ಸ್ಮೃತಿ-ಪಲಾಶ್ ಮದುವೆ ಮುಂದೂಡಿಕೆ ಚರ್ಚೆ ನಡುವೆ ಅಚ್ಚರಿ ಹೇಳಿಕೆ ಕೊಟ್ಟ ಪಲಾಶ್ ತಾಯಿ

Published : Nov 25, 2025, 04:31 PM IST

Smriti Mandhana Wedding Postponed: ಪಲಾಶ್ ಮುಚ್ಚಲ್ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರಿಗೆ ಏನಾಯ್ತು ಎಂಬುದು ಸ್ಪಷ್ಟವಾಗಿಲ್ಲ. ಈ ಮಧ್ಯೆ ಸ್ಮೃತಿ ತಮ್ಮ ಇನ್‌ಸ್ಟಾಗ್ರಾಮ್‌ನಿಂದ ಪಲಾಶ್ ಅವರೊಂದಿಗಿರುವ ಎಲ್ಲಾ ಫೋಟೋಗಳು ಮತ್ತು ವಿಡಿಯೋ ಸಹ ಡಿಲೀಟ್ ಮಾಡಿದ್ದಾರೆ.  

PREV
16
ವಿವಾಹ ಮುಂದೂಡಿಕೆ

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಮತ್ತು ಇಂದೋರ್ ಮೂಲದ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ವಿವಾಹ ನವೆಂಬರ್ 23 ರಂದು ನಿಗದಿಯಾಗಿತ್ತು. ಆದರೆ ಸ್ಮೃತಿ ತಂದೆ ಶ್ರೀನಿವಾಸ್ ಮಂಧಾನಗೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ವಿವಾಹವನ್ನು ಮುಂದೂಡಲಾಗಿದೆ.

26
ಪಲಾಶ್ ಸಹೋದರಿ ಹೇಳಿದ್ದೇನು?

ಈ ಮಧ್ಯೆ ವರನ ಸಹೋದರಿ ಪಾಲಕ್ ಅವರು "ಸ್ಮೃತಿ ತಂದೆಯ ಅನಾರೋಗ್ಯದ ಕಾರಣದಿಂದಾಗಿ ಸ್ಮೃತಿ ಮತ್ತು ಪಲಾಶ್ ಅವರ ವಿವಾಹವನ್ನು ಸದ್ಯಕ್ಕೆ ಮುಂದೂಡಲಾಗಿದೆ. ಈ ಸೂಕ್ಷ್ಮ ಸಮಯದಲ್ಲಿ ಎರಡೂ ಕುಟುಂಬಗಳ ಗೌಪ್ಯತೆಯನ್ನು ನೀವೆಲ್ಲರೂ ಗೌರವಿಸಬೇಕೆಂದು ನಾವು ವಿನಂತಿಸುತ್ತೇವೆ" ಎಂದು ಹೇಳಿಕೆ ನೀಡಿದ್ದಾರೆ. 

36
ಏನಾಯ್ತು ಗೊತ್ತಿಲ್ಲ!

ಮಾಹಿತಿಯ ಪ್ರಕಾರ, ಪಲಾಶ್ ಮುಚ್ಚಲ್ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರಿಗೆ ಏನಾಯ್ತು ಎಂಬುದು ಸ್ಪಷ್ಟವಾಗಿಲ್ಲ. ಈ ಮಧ್ಯೆ ಸ್ಮೃತಿ ತಮ್ಮ ಇನ್‌ಸ್ಟಾಗ್ರಾಮ್‌ನಿಂದ ಪಲಾಶ್ ಅವರೊಂದಿಗಿರುವ ಎಲ್ಲಾ ಫೋಟೋಗಳು ಮತ್ತು ವಿಡಿಯೋ ಸಹ ಡಿಲೀಟ್ ಮಾಡಿದ್ದಾರೆ.

46
ಭೇಟಿಗೆ ಕಾರಣ ಸ್ಪಷ್ಟವಾಗಿಲ್ಲ

ಮಂಗಳವಾರ ಬೆಳಗ್ಗೆ ಮುಂಬೈನ ಎಸ್‌ಆರ್‌ವಿ ಆಸ್ಪತ್ರೆಯ ಹೊರಗೆ ಗಾಯಕಿ ಪಾಲಕ್ ಮುಚ್ಚಲ್ ಕಾಣಿಸಿಕೊಂಡಿದ್ದರು. ಆದರೆ ಅವರ ಭೇಟಿಗೆ ಕಾರಣ ಸ್ಪಷ್ಟವಾಗಿಲ್ಲ.

56
ಪಲಾಶ್ ತಾಯಿ ಹೇಳಿದ್ದೇನು?

ಇದೀಗ ಪಲಾಶ್ ಅವರ ತಾಯಿ ಅಮಿತಾ ಮಾಧ್ಯಮಗಳಿಗೆ, ಪಲಾಶ್ ಸ್ಮೃತಿಯ ತಂದೆಗೆ ತುಂಬಾ ಆಪ್ತರಾಗಿದ್ದರು. ಆದ್ದರಿಂದ ಮದುವೆಯ ಯಾವುದೇ ವಿಧಿವಿಧಾನಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಇದರ ಮಧ್ಯೆ ಪಲಾಶ್ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು. ನಾಲ್ಕು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಇರಿಸಲಾಯಿತು. IV ಡ್ರಿಪ್ ನೀಡಲಾಯಿತು. ಇಸಿಜಿ ಮತ್ತು ಇತರ ಪರೀಕ್ಷೆಗಳನ್ನು ಮಾಡಲಾಯಿತು. ಸದ್ಯ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಿದೆ. ಆದರೆ ಪಲಾಶ್ ತುಂಬಾ ಒತ್ತಡಕ್ಕೊಳಗಾಗಿದ್ದಾರೆ. ಪಲಾಶ್ ಮತ್ತು ಸ್ಮೃತಿ ಇಬ್ಬರೂ ಪ್ರಸ್ತುತ ತುಂಬಾ ಭಾವನಾತ್ಮಕ ಒತ್ತಡದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

66
ಟ್ರೋಲ್ ಆದ ಪಲಾಶ್

ಅಷ್ಟೇ ಅಲ್ಲ, ಸಾಮಾಜಿಕ ಮಾಧ್ಯಮದಲ್ಲಿ ಪಲಾಶ್ ಅವರನ್ನು ಟ್ರೋಲ್ ಮಾಡಲಾಗುತ್ತಿದ್ದು, ಅನೇಕ ಬಳಕೆದಾರರು ಸ್ಮೃತಿಯನ್ನು ಮಾತ್ರ ಸಪೋರ್ಟ್ ಮಾಡುತ್ತಿದ್ದಾರೆ. "ಸ್ಮೃತಿ ವಿಶ್ವಕಪ್ ಗೆದ್ದ ಬಲಿಷ್ಠ ಮಹಿಳೆ, ಆದರೆ ಈ ದ್ರೋಹವನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ" ಎಂದು ಹೇಳುತ್ತಿದ್ದಾರೆ. ಆದರೆ ಸ್ಮೃತಿ ಅಥವಾ ಪಲಾಶ್ ಈ ವಿಷಯದ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಪಲಾಶ್‌ಗೆ ಆರೋಗ್ಯ ಸಮಸ್ಯೆಗಳಿದ್ದು, ಇದು ಆಸ್ಪತ್ರೆಗೆ ದಾಖಲಾಗಲು ಕಾರಣವಾಯಿತು. ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂಬ ಸುದ್ದಿ ಬಂದಿದೆ.

Read more Photos on
click me!

Recommended Stories