ರಾಮ ಮಂದಿರದಲ್ಲಿ ನಾಳೆ ಮೋದಿಯಿಂದ ಕೇಸರಿ ಧ್ವಜಾರೋಹಣ, ಆಯೋಧ್ಯೆಯ ಹೊಸ ಫೋಟೋ

Published : Nov 24, 2025, 11:30 PM IST

ರಾಮ ಮಂದಿರದಲ್ಲಿ ನಾಳೆ ಮೋದಿಯಿಂದ ಕೇಸರಿ ಧ್ವಜಾರೋಹಣ, ಇಲ್ಲಿದೆ ಆಯೋಧ್ಯೆ ಫೋಟೋ, ರಾಮ ಮಂದಿರ ಕಾಮಗಾರಿ ಸಂಪೂರ್ಣವಾಗಿ ಮುಗಿದೆ. ಇದೀಗ ರಾಮ ಮಂದಿರ ಕಾಂಪ್ಲೆಕ್ಸ್, ಆಯೋಧ್ಯೆ ಮಂದಿರ ನೋಡಲು ಎರಡು ಕಣ್ಣು ಸಾಲದು.

PREV
17
ಕೇಸರಿ ಧ್ವಜಾರೋಹಣ

ಆಯೋಧ್ಯೆಯ ಭವ್ಯ ರಾಮ ಮಂದಿರ ಕಾಮಗಾರಿ ಸಂಪೂರ್ಣಗೊಂಡಿದೆ. ನಾಳೆ (ನ.25) ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರದಲ್ಲಿ ಕೇಸರಿ ಧ್ವಜಾರೋಹಣ ಮಾಡಲಿದ್ದಾರೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ. ರಾಮ ಮಂದಿರ ಸೇರಿದಂತೆ ಆಯೋಧ್ಯೆ ನಗರಿಯಲ್ಲಿ ಬಾರಿ ಭಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ.

27
ಕಂಗೊಳಿಸುತ್ತಿದೆ ರಾಮ ಮಂದಿರ

ಆಯೋಧ್ಯೆಯ ರಾಮ ಮಂದಿರದ ಎಲ್ಲಾ ಕಾಮಗಾರಿ ಪೂರ್ಣಗೊಂಡಿದೆ. ರಾಮ ಮಂದಿರ ಕಾಂಪ್ಲೆಕ್ಸ್ ಸೇರಿದಂತೆ ಉದ್ದೇಶಿತ ಯೋಜನೆಯ ಎಲ್ಲಾ ಕಾಮಗಾರಿಗಳು ಮುಗಿದಿದ. ಇದೀಗ ಆಯೋಧ್ಯೆ ಹಾಗೂ ರಾಮ ಮಂದಿರದ ನೋಟ ಶ್ರೀರಾಮನ ಕಾಲದ ಗೈತವೈಭಕ್ಕೆ ಕೊಂಡೊಯ್ಯಲಿದೆ.ಅಲಂಕಾರಕ್ಕೆ 100 ಟನ್ ಹೂವು ಬಳಕೆ ಮಾಡಲಾಗಿದೆ.

37
ಆವರಣದ ಹಲವು ದೇವಸ್ಥಾನಕ್ಕೆ ಮೋದಿ ಭೇಟಿ

ರಾಮ ಮಂದಿರ, ರಾಮ ಮಂದಿರದ ಆವರಣದಲ್ಲಿನ ಇತರ ದೇಗುಲ, ಕಾಂಪ್ಲೆಕ್ಸ್, ಕಲ್ಯಾಣಿ ಸೇರಿದಂತೆ ಎಲ್ಲವೂ ಇದೀಗ ಅತ್ಯಂತ ಸುಂದರವಾಗಿ ಕಂಗೊಳಿಸುತ್ತಿದೆ.ಮೋದಿ ಬೇಟಿ ಹಿನ್ನಲೆಯಲ್ಲಿ ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ ಸೇರಿದಂತೆ ಸಪ್ತಮಂದಿರಗಳನ್ನ ಅಲಂಕರಿಸಲಾಗಿದೆ. ಎಲ್ಲೆಡೆ ದೀಪಾಲಂಕಾರ, ಹೂವಿನ ಅಲಂಕಾರ ಮಾಡಲಾಗಿದೆ. ಇದೇ ವೇಳೆ ಮೋದಿ ಶೇಶವತಾರ ಮಂದಿರ, ಅನ್ನಪೂರ್ಣ ಮಂದಿರಕ್ಕೂ ಭೇಟಿ ನೀಡಲಿದ್ದಾರೆ.

47
ಧ್ವಜಾರೋಹಣ ಬಳಿಕ ಮೋದಿ ಭಾಷಣ

ನಾಳೆ ಮಧ್ಯಾಹ್ನ ಪ್ರಧಾನಿ ಮೋದಿ ಕೇಸರಿ ಧ್ವಜಾರೋಹಣ ಮಾಡಲಿದ್ದಾರೆ. ಈಗಾಗಲೇ ಭಕ್ತರು ರಾಮ ಮಂದಿರ ತಲುಪಿದ್ದಾರೆ. ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಕ್ತರು ಆಗಮಿಸಿದ್ದಾರೆ. ಧ್ವಜಾರೋಹಣ ಬಳಿಕ ಪ್ರಧಾನಿ ಮೋದಿ ಭಕ್ತರನ್ನುದ್ದೇಶಿ ಮಾತನಾಡಲಿದ್ದಾರೆ.

57
ಭಾರಿ ಭದ್ರತೆ

ಮೋದಿ ಆಗಮನದಿಂದ ಭಾರಿ ಬಿಗಿ ಭದ್ರತ ಕೈಗೊಳ್ಳಲಾಗಿದೆ. 6,970 ಭದ್ರತಾ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಎಟಿಎಸ್, ಎನ್‌ಎಸ್‌ಜಿ ಸ್ನೈಪರ್ಸ್, ಸೈಬರ್ ಪರಿಣಿತರು ಸೇರಿದಂತೆ ಹಲವು ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಈಗಾಗಲೇ ನಗರದಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಭಾರಿ ಭದ್ರತೆ

67
2024ರಲ್ಲಿ ಉದ್ಘಾಟನೆಗೊಂಡಿದ್ದ ರಾಮ ಮಂದಿರ

2024ರಲ್ಲಿ ಆಯೋಧ್ಯೆ ರಾಮ ಮಂದಿರ ಉದ್ಘಾಟನೆಗೊಂಡಿತ್ತು. ಶ್ರೀ ರಾಮ ಲಲ್ಲಾ ಪ್ರಾಣಪ್ರತಿಷ್ಠೆ ನೇರವೇರಿತ್ತು. ಬರೋಬ್ಬರಿ 500 ವರ್ಷಗಳ ಸತತ ಹೋರಾಟದ ಬಳಿಕ ಭವ್ಯ ರಾಮ ಮಂದಿರ ಭಕ್ತರ ಪ್ರವೇಶಕ್ಕೆ ಮುಕ್ತವಾಗಿತ್ತು. ಔರಂಗಜೇಬ್ ಕೆಡವಿದ್ದ ರಾಮ ಮಂದಿರ ಮತ್ತೆ ತಲೆ ಎತ್ತಿ ನಿಲ್ಲುವ ಮೂಲಕ ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಯ ಪ್ರತೀಕವಾಗಿ ಕಂಗೊಳಿಸುತ್ತಿದೆ.

2024ರಲ್ಲಿ ಉದ್ಘಾಟನೆಗೊಂಡಿದ್ದ ರಾಮ ಮಂದಿರ

77
2020ರಲ್ಲಿ ಭೂಮಿ ಪೂಜೆ ಮಾಡಿದ್ದ ಮೋದಿ

ಆಯೋಧ್ಯೆ ರಾಮ ಮಂದಿರ ಕುರಿತು ಸುಪ್ರೀಂ ಕೋರ್ಟ್‌ನಲ್ಲಿದ್ದ ಸುದೀರ್ಘ ವರ್ಷಗಳ ಕೇಸ್ ಇತ್ಯರ್ಥಗೊಂಡಿತ್ತು. ಸುಪ್ರೀಂ ಕೋರ್ಟ್ ದೇಗುಲ ನಿರ್ಮಾಣಕ್ಕೆ ಅನುಮತಿ ನೀಡುತ್ತಿದ್ದಂತೆ 2020ರಲ್ಲಿ ಪ್ರಧಾನಿ ಮೋದಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.

Read more Photos on
click me!

Recommended Stories