ವೃದ್ಧ ತಂದೆ-ತಾಯಿಯರನ್ನು ನೋಡಿಕೊಳ್ಳದ ಮಗನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಪೋಷಕರಿಂದ ಆಸ್ತಿ ಪಡೆದು ಅವರನ್ನು ಮನೆಯಿಂದ ಹೊರಹಾಕಲು ಯತ್ನಿಸಿದ ಆರೋಪದ ಮೇಲೆ, ಹಿರಿಯ ನಾಗರಿಕರ ಕಾಯ್ದೆ-2007ರ ಅಡಿಯಲ್ಲಿ ಈ ಶಿಕ್ಷೆ ವಿಧಿಸಲಾಗಿದೆ.
ಜುನ್ನರ್ (ಮಹಾರಾಷ್ಟ್ರ): ಮಕ್ಕಳು ವೃದ್ಧ ತಂದೆ ತಾಯಿಯರನ್ನು ನೋಡಿಕೊಳ್ಳದೆ ಬೀದಿಗೆ ಬಿಡುವ ಅಮಾನವೀಯ ಘಟನೆಗಳು ಹೆಚ್ಚುತ್ತಿರುವ ನಡುವೆಯೇ, ಮಹಾರಾಷ್ಟ್ರದ ಜುನ್ನತ್‌ನ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
24
ಜುನ್ನತ್‌ನ ಜಿಲ್ಲಾ ನ್ಯಾಯಾಲಯ
ವೃದ್ಧ ತಂದೆ ತಾಯಿಯನ್ನು ನೋಡಿಕೊಳ್ಳದ ಪುತ್ರನಿಗೆ 3 ತಿಂಗಳು ಜೈಲುವಾಸ ಹಾಗೂ 5,000 ರು. ದಂಡ ವಿಧಿಸಿ ಮಹಾರಾಷ್ಟ್ರದ ಜುನ್ನತ್‌ನ ಜಿಲ್ಲಾ ನ್ಯಾಯಾಲಯ ಕಠಿಣ ಸಂದೇಶ ರವಾನಿಸಿದೆ. ಇದರ ಜೊತೆಯಲ್ಲಿಯೂ ಆಸ್ತಿಯನ್ನ ವಶಪಡಿಸಿಕೊಳ್ಳಲಾಗಿದೆ.
34
ದೂರು ದಾಖಲಿಸಿದ್ದ ವೃದ್ಧ ದಂಪತಿ
‘ಇಬ್ಬರೂ ಮಕ್ಕಳು ತಮ್ಮ ಕೃಷಿಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಮೂಲಭೂತ ಆವಶ್ಯಕತೆಗಳನ್ನೂ ಒದಗಿಸದೆ ಮನೆಯಿಂದ ಹೊರಹಾಕಲು ಮುಂದಾಗಿದ್ದಾರೆ. ಚಿಕ್ಕ ಮಗ ನಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಮಾತು ಕೊಟ್ಟಿದ್ದರಿಂದ 51 ಗುಂಟೆ ಜಾಗವನ್ನು ಅವನ ಹೆಸರಿಗೆ ಮಾಡಿದ್ದೆವು. ಆದರೆ ಆತನೂ ಹೊರದಬ್ಬಿದ್ದಲ್ಲದೆ, ಹಣವನ್ನೂ ಪೀಕಿದ್ದಾನೆ’ ಎಂದು 70 ವರ್ಷದ ವೃದ್ಧ ದಂಪತಿ 2023ರ ಮೇ 13ರಂದು ನಾರಾಯಣಗಾಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ವೇಳೆ ಚಿಕ್ಕ ಪುತ್ರನ ನಡವಳಿಕೆ ಆಕ್ಷೇಪಾರ್ಹ ಎಂಬುದು ಸಾಬೀತಾಗಿದೆ. ಈ ಹಿನ್ನೆಲೆ ನ.10ರಂದು ಆತನನ್ನು ಬಂಧಿಸಿ ಯೆರವಾಡ ಜೈಲಿಗೆ ಕಳಿಸಲಾಗಿದೆ. ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಹಿತ ಕಾಯ್ದೆ-2007ರ ಅಡಿಯಲ್ಲಿ 3 ತಿಂಗಳು ಜೈಲು, 5,000 ರು. ದಂಡ ವಿಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ