೊತೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

24
ಉಪ್ಪು, ಬೆಲ್ಲ ಹಾಕಿ

ರುಬ್ಬೋವಾಗ ಸ್ವಲ್ಪ ಹುಣಿಸಸಹಣ್ಣು ಹಾಕಿ ರುಬ್ಬಬೇಕು. ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿಕೊಂಡು, ಎಣ್ಣೆ ಕಾದ ನಂತರ ಸಾಸಿವೆ ಒಗ್ಗರಣೆ ಹಾಕಿ. ನಂತರ ಹೆಚ್ಚಿಕೊಂಡ ಆಪಲ್ ಹೋಳುಗಳನ್ನು ಹಾಕಿ. ಸ್ವಲ್ಪ ಅರಿಶಿನ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲವನ್ನು ಹಾಕಿ ಚೆನ್ನಾಗಿ ಕೈಯಾಡಿ.

34
ಸೇಬು ಬೇಯಬೇಕು

ಸೇಬು ಚೆನ್ನಾಗಿ ಬೆಂದ ಮೇಲೆ ರುಬ್ಬಿದ ಗೊಜ್ಜಿನ ಮಸಾಲೆ ಹಾಕಿ, ಸ್ವಲ್ಪ ಬೆಲ್ಲವನ್ನೂ ಹಾಕಿ ಚೆನ್ನಾಗಿ ಕುದಿಸಬೇಕು. 

44
ಹೇಗೆ ತಿನ್ನಬೇಕು?

ಈ ಗೊಜ್ಜು ಅಕ್ಕಿರೊಟ್ಟಿ, ದೋಸೆ, ಚಪಾತಿ ಇವೆಲ್ಲದರ ಜೊತೆಗೆ ಚೆನ್ನಾಗಿರತ್ತೆ. ಬಿಸಿ ಬಿಸಿ ಅನ್ನಕ್ಕೆ ಹಾಕಿಕೊಂಡು ಸ್ವಲ್ಪ ಕೊಬ್ಬರಿ ಎಣ್ಣೆಯ ಜೊತೆಗೆ ಕಲೆಸಿಕೊಂಡರಂತೂ ಸೂಪರ್

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories