IAS, IPS ಅಧಿಕಾರಿಗಳೇ ಅಸೂಯೆಪಡುವಷ್ಟು ಸಂಬಳ ಪಡೆಯುವ ಟೀ ಶಾಪ್ ಉದ್ಯೋಗಿ; ಆ ಹೋಟೆಲ್ ಯಾವುದು?

Published : Apr 20, 2026, 02:31 PM IST

ಒಂದು ಟೀ ಅಂಗಡಿಯಲ್ಲಿ ಕೆಲಸ ಮಾಡುವ ಉದ್ಯೋಗಿಗೆ ಸಾಮಾನ್ಯವಾಗಿ ಎಷ್ಟು ಸಂಬಳ ಇರಬಹುದು? 5,000 ಅಥವಾ 10,000 ರೂಪಾಯಿ. ಹೆಚ್ಚೆಂದರೆ 20,000. ಕೆಫೆಯ ಉದ್ಯೋಗಿಯೊಬ್ಬರು ತಿಂಗಳಿಗೆ 5 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ! ಆ ಹೋಟೆಲ್ ಯಾವುದು ಗೊತ್ತಾ?

PREV
14
ಟೀ ಶಾಪ್ ಉದ್ಯೋಗಿ ಸಂಬಳ

ಹೈದರಾಬಾದ್ ಅಂದಾಕ್ಷಣ ಚಾರ್ಮಿನಾರ್, ಹುಸೇನ್ ಸಾಗರ್, ಹೈಟೆಕ್ ಸಿಟಿ ನೆನಪಾಗುತ್ತಿತ್ತು. ಆದರೆ ಈಗ ಕೆಫೆ ನಿಲೋಫರ್ ಕೂಡ ಆ ಸಾಲಿಗೆ ಸೇರಿದೆ. ಇಲ್ಲಿ ಒಂದು ಕಪ್ ಚಹಾಕ್ಕೆ 250 ರೂ., ಸಾವಿರ ರೂಪಾಯಿಯ ಚಹಾ ಕೂಡ ಲಭ್ಯ. ಇಲ್ಲಿನ ಬೆಲೆಗಳು ಹೀಗಿರುವಾಗ, ಉದ್ಯೋಗಿಗಳ ಸಂಬಳವೂ ಅದೇ ಮಟ್ಟದಲ್ಲಿರುತ್ತದೆ. ಕೆಫೆ ಮಾಲೀಕ ಬಾಬುರಾವ್ ಅವರ ಮಗ ಶಶಾಂಕ್, ತಮ್ಮ ಉದ್ಯೋಗಿಗಳ ಸಂಬಳದ ಬಗ್ಗೆ ಇತ್ತೀಚೆಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. 

24
ಕೆಫೆ ನಿಲೋಫರ್

ಸಾಮಾನ್ಯವಾಗಿ ಟೀ ಅಂಗಡಿಗಳಲ್ಲಿ ಕೆಲಸ ಮಾಡುವವರಿಗೆ ತಿಂಗಳಿಗೆ 5,000 ಅಥವಾ 10,000 ರೂ. ಸಂಬಳ ಇರುತ್ತದೆ. ದೊಡ್ಡ ಕಾಫಿ ಶಾಪ್‌ಗಳಲ್ಲಿ 15,000 ದಿಂದ 25,000 ರೂ. ಇರಬಹುದು. ಆದರೆ, ಹೈದರಾಬಾದ್‌ನ ಕೆಫೆ ನಿಲೋಫರ್‌ನಲ್ಲಿ ಅತಿ ಹೆಚ್ಚು ಸಂಬಳ ವಾರ್ಷಿಕ 60 ಲಕ್ಷ ರೂಪಾಯಿ! ಅಂದರೆ ತಿಂಗಳಿಗೆ ಸುಮಾರು 5 ಲಕ್ಷ ರೂಪಾಯಿ.

ಐಎಎಸ್‌, ಐಪಿಎಸ್‌ ಅಧಿಕಾರಿಗಳಿಗಿಂತ, ಅಷ್ಟೇ ಯಾಕೆ ಟಾಪ್ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗಿಂತಲೂ ಹೆಚ್ಚು ಸಂಬಳವನ್ನು ಇಲ್ಲಿನ ಕೆಲ ಉದ್ಯೋಗಿಗಳು ಪಡೆಯುತ್ತಿದ್ದಾರೆ. ಇಷ್ಟು ಸಂಬಳ ಕೊಡುತ್ತಾರೆ ಎಂದರೆ, ಈ ಕೆಫೆಯ ಆದಾಯ ಯಾವ ಮಟ್ಟದಲ್ಲಿರಬಹುದು ಎಂದು ನೀವೇ ಊಹಿಸಬಹುದು.

34
ಕೆಫೆ ನಿಲೋಫರ್ ಉದ್ಯೋಗಿಗಳ ಶೈಕ್ಷಣಿಕ ವಿದ್ಯಾರ್ಹತೆ

ಕೆಫೆ ನಿಲೋಫರ್‌ನಲ್ಲಿನ ಸಂಬಳದ ಬಗ್ಗೆ ಕೇಳಿ ನಿಮಗೂ ಅಲ್ಲಿ ಕೆಲಸ ಮಾಡುವ ಆಸೆ ಮೂಡಿದೆಯೇ? ಇಲ್ಲಿ ಮ್ಯಾನೇಜ್‌ಮೆಂಟ್ ಮಟ್ಟದ ಹುದ್ದೆಗಳಿಗೆ ಎಂಬಿಎ, ಬಿ.ಟೆಕ್‌ನಂತಹ ಉನ್ನತ ಶಿಕ್ಷಣ ಪಡೆದವರನ್ನು ಆಯ್ಕೆ ಮಾಡಲಾಗುತ್ತದೆ. ಇವರಿಗೆ ಲಕ್ಷಗಳಲ್ಲಿ ಸಂಬಳ ಇರುತ್ತದೆ. 

ಇನ್ನು ಸರ್ವೀಸ್, ಕ್ಯಾಷಿಯರ್, ಕಿಚನ್ ವಿಭಾಗಗಳಲ್ಲಿಯೂ ಉದ್ಯೋಗಾವಕಾಶಗಳಿವೆ. ಹೋಟೆಲ್ ಮ್ಯಾನೇಜ್‌ಮೆಂಟ್, ಪದವಿ ಮುಗಿಸಿದವರಿಗೆ ಇಲ್ಲಿ ಅವಕಾಶ ನೀಡಲಾಗುತ್ತದೆ. ಇವರಿಗೆ ತಿಂಗಳಿಗೆ 20,000 ದಿಂದ 30,000 ರೂಪಾಯಿವರೆಗೆ ಸಂಬಳ ಸಿಗುತ್ತದೆ.

ಇದನ್ನೂ ಓದಿ: ಅಕ್ಷಯ ತೃತೀಯ ಮರುದಿನವೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ; ಬೆಂಗಳೂರಿನಲ್ಲಿ ಎಷ್ಟಿದೆ ದರ?

44
ಕೆಫೆ ನಿಲೋಫರ್ ಮಾಲೀಕ ಬಾಬುರಾವ್

ಕೆಫೆ ನಿಲೋಫರ್ ಮಾಲೀಕ ಬಾಬುರಾವ್ ಅವರಿಗೆ ಅಕ್ಷರ ಜ್ಞಾನವೇ ಇರಲಿಲ್ಲ. ಕುಗ್ರಾಮವೊಂದರಲ್ಲಿ ಹುಟ್ಟಿ, ಬದುಕು ಕಟ್ಟಿಕೊಳ್ಳಲು ಹೈದರಾಬಾದ್‌ಗೆ ಬಂದು ಟೀ ಹೋಟೆಲ್‌ನಲ್ಲಿ ಟೇಬಲ್ ಕ್ಲೀನರ್ ಆಗಿ ಕೆಲಸಕ್ಕೆ ಸೇರಿದರು. ಕಷ್ಟಪಟ್ಟು ದುಡಿದು, ರೂಪಾಯಿ ರೂಪಾಯಿ ಕೂಡಿಟ್ಟು 1978ರಲ್ಲಿ ಲಕ್ಡಿಕಾಪೂಲ್‌ನಲ್ಲಿ 'ಕೆಫೆ ನಿಲೋಫರ್' ಅನ್ನು ಪ್ರಾರಂಭಿಸಿದರು. 

ಹಂತ ಹಂತವಾಗಿ ಬೆಳೆದು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಪ್ರಸ್ತುತ ಹಿಮಾಯತ್ ನಗರ, ಬಂಜಾರಾ ಹಿಲ್ಸ್, ಹೈಟೆಕ್ ಸಿಟಿಯಲ್ಲೂ ಬ್ರಾಂಚ್‌ಗಳಿವೆ.

ಇದನ್ನೂ ಓದಿ:  ಏಷ್ಯಾದಲ್ಲೇ ಬೆಂಗಳೂರಿಗೆ ಟಾಪ್ ಸ್ಥಾನ! ಸಿಲಿಕಾನ್ ಸಿಟಿ ನಂತ್ರದ ಸ್ಥಾನದಲ್ಲಿ ಮುಂಬೈ, ಚೆನ್ನೈ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories