ನಮ್ಮ ಮನೇಲಿ ಯಾರೂ ಓದಿಲ್ಲ, ನೀನೂ ಓದೋದು ನಿಲ್ಲಿಸು : ಪಕ್ಕದ್ಮನೆ ಯುವತಿ ಮೇಲೆ ಹಲ್ಲೆ

Published : Mar 03, 2026, 09:00 AM IST

ನಂಜನಗೂಡು ತಾಲೂಕಿನ ದೇವೀರಮ್ಮನಹಳ್ಳಿ ಪಾಳ್ಯದಲ್ಲಿ, ಪಿಯು ವಿದ್ಯಾರ್ಥಿನಿ ಪೂರ್ಣಿಮಾ ಮೇಲೆ ನೆರೆಮನೆಯವರು ಹಲ್ಲೆ ನಡೆಸಿದ್ದಾರೆ. 'ನಮ್ಮ ಮಕ್ಕಳು ಓದಿಲ್ಲ, ನೀನೂ ಓದಬಾರದು' ಎಂದು ಹೇಳಿ, ಪರೀಕ್ಷೆ ಬರೆದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.

PREV
14
ಓದೋದು ನಿಲ್ಸು

‘ನಮ್ಮ ಮನೇಲಿ ಯಾರೂ ಓದಿಲ್ಲ-ನೀನೂ ಓದೋದು ನಿಲ್ಸು’ ಎಂದು ಹೇಳಿ, ನೆರೆಯವರು ದ್ವಿತೀಯ ಪಿಯು ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಂಜನಗೂಡು ತಾಲೂಕಿನ ದೇವೀರಮ್ಮನಹಳ್ಳಿ ಪಾಳ್ಯದಲ್ಲಿ ನಡೆದಿದೆ.

24
ಪಿಯುಸಿ ವಿದ್ಯಾರ್ಥಿನಿ ಪೂರ್ಣಿಮಾ

ದೇವೀರಮ್ಮನಹಳ್ಳಿ ಪಾಳ್ಯ ಗ್ರಾಮದ ನಿವಾಸಿ, ಪಿಯುಸಿ ವಿದ್ಯಾರ್ಥಿನಿ ಪೂರ್ಣಿಮಾ ಹಲ್ಲೆಗೊಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಪೂರ್ಣಿಮಾ, ‘ನನ್ನ ಅಜ್ಜಿ ಲಕ್ಷ್ಮೀ ಜೊತೆ ವಾಸವಾಗಿದ್ದೇನೆ. ನೆರೆಮನೆಯ ಯೋಗೇಶ್‌ ಎಂಬುವರಿಗೂ, ನಮಗೂ ಹಳೆಯ ದ್ವೇಷವಿದೆ. (ಸಾಂದರ್ಭಿಕ ಚಿತ್ರ)

34
ದೊಣ್ಣೆಯಿಂದ ಹಲ್ಲೆ

ಕಳೆದ ಶನಿವಾರ ಮಧ್ಯಾಹ್ನ ಯೋಗೇಶ್‌ ಅವರು ಮನೆಯ ಇತರ 6 ಮಂದಿಯ ಜೊತೆ ನಮ್ಮ ಮನೆಗೆ ಆಗಮಿಸಿ, ನನಗೆ, ನನ್ನ ಅಜ್ಜಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ದೊಣ್ಣೆಯಿಂದ ಹೊಡೆದಿದ್ದಾರೆ ಎಂದು ದೂರಿನಲ್ಲಿ ಓದಿದ್ದಾರೆ. (ಸಾಂದರ್ಭಿಕ ಚಿತ್ರ)

ಇದನ್ನೂ ಓದಿ: 99 ದೇಶಗಳನ್ನು ಸುತ್ತಿದ ಬಳಿಕ Dr. Bro ಹಾದಿ ಹಿಡಿದ Flying Passport ಜೋಡಿ

44
ನಮ್ಮ ಮಕ್ಕಳು ಓದಿಲ್ಲ

ನಮ್ಮ ಮಕ್ಕಳು ಓದಿಲ್ಲ, ಆದ್ದರಿಂದ ನೀನು ಕೂಡ ಮುಂದೆ ಓದಬಾರದು. ನೀನೇನಾದರೂ ಪರೀಕ್ಷೆ ಬರೆದಲ್ಲಿ ನಿನ್ನನ್ನು ಲಾರಿ ಹತ್ತಿಸಿ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.(ಸಾಂದರ್ಭಿಕ ಚಿತ್ರ)

ಇದನ್ನೂ ಓದಿ: 80 ಕೆಜಿ ಭಾರ ಜಗ್ಗುವ ಪುಟಾಣಿ ಟ್ರ್ಯಾಕ್ಟರ್ ಕಂಡು ಹಿಡಿದ 8ನೇ ಕ್ಲಾಸ್‌ ಬಾಲ ವಿಜ್ಞಾನಿ

Read more Photos on
click me!

Recommended Stories