99 ದೇಶಗಳನ್ನು ಸುತ್ತಿದ ಬಳಿಕ Dr. Bro ಹಾದಿ ಹಿಡಿದ Flying Passport ಜೋಡಿ

Published : Mar 02, 2026, 04:44 PM IST

Flying Passport ಎಂದೇ ಖ್ಯಾತಿ ಪಡೆದಿರುವ ಕರ್ನಾಟಕದ ಜನಪ್ರಿಯ ಯೂಟ್ಯೂಬರ್ ಮತ್ತು ಟ್ರವೆಲ್ ಇನ್ಫ್ಲ್ಯುಯೆನ್ಸರ್ ಜೋಡಿ ಆಶಾ ಮತ್ತು ಕಿರಣ್ ಇದೀಗ ತಮ್ಮ ಹೊಸ ಟ್ರಾವೆಲ್ ಕಚೇರಿಯನ್ನು ಬೆಂಗಳೂರಲ್ಲಿ ಉದ್ಘಾಟನೆ ಮಾಡಿದ್ದಾರೆ. ಸಂಭ್ರಮದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. 

PREV
18
ಫ್ಲೈಯಿಂಗ್ ಪಾಸ್‌ಪೋರ್ಟ್

ಫ್ಲೈಯಿಂಗ್ ಪಾಸ್‌ಪೋರ್ಟ್ಎಂದೇ ಖ್ಯಾತಿ ಪಡೆದಿರುವ ಕರ್ನಾಟಕದ ಜೋಡಿ ಅಂದ್ರೆ ಅದು ಆಶಾ ಮತ್ತು ಕಿರಣ್. ಈ ಜೋಡಿ ಜೊತೆಯಾಗಿ ಹಲವು ದೇಶಗಳನ್ನು ಸುತ್ತಿ ಬಂದಿದ್ದಾರೆ. ಜನಪ್ರಿಯ ಯೂಟ್ಯೂಬರ್ ಮತ್ತು ಟ್ರವೆಲ್ ಇನ್ಫ್ಲ್ಯುಯೆನ್ಸರ್ ಆಗಿರುವ ಈ ಜೋಡಿ ಇದೀಗ ಗುಡ್ ನ್ಯೂಸ್ ಕೊಟ್ಟಿದ್ದಾರೆ.

28
ಡಾ ಬ್ರೋ ಹಾದಿಯಲ್ಲಿ ಫ್ಲೈಯಿಂಗ್ ಪಾಸ್‌ಪೋರ್ಟ್

ಫ್ಲೈಯಿಂಗ್ ಪಾಸ್‌ಪೋರ್ಟ್ ಜೋಡಿ ಇದೀಗ ಡಾ. ಬ್ರೋ ಹಾದಿಯಲ್ಲಿ ಸಾಗುತ್ತಿದ್ದಾರೆ. ಈ ಹಿಂದೆ ಡಾ. ಬ್ರೋ ದೇಶ ವಿದೇಶಗಳನ್ನು ಸುತ್ತಿದ ಬಳಿಕ ತಮ್ಮದೇ ಆದಾಗ ಗೋ ಪ್ರವಾಸ ಎನ್ನುವ ಟ್ರಾವೆಲ್ ಕಂಪನಿಯನ್ನು ಶುರು ಮಾಡಿದ್ದರು. ಇದೀಗ ಫ್ಲೈಯಿಂಗ್ ಪಾಸ್‌ಪೋರ್ಟ್ ಜೋಡಿ ಕೂಡ ಟ್ರಾವೆಲ್ ಕಂಪನಿ ಶುರುಮಾಡಿದೆ.

38
ಫ್ಲೈಯಿಂಗ್ ಪಾಸ್‌ಪೋರ್ಟ್ ಟೂರ್

ಆಶಾ ಮತ್ತು ಕಿರಣ್ ಜೋಡಿ ಇದೀಗ ಬೆಂಗಳೂರಿನಲ್ಲಿ ಫ್ಲೈಯಿಂಗ್ ಪಾಸ್‌ಪೋರ್ಟ್ ಟೂರ್ ಎನ್ನುವ ಕಂಪನಿ ಶುರು ಮಾಡಿದ್ದು. ಹೊಸ ಕಚೇರಿಯ ಉದ್ಘಾಟನೆ ಹಾಗೂ ಪೂಜೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲಿ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಕಂಪನಿ ಮೈಸೂರಿನಲ್ಲೂ ಶುರು ಮಾಡಲಿದ್ದಾರೆ.

48
ಕನ್ನಡಿಗರಿಗಾಗಿ ಮಾಡಿರುವ ಕಂಪನಿ

ಹೊಸ ಪಯಣಕ್ಕೆ ನಿಮ್ಮ ಆಶೀರ್ವಾದಗಳು ನಮ್ಮ ಮೇಲೆ ಹೀಗೆ ಇರಲಿ. Flying Passport Tours office opening in Bangalore. ನಮ್ಮ ಕನಸಿನ ಕೂಸಿಗೆ ಕನ್ನಡಿಗರ ಆಶೀರ್ವಾದಗಳು ಹೀಗೆ ಇರಲಿ. ಕನ್ನಡಿಗರಿಂದ ಕನ್ನಡಿಗರಿಗೋಸ್ಕರ ಮಾಡಿರುವ ಟ್ರಾವೆಲ್ ಕಂಪನಿ ನಿಮ್ಮ ಫ್ಲೈಯಿಂಗ್ ಪಾಸ್ಪೋರ್ಟ್ ಟೂರ್ಸ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

58
ಯಾರು ಈ ಕಿರಣ್- ಆಶಾ ಜೋಡಿ

ಕನ್ನಡಿಗರಾದ ಕಿರಣ್ ಮತ್ತು ಆಶಾ ಪ್ರವಾಸಿ ದಂಪತಿಗಳು, ವಿದೇಶಕ್ಕೆ ತೆರಳಿ ಅಲ್ಲಿಯ ಸಂಸ್ಕೃತಿಯನ್ನು ಅನಾವರಣ ಮಾಡುತ್ತಾರೆ. ಕನ್ನಡದಲ್ಲಿಯೇ ಪ್ರತಿಯೊಂದು ಮಾಹಿತಿಯನ್ನು ನೀಡಿ, ವಿದೇಶದಲ್ಲಿ ಕನ್ನಡದ ಸೌಗಂಧವನ್ನು ಹರಡಿ, ಹೋದಲೆಲ್ಲಾ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿ ಬಂದಿದ್ದಾರೆ ಕಿರಣ್ -ಆಶಾ ಜೋಡಿ.

68
ಸೋಶಿಯಲ್ ಮೀಡಿಯಾದಲ್ಲಿ ಫೇಮಸ್

ಫ್ಲೈಯಿಂಗ್ ಪಾಸ್‌ಪೋರ್ಟ್‌ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆ ಹೊಂದಿರುವ ಆಶಾ ಮತ್ತು ಕಿರಣ್ ಗೆ ಬರೋಬ್ಬರಿ ನಾಲ್ಕುವರೆ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಇನ್ನು ಯುಟ್ಯೂಬ್‌ನಲ್ಲಿ 7.36ಲಕ್ಷ ಸಬ್‌ಸ್ಕ್ರೈಬರ್ ಹೊಂದಿದ್ದಾರೆ.

78
99 ದೇಶ ಸುತ್ತಿದ ಜೋಡಿ

ಪ್ರಪಂಚದಲ್ಲಿರುವ ಒಟ್ಟು 197 ದೇಶಗಳಲ್ಲಿ ಈ ಜೋಡಿ ಇಲ್ಲಿವರೆಗೆ ಬರೋಬ್ಬರಿ 99 ದೇಶಗಳನ್ನು ಸುತ್ತಿ ಬಂದಿದ್ದಾರೆ. ದೇಶದ ಮೂಲೆ ಮೂಲೆಗೂ ತೆರಳಿ, ಅಲ್ಲಿನ ಕಲೆ ಸಂಸ್ಕೃತಿ, ಆಹಾರದ ಕುರಿತು ಸಂಪೂರ್ಣ ಮಾಹಿತಿ ನೀಡುತ್ತಾರೆ. ಜೊತೆಗೆ ಕೆಲಸವನ್ನು ಸಹ ಈ ಜೋಡಿ ಮಾಡುತ್ತಾರೆ.

88
ಅಭಿನಂದನೆ ಸಲ್ಲಿಸಿದ ತಾರೆಯರು

ಫ್ಲೈಯಿಂಗ್ ಪಾಸ್‌ಪೋರ್ಟ್‌ ಈ ಟೂರು ಕಂಪನಿ ಬೆಂಗಳೂರಿನಿಂದ ವಿಯೆಟ್ನಾಂ, ಈಜಿಪ್ಟ್, ಚೀನಾ, ಜಪಾನ್, ಯೂರೋಪ್ ಸೇರಿ ಹಲವು ರಾಷ್ಟ್ರಗಳಿಗೆ ಟೂರ್ ಪ್ಲಾನ್ ಮಾಡುತ್ತಿದ್ದು, ಹೊಸ ಕಂಪನಿಯ ಉದ್ಘಾಟನೆಗಾಗಿ ಜೋಡಿಗೆ, ಡಾ. ಬ್ರೋ, ಗ್ಲೋಬಲ್ ಕನ್ನಡಿಗ, ನಿರಂಜನ್ ದೇಶಪಾಂಡೆ, ಯಶಸ್ವಿನಿ ದೇಶಪಾಂಡೆ, ಧನರಾಜ್ ಆಚಾರ್ ಸೇರಿ ಹಲವರು ಶುಭಶಾಯ ತಿಳಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories