ಬೇಸಿಗೆಯಲ್ಲಿ ದೋಸೆ, ಇಡ್ಲಿ ಹಿಟ್ಟು ಹುಳಿಯಾಗಿ ಹಾಳಾಗಿದ್ದರೆ ಸರಿಪಡಿಸಲು ಇಲ್ಲಿದೆ 5 ಸೂಪರ್ Kitchen Tips

Published : Mar 03, 2026, 01:08 PM IST

Summer food storage tips: ಬೆಳಗಿನ ಉಪಾಹಾರಕ್ಕೆ ಇಡ್ಲಿ ಅಥವಾ ದೋಸೆ ಮಾಡುವುದು ಪ್ರತಿಯೊಬ್ಬ ಗೃಹಿಣಿಯ ನೆಚ್ಚಿನ ಆಯ್ಕೆ. ಆದರೆ ಬೇಸಿಗೆಯ ತಾಪಕ್ಕೆ ಹಿಟ್ಟು ಅತಿಯಾಗಿ ಹುಳಿಯಾಗಿ ಹಾಳಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಇಂತಹ ಸಮಯದಲ್ಲಿ ಹಿಟ್ಟನ್ನು ಎಸೆಯುವ ಬದಲು, ಕೆಲವು ಸರಳ ಮನೆಮದ್ದನ್ನ ಬಳಸಿ.   

PREV
16
ಹಿಟ್ಟು ಹಾಳಾಗುವುದೇಕೆ?

ನಮ್ಮಲ್ಲಿ ಹೆಚ್ಚಿನವರು ಬೆಳಗಿನ ಉಪಾಹಾರಕ್ಕೆ ಇಡ್ಲಿ, ದೋಸೆಯಂತಹ ಪದಾರ್ಥಗಳನ್ನು ಇಷ್ಟಪಟ್ಟು ಮಾಡಿ ಸೇವಿಸುತ್ತಾರೆ. ಈ ತಿಂಡಿ ಮಾಡಬೇಕೆಂದರೆ ಹಿಟ್ಟನ್ನು ಸರಿಯಾಗಿ ಸಿದ್ಧಪಡಿಸುವುದರಿಂದ ಹಿಡಿದು ಇಡ್ಲಿ, ದೋಸೆ ತಯಾರಾಗುವವರೆಗೆ ಗೃಹಿಣಿಯರ ಮುಂದೆ ದೊಡ್ಡ ಕೆಲಸವೇ ಇರುತ್ತದೆ. ಇಡ್ಲಿ, ದೋಸೆ ಹಿಟ್ಟನ್ನು ತಯಾರಿಸುವಾಗ ಅದರಲ್ಲಿ ಬೇಳೆ ಮತ್ತು ಅಕ್ಕಿಯ ಪ್ರಮಾಣವು ಸರಿಯಾಗಿರಬೇಕು. ಇಲ್ಲದಿದ್ದರೆ ಕೆಲವೊಮ್ಮೆ ಈ ಹಿಟ್ಟು ಹಾಳಾಗಬಹುದು. 

ಅಷ್ಟೇ ಅಲ್ಲದೆ, ಹಿಟ್ಟನ್ನು ಹುದುಗಲು (Fermentation) ಇಟ್ಟಾಗ, ಶಾಖದ ಕಾರಣದಿಂದಾಗಿ ಹಿಟ್ಟು ಅಗತ್ಯಕ್ಕಿಂತ ಹೆಚ್ಚು ಹುಳಿಯಾಗಬಹುದು. ಇದರಿಂದ ಇಡ್ಲಿ, ದೋಸೆಯ ರುಚಿ ಕೆಡುತ್ತದೆ. ಆಗ ನಾವು ಬಯಸಿದಂತೆ ಅವು ಬರದಿದ್ದಾಗ ನಮಗೆ ಬೇಸರವಾಗುತ್ತದೆ. ಇಂತಹ ಸಮಯದಲ್ಲಿ ನಾವು ಆ ಹಿಟ್ಟನ್ನು ಎಸೆದುಬಿಡುತ್ತೇವೆ. ಆದರೆ ಹಿಟ್ಟನ್ನು ಎಸೆಯುವ ಬದಲಾಗಿ ಕೆಲವು ಸರಳ ಟ್ರಿಕ್ಸ್‌ ಬಳಸುವ ಮೂಲಕ ಬೇಸಿಗೆಯಲ್ಲೂ ಇಡ್ಲಿ, ದೋಸೆ ಹಿಟ್ಟು ಹುಳಿಯಾಗದಂತೆ ತಡೆಯಬಹುದು. ಇಡ್ಲಿ ದೋಸೆ ಹಿಟ್ಟು ಹುಳಿಯಾಗಿ ಹಾಳಾಗದಂತೆ ತಡೆಯಲು ಈ ಕೆಳಗಿನ ಸರಳ ವಿಧಾನಗಳನ್ನು ನೆನಪಿಡಿ. 

26
1. ಶುಂಠಿ ಮತ್ತು ಹಸಿರುಮೆಣಸಿನಕಾಯಿ ಪೇಸ್ಟ್

ಇಡ್ಲಿ ದೋಸೆ ಹಿಟ್ಟನ್ನು ಹುದುಗಲು ಇಟ್ಟಾಗ ಕೆಲವೊಮ್ಮೆ ಹಿಟ್ಟು ಅತಿಯಾಗಿ ಹುಳಿಯಾಗುತ್ತದೆ. ಅಂತಹ ಸಮಯದಲ್ಲಿ ಶುಂಠಿ ಮತ್ತು ಹಸಿರುಮೆಣಸಿನಕಾಯಿಯನ್ನು ಬಳಸಬೇಕು. ಹುಳಿಯಾದ ಹಿಟ್ಟಿಗೆ ಶುಂಠಿ ಮತ್ತು ಹಸಿಮೆಣಸಿನಕಾಯಿ ಪೇಸ್ಟ್ ಹಾಕುವುದರಿಂದ ಹಿಟ್ಟಿಗೆ ಒಳ್ಳೆಯ ರುಚಿ ಬರುತ್ತದೆ ಹಾಗೂ ಹಿಟ್ಟಿನ ಹುಳಿ ಅಂಶವೂ ದೂರವಾಗುತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೇ.. ಸ್ವಲ್ಪ ಶುಂಠಿ ಮತ್ತು ಹಸಿಮೆಣಸಿನಕಾಯಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು, ಈ ಪೇಸ್ಟ್ ಅನ್ನು ಹುಳಿಯಾದ ಹಿಟ್ಟಿಗೆ ಬೆರೆಸಬೇಕು. ಇದರಿಂದ ಶುಂಠಿ ಮತ್ತು ಹಸಿಮೆಣಸಿನಕಾಯಿ ಎರಡರ ರುಚಿಯೂ ಈ ಹಿಟ್ಟಿಗೆ ಸಿಗುತ್ತದೆ. ಪೇಸ್ಟ್ ಹಾಕಿದ ನಂತರ ಹಿಟ್ಟನ್ನು ಚೆನ್ನಾಗಿ ಕಲಕಬೇಕು.

36
2. ಸಕ್ಕರೆ ಅಥವಾ ಬೆಲ್ಲ

ಇಡ್ಲಿ ದೋಸೆ ಹಿಟ್ಟಿನ ಹುಳಿಯನ್ನು ಕಡಿಮೆ ಮಾಡಲು ನಾವು ಸಕ್ಕರೆ ಅಥವಾ ಬೆಲ್ಲವನ್ನು ಬಳಸಬಹುದು. ಇವೆರಡೂ ಪದಾರ್ಥಗಳಿಂದ ಹಿಟ್ಟಿನ ಹುಳಿ ಕಡಿಮೆಯಾಗುತ್ತದೆ ಮತ್ತು ರುಚಿಯೂ ಚೆನ್ನಾಗಿ ಬರುತ್ತದೆ. ಆದರೆ ಹುಳಿಯನ್ನು ಕಡಿಮೆ ಮಾಡಲು ಸಕ್ಕರೆ ಅಥವಾ ಬೆಲ್ಲವನ್ನು ಬಳಸುವಾಗ ಸರಿಯಾದ ಪ್ರಮಾಣದಲ್ಲಿ ಬಳಸಬೇಕು. ಇಲ್ಲದಿದ್ದರೆ ಇಡ್ಲಿ ದೋಸೆಯ ರುಚಿ ಕೆಡಬಹುದು. ಆದ್ದರಿಂದ ಮೊದಲು ಸ್ವಲ್ಪ ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ಹಿಟ್ಟಿನ ರುಚಿ ನೋಡಬೇಕು. ಪ್ರಮಾಣ ಕಡಿಮೆ ಅನಿಸಿದರೆ ಮತ್ತೆ ಸ್ವಲ್ಪ ಸಕ್ಕರೆ ಅಥವಾ ಬೆಲ್ಲ ಸೇರಿಸಿ ಕಲಕಬೇಕು.

46
3. ಅಕ್ಕಿ ಹಿಟ್ಟು ಅಥವಾ ರವೆ

ಹಿಟ್ಟಿನ ಹುಳಿಯನ್ನು ಕಡಿಮೆ ಮಾಡಲು ಹಿಟ್ಟಿಗೆ ಸ್ವಲ್ಪ ಅಕ್ಕಿ ಹಿಟ್ಟು ಅಥವಾ ಸಣ್ಣ ರವೆಯನ್ನು ಸೇರಿಸುವುದರಿಂದ ಹುಳಿ ಕಡಿಮೆಯಾಗುತ್ತದೆ. ಮತ್ತು ಇಡ್ಲಿಗೆ ಸ್ವಲ್ಪ ಗಟ್ಟಿತನವೂ ಬರುತ್ತದೆ. ಗಟ್ಟಿತನ ಬಂದಾಗ ಇಡ್ಲಿಗಳು ಮೃದುವಾಗಿ ಬರುತ್ತವೆ ಹಾಗೂ ದೋಸೆಗಳು ಕುರುಕುಲಾಗಿ ಮತ್ತು ಕ್ರಿಸ್ಪಿಯಾಗಿ ಬರಲು ಸಹಾಯವಾಗುತ್ತದೆ.

56
4. ತಾಜಾ ಹಿಟ್ಟನ್ನು ಬಳಸಿ

ಒಂದು ವೇಳೆ ಇಡ್ಲಿ ದೋಸೆ ಹಿಟ್ಟು ಅತಿಯಾಗಿ ಹುಳಿಯಾಗಿದ್ದರೆ, ನೀವು ಅದಕ್ಕೆ ಹೊಸದಾಗಿ ತಯಾರಿಸಿದ ತಾಜಾ ಹಿಟ್ಟನ್ನು ಸೇರಿಸಿ ಮಿಶ್ರಣ ಮಾಡಬಹುದು. ಇದರಿಂದ ಹಿಟ್ಟಿನ ಹುಳಿ ಅಂಶ ಕಡಿಮೆಯಾಗುತ್ತದೆ. ತಾಜಾ ಹಿಟ್ಟನ್ನು ಸೇರಿಸುವುದರಿಂದ ಹುಳಿ ರುಚಿಯನ್ನು ಸಮತೋಲನಗೊಳಿಸಬಹುದು ಮತ್ತು ಇಡ್ಲಿಯ ರುಚಿಯೂ ಚೆನ್ನಾಗಿರುತ್ತದೆ. ಈ ಪದ್ಧತಿಯಿಂದ ಇಡ್ಲಿಯ ಮೃದುತ್ವವೂ ಹಾಗೆಯೇ ಇರುತ್ತದೆ. 

66
5. ಹಿಟ್ಟು ತಯಾರಿಸುವಾಗ ತಣ್ಣೀರು ಬಳಸಿ

ಇಡ್ಲಿ ದೋಸೆ ಹಿಟ್ಟನ್ನು ತಯಾರಿಸುವಾಗ ನಾವು ನೀರನ್ನು ಬಳಸುತ್ತೇವೆ. ಈ ಹಿಟ್ಟು ತಯಾರಿಸುವಾಗ ಒಂದು ವೇಳೆ ನಾವು ಐಸ್‌ನ ತಣ್ಣೀರನ್ನು ಬಳಸಿದರೆ ಹಿಟ್ಟು ಅತ್ಯಂತ ಪರ್ಫೆಕ್ಟ್ ಆಗಿ ತಯಾರಾಗುತ್ತದೆ. ತಣ್ಣೀರು ಬಳಸುವುದರಿಂದ ಹಿಟ್ಟಿನ ಗುಣಮಟ್ಟ ಸುಧಾರಿಸುತ್ತದೆ. ಅದೇ ರೀತಿ ಹಿಟ್ಟು ನಯವಾಗಿ ಮತ್ತು ಮೃದುವಾಗಿ ಬರಲು ತಣ್ಣೀರು ಬಳಸಬೇಕು. ಹಿಟ್ಟು ತಯಾರಿಸುವಾಗ ಸಾಮಾನ್ಯ ತಾಪಮಾನದ ನೀರನ್ನು ಬಳಸಿದರೆ ಬ್ಯಾಕ್ಟೀರಿಯಾಗಳ ಬೆಳವಣಿಗೆ ಬೇಗನೆ ಆಗುತ್ತದೆ. ಇದರಿಂದ ಹಿಟ್ಟು ಬೇಗನೆ ಕೆಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ತಣ್ಣೀರು ಬಳಸಿದರೆ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯಬಹುದು ಮತ್ತು ಹಿಟ್ಟನ್ನು ದೀರ್ಘಕಾಲದವರೆಗೆ ಸ್ಟೋರ್ ಮಾಡಿದರೂ ಅದು ಕೆಡದಂತೆ ಚೆನ್ನಾಗಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories